Select Page

ಮಧು ಕಾಲೇಜಿಗೆ ಹೋಗುವಾಗ ದಾರಿಯಲ್ಲಿ ರಪ್ಪನೆ ಒಂದು ಕಾರು ಬಂದು  ನಿಂತಿತು. ಮಧು ಗಾಬರಿಯಿಂದ ನೋಡಿದಾಗ ಪಕ್ಕದ ಊರಿನ 35 ವಯಸ್ಸಿನ ಮನುಷ್ಯ.  ಅವನ ಹೆಸರು ಹೇಮಂತ್, ಮಧು  ಅವನನ್ನು ನೋಡಿದ್ದಾಳೆ ಅದರೆ ಪರಿಚಯವಿಲ್ಲ.

ಹೇಮಂತ್  ಚನ್ನಾಗಿ ಓದಿ ಒಳ್ಳೆ ಕೆಲಸದಲ್ಲಿದ್ದ.   ಇದಿಷ್ಟು ಮಧುಗೆ ಹೇಮಂತ್ ಬಗೆಗೆ ತಿಳಿದಿರುವ ವಿಚಾರ. ಆಗ ಹೇಮಂತ್ ತನ್ನನ್ನು ಅವನೇ  ಮಧುಗೆ ಪರಿಚಯಿಸಿಕೊಂಡ,  ನಾನು ಹೇಮಂತ್ ನಿಮ್ಮ ಪಕ್ಕದ  ಊರಿನವನು,  ನಾನು ಡಬಲ್ ಡಿಗ್ರಿ ಮುಗಿಸಿ,  ಒಳ್ಳೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆನೆ, 

 ಹಾಗೆ ಹೀಗೆ ಎಂದು ಪರಿಚಯ ಮಾಡಿಕೊಂಡ. ಮಧುಗೆ ಚೆನ್ನಾಗಿ ಓದಬೇಕು ಮುಂದೆ ಒಳ್ಳೇ  ಭವಿಷ್ಯವಿದೆ , ಎಂದು  ಸಲಹೆ ನೀಡಿದ. ಅವನಾಗೆ ಮಾತಾಡಿದ್ದಕ್ಕೆ  ತಲೆ ಅಲ್ಲಾಡಿಸಿದ ಮಧು ನಾನಿನ್ನೂ ಹೋಗಿಬರುವೆ ಕಾಲೇಜಿಗೆ ಟೈಮ್ ಆಯಿತು ಎಂದು ಹೇಳಿದಳು. ಅದಕ್ಕೇ ಹೇಮಂತ್ ನಾನು ಕೂಡ ನಿನ್ನ ಕಾಲೇಜ್ ಇರುವ ಕಡೆಗೆ ಹೋಗುತ್ತಿದ್ದೆನೆ, 

ಬಾ ಕಾರು ಹತ್ತಿ ಕುಳಿತುಕೊ, ನಾನು ನಿನ್ನನ್ನು ಕಾಲೇಜಿಗೆ ಬಿಡುತ್ತೇನೆ ಎಂದ. ಮಧು ಇಲ್ಲ ಬೇಡ ನಿಮಗೇಕೆ ತೊಂದರೆ,  ನಾನು ಬಸ್ಸಿನಲ್ಲಿಯೇ ಹೋಗುತ್ತೇನೆ ಎಂದಳು. ಇದಕ್ಕೆ ಒಪ್ಪದ ಹೇಮಂತ್ ಅವಳನ್ನು ಹೇಗೊ ಒಪ್ಪಿಸಿ ಕಾರ್ ನಲ್ಲಿ ಕಾಲೇಜಿಗೆ ಡ್ರಾಪ್ ಮಾಡಿದ.

