ಸೂಚನೆ: ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು ಕಥಾವಸ್ತು ಮತ್ತು ಸನ್ನಿವೇಶಗಳು ಕೇವಲ ಕಾಲ್ಪನಿಕವಾಗಿದ್ದು, ಯಾವುದೇ ವ್ಯಕ್ತಿ ಜೀವನಕ್ಕೆ ಮತ್ತು ಸಮುದಾಯಕ್ಕೆ ಸಂಬಂಧಿಸಿರುವುದಿಲ್ಲ . ಒಂದು ವೇಳೆ ಸಾಮ್ಯತೆ ಕಂಡು ಬಂದಲ್ಲಿ ಅದು ಕಾಕತಾಳಿಯವಷ್ಟೆ. ಇದಕ್ಕೆ ಲೇಖಕರು ಜವಾಬ್ದಾರರಲ್ಲ.

ಶೈಲಜಾ, ತಾಯಿ ಇಲ್ಲದ ತಬ್ಬಲಿ ಹೆಣ್ಣು ಮಗಳು , ತಂದೆ ,ಮತ್ತು ಅಣ್ಣನ ,ಆಶ್ರಯದಲ್ಲಿ ಬೆಳೆದಳು. ಮದುವೆ ವಯಸ್ಸಿಗೆ ಬಂದರು. ಅವಳಿಗೆ ಕಂಕಣ ಬಲ ಕೂಡಿ ಬಂದಿರಲಿಲ್ಲ.
ತುಂಬಾ, ದಿನಗಳು ಶೈಲಜಾಳ ಮದುವೆ ಮಾಡಲು ಕಾದು ನೋಡಿದರು ಶೈಲಜಾಳಿಗೆ ಕಂಕಣ ಬಲ ಕೂಡು ಬರದ ಕಾರಣ. ತಂದೆ, ಸರಿ ಮಗನಿಗಾದರೂ, ಮದುವೆ ಮಾಡೋಣ. ಎಂದು ನಿರ್ಧರಿಸಿದರು.
ತಂದೆಯ, ನಿರ್ಧಾರದಂತೆ ಶೈಲಜಾಳ ಅಣ್ಣನಿಗೆ ಮದುವೆ ಆಯಿತು. ಸ್ವಲ್ಪ ದಿನಗಳು, ಕಳೆದವು. ಅತ್ತಿಗೆಯ, ಜೊತೆಗೆ ಚನ್ನಾಗಿ ,ಹೊಂದಿಕೊಂಡು ಹೋಗುತ್ತಿದ್ದ.ಶೈಲಜಾಳಿಗೆ , ಅಕ್ಕ ಪಕ್ಕದ ಜನರು,
ಒಳ್ಳೆ ಕುಟುಂಬವನ್ನ, ಹಾಳು ಮಾಡಲೆಂದೇ ಇರುವ. ಮನೆಹಾಳು ,ಮಾಡುವ ಜನಗಳು .ಶೈಲಜಾಗೆ ಚಾಡಿ ಮಾತನ್ನು ಹೇಳಲು ಪ್ರಾರಂಭಿಸಿದರು.
ಕಂಡ ಕಂಡವರೆಲ್ಲಾ, ಕು಼ಟುಂಬವನ್ನು ಹೊಡೆಯಲು, ಚಾಡಿ ಮಾತುಗಳನ್ನ ಹೇಳುತ್ತಾ. ಶೈಲಜಾಳ , ಕಿವಿಗೆ ಊದುತ್ತಿದ್ದರು. ಮನೆ ಮುರಿಯುವ, ಜನರು. ಶೈಲಜಾಳಿಗೆ ಈ ತರಹದ ಚಾಡಿ ಮಾತುಗಳನ್ನ ಹೇಳಿ, ಕೊಡುತ್ತಿದ್ದರು.