 ಆಗಾಗ್ಗೆ ಮಧುವನ್ನ ಕಾಲೇಜಿಗೆ ಡ್ರಾಪ್,  ಪೀಕಪ್ ಮಾಡುತ್ತಿದ್ದ.  ಮಧುಗೆ ಒಂದು ಆಸೆ, ಹೇಮಂತ್ ನ ಸ್ನೇಹ ಬೆಳೆಸಿಕೊಂಡರೆ, ಓದುವ ವಿಷಯದಲ್ಲಿ ನನಗೆ ಸಹಾಯವಾಗುತ್ತದೆ. ಮತ್ತು ಓದು ಮುಗಿದ ನಂತರ ಕೆಲಸಕ್ಕೆ ಸೇರಲು ಕೂಡ ಸಹಾಯವಾಗುತ್ತದೆ. ಎಂದು ತಿಳಿದು ಸ್ನೇಹ ಬೆಳೆಸಿದಳು…………                                                  

     ಮಧು ಮತ್ತೆ ಹೇಮಂತ್ ನಡುವೆ ಪೋನ್ ನಂಬರ್ ಎಕ್ಸ್‌ ಚೆಂಜ್ ಆಯಿತು. ಆಗ ಹೇಮಂತ್  ಕಡೆಯಿಂದ ಆಗಾಗ್ಗೆ msg ಬರಲು ಆರಂಭವಾಯಿತು,  hi, good morning,   Gd evng,  Gd nt , wt r u doing,?  ಹೀಗೆ,  ಮಧು ಕೂಡ ಅದಕ್ಕೆ reply ಮಾಡ ತೊಡಗಿದಳು.

 ಹಾಗೆ ಕಾಲೇಜಿಗೆ pickup,  drop ಎಲ್ಲಾವು ನಡೀತಾ ಇತ್ತು.  ಒಂದು ದಿನ ಹೇಮಂತ್ ಮಧುಗೆ I love you ಎಂದು msg ಮಾಡಿದ ,  ಮಧು ಕೇಳಿದಳು. ಏನಿದು I love you ಎಂದು msg ಮಾಡಿದ್ದಿರಾ ,  ತಮಾಷೆ ಮಾಡತಾ ಇದೀರಾ ಎಂದು.  ಹೇಮಂತ್ ತಮಾಷೆ ಅಲ್ಲ,  ನಾ ನಿನ್ನ  ನಿಜವಾಗಲು ಮನಸಾರೆ ಪ್ರೀತಿ ಮಾಡ್ತಾ ಇದೀನಿ. 

 ನಿನ್ನ ಎದುರು ಹೇಳಕ್ಕೆ ಹಾಗದೆ msg ಮುಖಾಂತರ propose ಮಾಡದೇ,  ನನ್ನ proposalana OK ಮಾಡು please ಮಧು ಎಂದ………    

ಮಧು ಈ  ಪ್ರೀತಿ ಪ್ರೇಮ ಇದೆಲ್ಲಾ ಬೇಡ, ನಾವು friends ಆಗಿ ಇರೋಣ ಅಂದಳು , ಇದಕ್ಕೆ ಒಪ್ಪದ ಹೇಮಂತ್,  ಇಲ್ಲ ನಾನು ನಿನ್ನ school day’sಯಿಂದನೇ,  ನಿನಗೆ ಹೇಳದೇನೆ ತುಂಬಾ ಪ್ರೀತಿ ಮಾಡತಾ ಇದೀನಿ.

 ನಿನ್ನ ಪ್ರೀತಿಗಾಗಿನೇ ನಿನ್ನ ಸ್ನೇಹ ಬೆಳೆಸಿದೆ ಅಂದ. ಮಧು ಅವನ ಮಾತಿಗೆ  confuse  ಆಗಿ,  ಇಲ್ಲ ನಾವು ಬೇರೆ ಬೇರೆ ಜಾತಿ ನಮ್ಮಿಬ್ಬರ ಮಧ್ಯೆ ಪ್ರೀತಿ ಪ್ರೇಮ ಎಷ್ಟು ಚಂದ,  ಮುಂದೆ ಸಮಸ್ಯೆ ಬಂದರೆ ಇದೆಲ್ಲಾ ಬೇಕಾ ಎಂದು ಕೇಳಿದಳು. ಹೇಮಂತ್ ಅದಕ್ಕೆ ಏನಿದು ಮಧು educated ಆಗಿ ಜಾತಿ ಅದು ಇದು  ಅಂತ ಮಾತಾಡ್ತಾದೀಯಾ,  ಇದು ತಪ್ಪಲ್ಲವೇ, 

 ಪ್ರೀತಿ ಪ್ರೇಮ.  ಜಾತಿ,  ಆಸ್ತಿ ಅಂತಸ್ತನ್ನ  ಮೀರಿದ್ದು ಅಂತ ಗೊತ್ತಿಲ್ಲವಾ,  ಎಂದು ಕೇಳಿದ.ಮಧು ಅದೆಲ್ಲಾ ಗೊತ್ತು ಆದರೆ. ಎನ್ನುವಾಗ, ಹೇಮಂತ್ ಸರಿ ಬಿಡು ಮಧು ನಿನಗೆ ನನ್ನ ಮೇಲೆ,  ನನ್ನ  ಪ್ರೀತಿ ಮೇಲೆ ನಂಬಿಕೆ ಇಲ್ಲ. ಅದರಿಂದ ಈ ವಿಷಯನ ಇಲ್ಲಿಗೆ ಬೀಡೊಣ ಎಂದು ಹೇಳಿ ಹೊರಟುಬಿಟ್ಟ.

 ಒಂದು ವಾರ ಮಧು ಕಣ್ಣಿಗೆ ಬೀಳಲೆ ಇಲ್ಲ.  ಮಧುಗೆ Confuse ಆಗಿದೆ,  ಹೇಮಂತ್,  ಆಡಿದ, ಮಾತುಗಳನ್ನು ಮೆಲುಕು ಹಾಕುತ್ತಾ, ಅವನನ್ನ ನಂಬಲು ಆರಂಭಿಸಿದಳು.  ಹೇಮಂತ್ ಚೆನ್ನಾಗಿ ಓದಿದ್ದಾನೆ. ಒಳ್ಳೆ ಕೆಲಸ ಕೂಡ ಇದೆ. ನನ್ನ ಚಿಕ್ಕ ವಯಸ್ಸಿಂದುನು ಪ್ರೀತಿ ಮಾಡ್ತಾ ಇದಾನೆ,  ಅವನ ಪ್ರೀತಿನ ಯಾಕೆ ಒಪ್ಪಿಕೊಬಾರದು ಅಂತ ಚಿಂತೆ ಮಾಡುತ್ತ ಇದ್ದಳು. ಹೇಮಂತ್ ಕೂಡ 2 , 3 ದಿನ ಮಧು ಕಣ್ಣಿಗೆ ಬೀಳಲೆ ಇಲ್ಲ.

 ಮಧುಗೆ ಅವನ ನೆನಪು ಕಾಡುತ್ತಾ ಇದೆ,  ಅವನನ್ನು  ನೋಡಬೇಕು ಅಂತ ಮನಸ್ಸು ಹಂಬಲಿಸುತ್ತ ಇದೆ. 1 ವಾರ ಹೇಮಂತ್ ಮಧುಗೆ ಕಾಣ ಸಿಗಲೆ ಇಲ್ಲ. ಅವನನ್ನ ನೋಡದೆ ಹುಚ್ಚು  ಹಿಡಿದಂತೆ ಆಯಿತು. ಹೇಮಂತ್ ಒಂದು ದಿನ ಮಧು ಮುಂದೆ ಬಂದು ಮಾತಾಡದೆ ಹೋದ,  ಮಧು ಆಸೆಯಿಂದ ಮಾತಾಡಲಿಕ್ಕೆ ಬಂದರೆ, 

 ನೋಡಿಯು  ನೋಡದ ಹಾಗೆ  ಹೊರಟು ಹೋದ. ಮಧು ಗೆ ತುಂಬಾ ಬೇಜಾರಾಗಿ, ತುಂಬಾ ನಿರಾಶೆಯಾಯಿತು . ಹೇಮಂತ್ ನ ತುಂಬಾ miss ಮಾಡಕೊಳ್ಳೊಕೆ ಶುರು ಮಾಡಿಬಿಟ್ಟಳು.     Next day ಹೇಮಂತ್ ಸಿಕ್ಕದರೆ ಅವನ ಪ್ರೀತಿಗೆ ಒಪ್ಪಿಗೆ ನೀಡೊಕೆ ತಯಾರಾಗಿ ಬಿಟ್ಟಳು. ಬೆಳಿಗ್ಗೆ ಎಂದಿನಂತೆ ಕಾಲೇಜಿಗೆ ಹೋರಟ ಮಧು,  ಹೇಮಂತ್ ಗೆ phone ಮಾಡಿ meet ಮಾಡುವಂತೆ ಸೂಚಿಸದಳು, 