ನೋಡು , ಶೈಲಜಾ ನೀನು
,
ಮದುವೆ ಆಗದೇ ಹೀಗೆ ಇದ್ದರೆ.
ನಿನ್ನ, ಅಪ್ಪ ಮತ್ತು ಅಣ್ಣ .ನಿನಗೆ ಯಾವಾ ಕಾಲದಲ್ಲಿಯೂ, ಮದುವೆ ಮಾಡಲೂ , ಹೋಗವುದಿಲ್ಲ. ಬದಲಿಗೆ, ನಿನ್ನ ಅತ್ತಿಗೆಯ ಚಾಕರಿ, ಮಾಡಲೂ .ಮನೆಯಲ್ಲಿಯೇ ,ಇಟ್ಟು ಕೊಳ್ಳುತ್ತಾರೆ. ನೀನು ,ನಿನ್ನ ಅತ್ತಿಗೆ ಹೇಳುವ ,ಕೆಲಸವನ್ನು ಮಾಡುತ್ತಾ. ಮನೆ ಕೆಲಸದವಳ, ತರ ಇರಬೇಕಾಗುತ್ತದೆ.
ಆದರಿಂದ ಯೋಚಿಸು , 2 ನೇ ಮದುವೆ ಆದರೂ ಪರವಾಗಿಲ್ಲ .ನೀನು ಒಂದು, ಮದುವೆ ಆಗಿ ಬಿಡು.ನಿನ್ನದೇ ಆದ, ಒಂದು ಜೀವನ. ಮತ್ತು ನಿನಗೆ ಅಂತ .ಒಂದು, ಕುಟುಂಬ ಇರುತ್ತೆ,
ಎಂದು, ಚಾಡಿ ಮಾತು, ಹೇಳಿ, ಕೊಡುತ್ತಿದ್ದರು . ಜನರ ಚಾಡಿ, ಮಾತುಗಳನ್ನ, ಕೇಳಿ ಮನಸ್ಸಿಗೆ, ತ್ರೀವವಾಗಿ ಹಚ್ಚಿಕೊಂಡ ಶೈಲಜಾ. ಮನೆಯಲ್ಲಿ, ಅಣ್ಣ ಮತ್ತು ಅತ್ತಿಗೆ ಮಾತುಗಳನ್ನು ಕೇಳುತ್ತಿರಲಿಲ್ಲ.
ಮನಸಿಗೆ ಇಷ್ಟ ಬಂದ ಹಾಗೆ, ನಡೆದುಕೊಳ್ಳುವುದು. ಎಲ್ಲಿಗೋ ಹೋಗುವುದು ಯಾವಾಗಲು ಬರುವುದು. ಹೀಗೆ ಮಾಡ ತೊಡಗಿದಳು. ಇದನ್ನ ಅಣ್ಣ, ಅಪ್ಪ ಕೇಳಿದರೆ ಅವರಿಗೆ ಎದುರು ಉತ್ತರ ಕೊಡುತ್ತಿದ್ದಳು .
ಸರಿ ಸ್ವಲ್ಪ, ಚಿಕ್ಕ ಹುಡುಗಿ .ಅಷ್ಟು ತಿಳುವಳಿಕೆ ಇಲ್ಲ. ಅಂತ ಅವಳನ್ನು, ಸ್ವಲ್ಪ ಸ್ವಾತಂತ್ರವಾಗಿ ಇರಲು ಬಿಟ್ಟರು .
ಅಷ್ಟೊತ್ತಿಗೆ, ಶೈಲಜಾಳಿಗೆ ಆದೇ ಊರಿನಲ್ಲಿ ಇದ್ದ. ವಿವಾಹವಾಗಿದ್ದ .ಪುರುಷನ ಪರಿಚಯವಾಗಿತ್ತು. ಅವನ ಹೆಸರು ಸ್ವಾಮಿ. ಈ ಸ್ವಾಮಿ, ಶೈಲಜಾಳನ್ನ, ತನ್ನ ,ಬಲೆಗೆ ಹಾಕಿಕೊಳ್ಳಲು. ತುಂಬಾ ದಿವಸದಿಂದ ಕಾಯುತ್ತಿದ್ದ.