 ಹೇಮಂತ್ ಸರಿಯಾದ ಸಮಯಕ್ಕೆ  ಬಂದು ಮಧುವನ್ನ car ನಲ್ಲಿ ಕರೆದುಕೊಂಡು ಹೋದ. ಮೊದಲೆ ನಿರ್ಧಾರ ಮಾಡಿದ್ದ ಮಧು, ಹೇಮಂತ್ ನನ್ನು ಪ್ರೀತಿಸುವುದಾಗಿ ತಿಳಿಸಿದಳು,  ಹೇಮಂತ್ ಕೂಡ ತುಂಬಾ ಖುಷಿಯಾಗಿ ಬಿಟ್ಟ. ಆಗಾಗ್ಗೆ ಇಬ್ಬರೂ ಬೇಟಿಯಾಗುತ್ತಿದ್ದರು. 

ಹೆಚ್ಚಿನ ಸಮಯ 🚗 car ಮತ್ತು Park ನಲ್ಲಿ ಹರಟೆ ಹೊಡೆಯುತ್ತ ಕಾಲ ದುಡುತ್ತಿದ್ದರು. ಹೇಮಂತ್ ಕಾಲ ಕಳೆದಂತೆ ಮಧುವನ್ನ,  ಮುತ್ತು ಕೊಡಲು ಪೀಡುಸುತ್ತಿದ್ದ,  ದೈಹಿಕವಾಗಿ ಮುಂದುವರೆಯಲು ಪ್ರಯತ್ನ ಮಾಡುತ್ತಿದ್ದ,  ಮಧು ನಿರಾಕರಿಸಿದಾಗ,  ಹೇಮಂತ್,  ನನ್ನ ಮತ್ತು ನನ್ನ ಪ್ರೀತಿ ಮೇಲೆ ನಂಬಿಕೆ ಇಲ್ಲವೇ ಎಂದು ಕೇಳುತ್ತಿದ್ದ.

 ಮಧು  ಇದೆಲ್ಲಾ ಇವಾಗ ಬೇಡ ಮದುವೆ  ಆದ ಮೇಲೆ ನೋಡೊಣ ಎನ್ನುತ್ತಿದ್ದಳು. ಈ ವಿಷಯದಲ್ಲಿ ಮಧು ಒಪ್ಪದಿದ್ದಾಗ ಹೇಮಂತ್ ನಡವಳಿಕೆ ಬೇಸರ ತರಿಸುವಂತಿತ್ತು. ಹೇಗೋ ಒಂದು ದಿನ ಹೇಮಂತ್,  ಮಧುವನ್ನ ಅವನ formhouse ತೋರಿಸುವುದಾಗಿ    ಕರೆದುಕೊಂಡು ಹೋದ, 

 ಅಲ್ಲಿ privacy ಇದ್ದುದರಿಂದ, ಅವಳ ಹತ್ತಿರ ಕಾಡಿಬೇಡಿ kiss ಮಾಡಿಬಿಟ್ಟ.ನಂತರ ನನಗೆ ಇತರ ಆಸೆಗಳನ್ನ ನಿನ್ನ ಹತ್ತಿರ ತಾನೇ ಪೂರೈಸಿಕೊಳ್ಳಬೇಕು. ಮುಂದೆ  ನಾನು  ನಿನ್ನನೆ ತಾನೇ ಮದುವೆಯಾಗತ್ತೆನೆ  ಎಂದು ಹೇಳಿ ಅವಳ ಹತ್ತಿರ  ದೈಹಿಕವಾಗಿ ಸೇರಲು ಬಯಸಿದ.