ಆಚೆ ಕಡೆ ಶೇಲಜಾಳನ್ನ ನೋಡುತ್ತಾ, ಹೋಗುತ್ತಾ ಬರುತ್ತಾ .ಇವಳನ್ನ ಹಾಸ್ಯ ಮಾಡುವುದು. ಗೇಲಿ ಮಾಡುವುದು .ಹೀಗೆ ,ಅವಳ ಮನಸ್ಸನ್ನ, ಒಲಿಸಿಕೊಳ್ಳಲು. ಕಸರತ್ತು ಮಾಡುತ್ತಿದ್ದ.
ಶೈಲಜಾ , ಅಷ್ಟು easy ಆಗಿ ,ಬಲೆಗೆ ಸಿಕ್ಕುವ ಹೆಣ್ಣಾಗಿರಲಿಲ್ಲ . ಸ್ವಾಮಿಯ, ಎಲ್ಲಾ ಪ್ರಯತ್ನಗಳು . ವಿಫಲವಾಗಿದ್ದವು. ಹೇಗಾದರೂ ,ಅವಳನ್ನ ಪಡೆಯಬೇಕೆಂದು. ಹಟಕ್ಕೆ ಬಿದ್ದಿದ್ದ ಸ್ವಾಮಿ. ಒಂದು ಪೂರ್ವ ,ಯೋಜನೆಯ ಸಂಚನ್ನ ರೂಪಿಸಿದ್ದ.
ಅಂದು. ಊರಿನಲ್ಲಿ ಹಬ್ಬ ಇತ್ತು, ಊರಿನ ಜನರೆಲ್ಲಾ ತಮ್ಮ ತಮ್ಮ ಮನೆಗಳಿಗೆ , ಬೇಗ ತೆರಳಿ ಹಬ್ಬವನ್ನು ಆಚರಿಸುತ್ತಿದ್ದರು. ಸಂಜೆ ಸಮಯದಲ್ಲಿ, ತನ್ನ ಮೇಕೆಗೆ ತಿನಿಸಲು ಸೊಪ್ಪು. ಬೇಕೆಂದು, ಸೊಪ್ಪನ್ನು ತರಲು ಶೈಲಜಾ, ತಮ್ಮ ಜಮೀನಿಗೆ ಹೊರಟಳು.
ಯಾವಾಗಲೂ ಶೈಲಜಾಳನ್ನ ,ಹಿಂಬಾಲಿಸುತ್ತಿದ್ದ .ಸ್ವಾಮಿ , ಶೈಲಜಾ ಒಬ್ಬೊಂಟಿಯಾಗಿ, ಸಿಗುವುದನ್ನ ಕಾಯುತ್ತಿದ್ದ . ಆ ದಿನ ಬಂದೆ, ಬಿಟ್ಟಿತು . ಶೈಲಜಾಳನ್ನ ಹಿಂಬಾಲಿಸುತ್ತ ಹೋದ ಸ್ವಾಮಿ,
ಜನರುಗಳು , ಯಾರು ಇಲ್ಲದ, ಸಮಯವನ್ನ ನೋಡಿ, ಶೈಲಜಾಳಿದ್ದ. ಅವರ ಜಮೀನಿನ ಸ್ಥಳಕ್ಕೆ ಬಂದ. ಶೈಲಜಾ, ಗಾಬರಿಯಾಗಿ ಏನು ಬೇಕು.ನಮ್ಮ ಹೊಲದಲ್ಲಿ ನಿಮಗೇನು ಕೆಲಸ.