 ಮಧು ಒಪ್ಪದಿದ್ದಾಗ, ಹೇಮಂತ್  ಸರಿ ಬಿಡು ನೀನು ಮುಂದೆ ನನ್ನ ಹೆಂಡತಿ  ಆಗೊಳು ಅಂತ ತಿಳಿದು ,                                       ಇದೆಲ್ಲಾ ಕೇಳಿದ ಆದರೆ ನೀನು ನನ್ನನ ನಂಬತಾನೆ ಇಲ್ಲ. ನೀನೆ ನನ್ನ ಅರ್ಥ ಮಾಡಿಕೊಂಡಿಲ್ಲ ಇನ್ಯಾರೂ ಅರ್ಥ ಮಾಡ್ಕೊತಾರೆ, 

 ಹಾಗೆ ಹೀಗೆ ಅಂತ ಹೇಳಿ ಪುಸಲಾಯಿಸಿ , ಮಧು ಜೊತೆ ದೈಹಿಕವಾಗಿ ಮುಂದುವರೆದ. ಹೇಮಂತ್ ನನ್ನ ಅಪಾರವಾಗಿ ಪ್ರೀತಿಸುತ್ತಿದ್ದ ಮಧು,  ತುಂಬಾ  ನಂಬಿಕೆ ಇದ್ದುದ್ದರಿಂದ,  ಅವನ ಮಾತಿಗೆ ಮಣಿದು ಎಲ್ಲಾದಕ್ಕೂ ಒಪ್ಪಿ ದಳು. ಅಷ್ಟೊತ್ತಿಗೆ ಮಧುಗೆ ಪರೀಕ್ಷೆ ಮುಗಿದು result ಕೂಡ  ಬಂದಿತ್ತು. ಕೆಲಸದ ಹುಡುಕಾಟದಲ್ಲಿ ಮಧು  busy ಇದ್ದ ಕಾರಣ , 

 ಹೇಮಂತ್  ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ….  ಮಧುಗೆ  ಕೆಲಸ ಸಿಕ್ಕಿ, ಕೆಲಸಕ್ಕೆ ಸೇರಿದಳು,  ಕೆಲಸದಲ್ಲಿ busy ಯಾಗಿದ್ದ,  ಮಧು ಹೇಮಂತ್ ಗೆ  ಸಮಯ ಕೊಡಲು ಆಗುತ್ತಿರಲಿಲ್ಲ . ಹೇಮಂತ್ ಮಾತ್ರ ರಾತ್ರಿ 12 ಗಂಟೆ ಯಾದರು msg ಮಾಡತಾ reply ಗೋಸ್ಕರ ಕಾಯುತ್ತಾ ಇದ್ದ.

 ಹೀಗೆ ಸಾಗುತ್ತಾ ಇದ್ದ ಇವರ ಪ್ರೇಮ ಕತೆಗೆ ಒಂದು ದಿನ ಮಧು ಕಡೆಯಿಂದ ತೆರೆ ಬಿದ್ದಿತ್ತು. .. ಕಾರಣ ಏನಂದರೆ? ಮಧು  ರಜೆ ಇದ್ದ ಕಾರಣ ಊರಿಗೆ ಹೋಗಿದ್ದಳು.  ಆಗ ಹೇಮಂತ್ ಊರಿನ ಒಬ್ಬ ವ್ಯಕ್ತಿ  ಮಧು  ತಂದೆಯ ಸ್ನೇಹಿತರು ಅವರು  ಮನೆಗೆ ಬಂದಿದ್ದರು.  ಹಾಗೆ ಅವರು ಜೊತೆ  ಮಾತನಾಡುವಾಗ ಹೇಮಂತ್ ವಿಷಯ ಬಂದಿತು.

  ಅವರು ಒಂದು ಆಶ್ಚರ್ಯ  ವಿಷಯವನ್ನ ತಿಳಿಸಿದರು. ಹೇಮಂತ್ ಬಗ್ಗೆ ಹೀಗೆ ಮಾತಾನಾಡುತ್ತಾ ಅವನಿಗೆ ಮದುವೆ ಆಗಿ ಒಂದು ಮಗು ಕೂಡ ಇದೆ ಎಂದು ಹೇಳಿದರು.  ಈ ವಿಚಾರ ತಿಳಿದ ಮಧು ಗೆ  ಬರಸಿಡಿಲು ಬಡಿದಂತಾಯಿತು……………………..                                        