ನಮ್ಮ ಅಣ್ಣ ಅಪ್ಪ ಇಲ್ಲ ದೇ ಇರೋ ಸಮಯದಲ್ಲಿ, ನೀವು ಯಾಕೆ ಬಂದಿದ್ದೀರಾ. ಎಂದು ಕೇಳಿದಳು. ಅದಕ್ಕೆ ಸ್ವಾಮಿ, ನಿನ್ನ ನನ್ನು, ನೋಡಲು ಬಂದೆ ಎಂದನು.
ಯಾರು ಇಲ್ಲ ದೇ ಸಮಯದಲ್ಲಿ ನನ್ನನ್ನು ನೋಡುವುದು ತಪ್ಪು ಇಲ್ಲಿಂದ ಹೋರಾಡಿ. ಇಲ್ಲ ನಾನು ಹೋಗಿತಿನಿ. ದಾರಿ ಬಿಡಿ ಎಂದಳು.
ಸ್ವಾಮಿ, ,ಶೈಲಜಾಳ, ಕೈ ಹಿಡಿದು , ಯಾಕೆ, ಚಿನ್ನ ಇಷ್ಟು ಅರ್ಜೆಂಟ್. ನಾನು ನಿನ್ನ ಜೊತೆ ಮಾತಾಡೋಕೆ, ಅಂತಾನೆ, ಯಾರು ಇಲ್ಲದ ಸಮಯ ನೋಡಿ, ಬಂದಿದ್ದು.ನೀನು, ನೋಡಿದರೆ, ಹೋಗ್ತೀನಿ ಅಂತ ಹೇಳ್ತೀಯಲ್ಲಾ.
ಇರು ಇಬ್ಬರು ಒಟ್ಟಿಗೆ ಹೋಗೊಣ ಎಂದನು.ಶೈಲಜಾ, ಇಲ್ಲ ನಾನು, ಬೇಗ ಹೋಗಬೇಕು. ಮನೇಲಿ ನನಗೋಸ್ಕರ, ನನ್ನ ಅಪ್ಪ, ಕಾಯ್ತಾ, ಇದಾರೆ.ನಮ್ಮ ಅಣ್ಣ ಬೇರೆ ಮನೇಲಿ ಇಲ್ಲ .
ಹೆಂಡತಿ ಊರಿಗೆ ಹೋಗಿದಾನೆ, ಆದರಿಂದ ನಾನು ಮನೆಗೆ ಬೇಗ, ಹೋಗಬೇಕು. ನನ್ನ ಕೈ ಬಿಡಿ ಎಂದಳು. ಸ್ವಾಮಿ , ಆಹಾ , ಬಿಡ್ತೀನಿ ಅಂತ ಹೇಳಿ . ಬಲವಂತವಾಗಿ ಅವಳ , ಕೈ ಕಾಲು ಕಟ್ಟಿ , ಶೈಲಜಾಳ ಶೀಲವನ್ನ ಹಾಳು ಮಾಡಿಬಿಟ್ಟ .ಆ ಪಾಪಿ ಸ್ವಾಮಿ.
ಶೈಲಜಾ , ಎಷ್ಟು ಬೇಡಿಕೊಂಡರು ಬಿಡಲಿಲ್ಲ . ಶೈಲಜಾ , ಶಕ್ತಿ , ಮೀರಿ , ಪ್ರಯತ್ನ ಪಟ್ಟರೂ. ಮತ್ತು ಕಾಪಾಡಲು , ಯಾರು ಇಲ್ಲದ ಕಾರಣ , ಆಶಾಯಕಳಾಗಿ, ಮೃಗದಂತೆ ವರ್ತಿಸಿದ ಸ್ವಾಮಿಗೆ , ಶೀಲವನ್ನು ಕಳೆದುಕೊಂಡು, ಬಲಿಪಶುವಾದಳು. .