  ಮಧು ಗೆ ಹೇಮಂತ್  ಮೇಲೆ ಕೋಪ  ಆಕ್ರೋಶ ಅಶೂಯೆ ಎಲ್ಲಾವು ಬಂದಿದೆ. ಮಧು ಚಿಂತೆ ಮಾಡುತ್ತ ನಾನು ಎಷ್ಟು ಸುಲಭವಾಗಿ ಇವನನ್ನ  ನಂಬಿಟ್ಟೆ.ಎಂತಾ ತಪ್ಪು ನನ್ನಿಂದ ಆಗಿದೆ. ಪಕ್ಕದ ಊರಿನವನೆ ಆದರೂ ಅವನ ಬಗ್ಗೆ ಹಿಂದು ಮುಂದು ವಿಚಾರಸದೆ ಅವನ ಮೋಸದ ಪ್ರೀತಿಯ ಬಲೆಗೆ ಬಿದ್ದು .

ನಾನು ಯಾಮಾರಿಬಿಟ್ಟೆ. ಅವನು ಹೇಳಿದ ಎಲ್ಲಾ ಸುಳ್ಳನ್ನು ನಂಬಿ, ಅವನನ್ನ  ಎಷ್ಟು ಪ್ರೀತಿ ಮಾಡಿದೆ  ಶುದ್ಧ  ಮನಸ್ಸಿನಿಂದ,  ಆದರೆ ಅವನು ನನ್ನನ್ನು    ಮೋಸದ ಪ್ರೀತಿಯಿಂದ ನನ್ನನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾಳು ಮಾಡಿಬಿಟ್ಟ.

 ಈ ವಿಚಾರ  ಮನೆಯಲ್ಲಿ  ಅಪ್ಪ ಅಮ್ಮನಿಗೆ,  ಊರಿನಲ್ಲಿ ಜನಗಳಿಗೆ ತಿಳಿದರೆ ಏನು ಆಗುತ್ತೆ. ನಾನು ಮತ್ತು ಅಪ್ಪ ಅಮ್ಮ ಎಲ್ಲರೂ ಊರಿನವರ ಮುಂದೆ ತಲೆ ಎತ್ತಿ ನಡೆಯಲು ಆಗುವುದಿಲ್ಲ.ನಾನು ನನಗೆ ಅರಿಯದೆ ಮಾಡಿದ ತಪ್ಪು ಅಪ್ಪ ಅಮ್ಮನಿಗೆ ತಿಳಿದರೆ ಅವರು ಜೀವಂತವಾಗಿ ಬದುಕುಳಿಯುವುದಿಲ್ಲ ,

 ಎಂದು ಯೋಚಿಸಿ ಒಂದು  ತೀರ್ಮಾನಕ್ಕೆ ಬಂದಳು,  ಅದೇನೆಂದರೆ ಈಗ ನನಾಗದ ಮೋಸಕ್ಕೆ, ಅನ್ಯಾಯಕ್ಕೆ ಹೇಮಂತ್ ನಿಂದ ಯಾವುದೇ ನ್ಯಾಯ ಸಿಗುವುದಿಲ್ಲ……..   ಕಾರಣ ಇಷ್ಟೇ ಅವನು  ವಿವಾಹಿತ, ಅವನಿಗೆ ಹೆಂಡತಿ ಮಕ್ಕಳು ಇದ್ದಾರೆ. ಹೀಗಾ ಎಲ್ಲಾ ತಿಳಿದು ನಾನು ನ್ಯಾಯ ಕೇಳಲು ಹೋದರೆ ನನ್ನದೇ ತಪ್ಪು ಆಗುತ್ತದೆ, 

ಅದು ಅಲ್ಲದೇ ಹೇಮಂತ್ ಹೆಂಡತಿ ಕೂಡ ನನ್ನ ಹಾಗೆ ಹೆಣ್ಣು,  ಅವರ  ಸಂಸಾರದ ಮಧ್ಯದಲ್ಲಿ  ನಾನು ಹೋಗುವುದರಿಂದ ಸಮಾಜದ ಮತ್ತು ಕಾನೂನಿನ  ದೃಷ್ಟಿಯಲ್ಲಿ  ನನಗೆ  ಯಾವುದೇ ಮಾರ್ಯದೆ  ಗೌರವ ಸಿಗುವುದಿಲ್ಲ,  ಹೇಮಂತ್  ಜೊತೆ ಈ ಸಮಸ್ಯೆಯನ್ನ ಬಗೆಹರಿಸಲು  ಯಾವುದೇ ಮಾರ್ಗಗಳು ಇಲ್ಲ. 