ಶೈಲಜಾ ಅಸಾಯಕಳಾಗಿ, ತನಗೇ ಆದ ಅನ್ಯಾಯವನ್ನ. ತಂದೆಯ ಬಳಿ ಬಂದು ಹೇಳಿದಳು . ತಂದೆಗೆ , ವಯಸ್ಸಾಗಿದರಿಂದ ,ಏನು ಮಾಡಲು ಆಗದೇ. ಅವರು ಊರಿನ ಪಂಚಾಯಿತಿಗೆ ದೂರು ಕೊಟ್ಟರು.
ವಿಷಯ, ತಿಳಿದ ಶೈಲಜಾಳ ಅಣ್ಣ. ತನ್ನ ತಂಗಿ ಬಾಳನ್ನ ಹಾಳು. ಮಾಡಿದವನನ್ನ ಉಳಿಸುವುದಿಲ್ಲವೆಂದು. ರೋಷದಿಂದ ಹೊಡೆಯಲು, ಬಡಿಯಲು, ಮುಂದಾದ. ಊರಿನ ಜನರು ,ಮತ್ತು ಪಂಚಾಯಿತಿವರು, ಅವನನ್ನ ತಡೆದು ಬಿಟ್ಟರು. ಊರಿನ, ಪಂಚಾಯಿತಿವರು . ನ್ಯಾಯ ಕೊಡಿಸಲು ಮುಂದಾಗಿ . ಸ್ವಾಮಿ ,ಮಾಡಿದ ನೀಚ ಕೆಲಸಕ್ಕೆ. ಏನು , ಶಿಕ್ಷೆ ಕೊಡಬೇಕೆಂದು ಕೇಳಿದರು. ಆಗ ಶೈಲಜಾಳ ,ಅಣ್ಣ ,ಈ ನನ್ನ ಮಗನನ್ನು ಜೈಲಿಗೆ ಅಟ್ಟಬೇಕು ಎಂದ.
ಆಗ ಪಾಂಚಾಯಿತಿಯವರು. ಅವನನ್ನು ಜೈಲಿಗೆ ಕಳಿಸಿದರೆ, ಸ್ವಲ್ಪ ದಿನದಲ್ಲಿ .ಆಚೆ ಬಂದು ಬಿಡುತ್ತಾನೆ. ಆ ಶಿಕ್ಷೆ , ಸರಿ ಹೋಗುವುದಿಲ್ಲ ಎಂದರು.
ಊರಿನ ,ಪಂಚಾಯಿತಿವರು. ಶೈಲಜಾಳ ತಂದೆಯನ್ನು ಕೇಳಿದರು. ನೋಡಿ ಅಯ್ಯ, ನಿಮ್ಮ ಮಗಳಿಗೆ ಅನ್ಯಾಯ ಹಾಗಿದೆ .ಆದರಿಂದ ಏನು ಶಿಕ್ಷೆ ಕೊಡಬೇಕೆಂದು. ನೀವು ಹೇಳಿ ಎಂದು ಕೇಳಿದರು.
ಅದಕ್ಕೆ ಶೈಲಜಾಳ ತಂದೆ , ನ್ಯಾಯ ಸ್ಥಾನದಲ್ಲಿ ಇರುವ, ಊರಿನ ಜನಗಳು .ಆದ ನೀವು ಏನೇ ನ್ಯಾಯ ಕೊಟ್ಟರು .ಅದನ್ನ ನಾವು ಸ್ವೀಕರಿಸುತ್ತೆವೆ. ಎಂದೂ ಶೈಲಜಾಳ ತಂದೆ ಹೇಳಿದರು.
ಆಗ, ಊರಿನ ಪಂಚಾಯಿತಿವರು. ಅಯ್ಯ, ನಿಮ್ಮ ಮಗಳ ,ಜೀವನ ಹಾಳಾಗಿದೆ. ಮದುವೆ ಕೂಡ ಆಗಿಲ್ಲ. ಈ ಘಟನೆಯ ನಂತರ , ಮುಂದೆ ಮದುವೆ ಆಗುತ್ತದೆ. ಎಂಬ ಭರವಸೆಯು ಇಲ್ಲ.
ಆದರಿಂದ , ನಿಮ್ಮ ಮಗಳ, ಜೀವನವನ್ನ ಹಾಳು ಮಾಡಿದ .ಈ ಸ್ವಾಮಿಗೆ, ಯಾವುದೇ ಶಿಕ್ಷೆ ಕೊಟ್ಟರು ಅದು ಶಾಶ್ವತವಲ್ಲ.
ಆದರಿಂದ, ನಿಮ್ಮ ಮಗಳಿಗೆ, ಇವನ ಕೈಯಿಂದ ತಾಳಿ ಕಟ್ಟಿಸಿ .ಅವನು, ನಿಮ್ಮ ಮಗಳು, ಜೊತೆ ಬಾಳುವಂತೆ ಮಾಡೋಣ. ಈ ತೀರ್ಮಾನಕ್ಕೆ, ನಿಮಗೆ ಒಪ್ಪಿಗೆ ಇದೇಯೆ , ಅಯ್ಯ. ಎಂದು ಶೈಲಜಾಳ ತಂದೆಗೆ ಕೇಳಿದರು. ಶೈಲಜಾಳ ತಂದೆ, ನನಗೆ , ಸಂಪೂರ್ಣವಾಗಿ, ಒಪ್ಪಿಗೆ ಇದೆ ಅಂದರು.
ಶೈಲಜಾಳ, ಅಣ್ಣ ಮುಂದುವರೆದು. ನಾನು ಈ ತೀರ್ಮಾನಕ್ಕೆ ಒಪ್ಪುವುದಿಲ್ಲ. ಈ ಸ್ವಾಮಿ ಆಯೋಗ್ಯನ , ಜೊತೆ ನನ್ನ ತಂಗಿಯನ್ನ, ಕಳುಹಿಸಿ ಕೊಡುವುದಿಲ್ಲ ಎಂದನು .
ಅದಕ್ಕೆ ಪಂಚಾಯಿತಿವರು .ನೀನು ಕೋಪದಲ್ಲಿ ಮಾತಾಡುತ್ತಿದ್ದಿಯಾ. ನಿನಗೆ ಇನ್ನೂ ,ಅನುಭವ ಸಾಲದು. ಇದು .ನಿನ್ನ ತಂಗಿಯ ,ಜೀವನದ ಪ್ರಶ್ನೆ,, ದುಡುಕಬೇಡ ಎಂದರು .
ಈ ತೀರ್ಮಾನಕ್ಕೆ, ನಿನ್ನ ತಂಗಿಯ , ಒಪ್ಪಿಗೆಯನ್ನ ಕೂಡ ,ಒಂದು ಮಾತು ಕೇಳೊಣ. ಅವಳ ನಿರ್ಧಾರ ಏನೆಂದು ಎಂದು ಅವಳು ತಿಳಿಸಲಿ. ಆ ನಂತರ ಬೇರೆ ,ನಿರ್ಧಾರ ಮಾಡೋಣ. ಎಂದು ಹೇಳಿದರು. ಮೊದಲೇ ಯೋಚನೆ , ಮಾಡಿದ್ದ ಶೈಲಜಾಳು .
ಈಗ, ನಾನು ಮೊದಲ ತರ, ಜೀವನ ಮಾಡಲು ಸಾಧ್ಯವಿಲ್ಲ. ಮೈಲಿಗೆ ಆದ ಹೆಣ್ಣು ಮಗಳು. ಸಮಾಜದಲ್ಲಿ, ನನ್ನ ತರಹದ ,ಹೆಣ್ಣು ಮಕ್ಕಳನ್ನು . ನೋಡುವ ರೀತೆಯೆ ಬೇರೆ.