ಅವನು   ಎಲ್ಲಾವನ್ನು , ಮುಚ್ಚಿಟ್ಟು,  ನನ್ನ ಜೊತೆ, ಬೇಕಾಂತಾನೇ, ಸ್ನೇಹ , ಪ್ರೀತಿ ಸಲುಗೆ ಎಲ್ಲಾದರ ,ನಾಟಕ ಮಾಡಿ. ನನ್ನನ್ನು, ಮೂರ್ಖಳಾಗಿಸಿ,  use ಮಾಡಿಕೊಂಡಿದ್ದಾನೆ.  ಮೋದಲೇ ಪೂರ್ವ ಯೋಜನೆಗಳಿಂದ ನನ್ನನ್ನು ಮೋಸ ಮಾಡಿದ್ದಾನೆ…… ಇಂತಹವನ ಮುಖ ನೋಡುವುದು ಕೂಡ  ಮಹಾ ಪಾಪ ಎಂದು ತಿಳಿದು, ತನಾಗಾದ ಅನ್ಯಾಯ ಮೋಸವನ್ನ ಯಾರಿಗೂ ಹೇಳದೆ ತನ್ನ  ಮನಸ್ಸನ್ನ ಕಲ್ಲಾಗಿಸಿಕೊಂಡಳು,

 ಹೇಮಂತ್ ನನ್ನು ಭೇಟಿಮಾಡಿ , ಅವನನ್ನ  ಬಡಿದು ಸಾಯಿಸುವಷ್ಟು   ಸಿಟ್ಟು,  ಕೋಪ ಬಂದರೂ  , ಅಪ್ಪ  ಅಮ್ಮನ ಮಾರ್ಯದೆಗೆ  ಅಂಜಿ,  ಇದೆಲ್ಲಾ ಮಾಡಿದರೂ ಏನು ಪ್ರಯೋಜನ ಇಲ್ಲ ಎಂದು ತಿಳಿದು,  ಮಧು ಸುಮ್ಮನಾಗಿಬಿಟ್ಟಳು.   

 ಹೇಮಂತ್  ph no  ಅನ್ನು block  ಮಾಡಿಬಿಟ್ಟಳು. ಮನಸ್ಸು   ದೇಹ 2ನ್ನು  ಹೇಮಂತ್ ಗೆ ಒಪ್ಪಿಸಿದ ಮಧು,  ಬೇರೆ ಮದುವೆ ಆಗಲು ಇಚ್ಚಿಸಲಿಲ್ಲ.  ನಾನು ಕೆಟ್ಟು ಹೋದ ಹೆಣ್ಣು, ಇನ್ನೊಂದು ಗಂಡನ್ನು ಮದುವೆ ಆಗುವ ಅರ್ಹತೆ ನನಗಿಲ್ಲ ಎಂದು ಭಾವಿಸಿ  ಮದುವೆ ನಿರ್ಧಾರ ಕೈ ಬಿಟ್ಟಳು.   

ಮಧು  ತಂದೆ ತಾಯಿ ಕೂಡ ಅವಳನ್ನ  ಬಲವಂತ ಮಾಡಲಿಲ್ಲ. ಹೇಮಂತ್ ನನ್ನ  ಯಾವತ್ತೂ ನೋಡಲು ಇಷ್ಟಪಡದ ಮಧು ತನ್ನ  ತಂದೆ ತಾಯಿಯನ್ನ , ಚೆನ್ನಾಗಿ  ನೋಡಿಕೊಳ್ಳುತ್ತಾ ಅವರೊಂದಿಗೆ ಜೀವನ ಸಾಗಿಸಿದಳು.