ಆದರಿಂದ , ನನ್ನ ಜೀವನ ಹಾಳು ಮಾಡಿದವನ ಜೊತೆಯೇ. ನಾನು ಇರುವುದೇ ನನಗೆ ಒಳ್ಳೆಯದು. ಹಾಗೆ ಬಾಳಿದರೆ, ಮಾತ್ರ ನನಗೆ ಮಾರ್ಯಾದೆ . ಗೌರವ . ಎಂದು ಅರಿತು.ಪಂಚಾಯಿತವರ ,ತೀರ್ಮಾನಕ್ಕೆ. ನನ್ನ ಒಪ್ಪಿಗೆ ಇಂದು ಹೇಳಿದಳು. ಈ, ತಿರ್ಮಾನವನ್ನ, ಒಪ್ಪಿಕೊಳ್ಳಲು ಸಾಧ್ಯವಿಲ್ಲ . ಎಂದನು ಶೈಲಜಾ ಅಣ್ಣ.ಪಂಚಾಯಿತಿವರು ನೋಡಪ್ಪ ಈ ತಿರ್ಮಾನವನ್ನ, ಊರಿನ ಜನಗಳು ಮತ್ತು ನಿಮ್ಮ ತಂದೆಯವರು, ಮತ್ತು ನಿನ್ನ ತಂಗಿ ಸಹ ಒಪ್ಪಿಕೊಂಡ್ಡಿದ್ದಾರೆ. ಆದರಿಂದ ನಿನ್ನೊಬ್ಬನ ತಿರ್ಮಾನವನ್ನ ಬದಲಿಸು.
100, ಜನ ಒಪ್ಪಿರುವ ತಿರ್ಮಾನವನ್ನ. ನಿನ್ನೊಬ್ಬನಿಗಾಗಿ ,ಬದಲಿಸಲು ಸಾಧ್ಯವಿಲ್ಲ .ಎಂದು ಹೇಳುತ್ತಾ. ಸ್ವಾಮಿಗೆ, ನೀನು ಶೈಲಜಾಳ, ಜೀವನ ಹಾಳು ಮಾಡಿದಕ್ಕಾಗಿ. ನೀನು ಅವಳನ್ನ ಮದುವೆ ಆಗಬೇಕು ಎಂದು ಹೇಳಿದರು.
ಇದು ಪಂಚಾಯಿತಿಯ, ನಿರ್ಧಾರ. ಆದರಿಂದ ನಿನಗೆ ಒಪ್ಪಿಗೆ ಇದೇಯ, ಎಂದು ಕೇಳಿದರು. ಅದಕ್ಕೆ ಸ್ವಾಮಿ ಒಪ್ಪಿಗೆ ಇದೇ ಎಂದು ಹೇಳಿದ.
ಆಗ ಪಂಚಾಯಿತಿಯವರು , ದೇವರ ಮುಂದೆ ಇದ್ದ. ಹರಿಸಿನ, ದಾರದ, ಕೊಂಬನ್ನು ತಂದು. ಅದನ್ನ ದೇವರ ,ಹತ್ತಿರ ಇಟ್ಟು ,ಪೂಜೆ ಮಾಡಿಸಿ. ಸ್ವಾಮಿಗೆ ಅದನ್ನ ,ಶೈಲಜಾಳ ಕುತ್ತಿಗೆಗೆ, ಕಟ್ಟುವಂತೆ ಹೇಳಿದರು.
ತಾಳಿಯನ್ನು ಕಟ್ಟಿದ ನಂತರ, ಶೈಲಜಾಳನ್ನ, ನಿನ್ನ ಮನೆಗೆ,ಕರೆದುಕೊಂಡು ಹೋಗಿ ಒಳ್ಳೆಯ ಜೀವನ ಮಾಡುವಂತೆ .ಬುಧ್ಧಿ ಹೇಳಿ ಕಳಿಸಿದರು.
ಶೈಲಜಾ ತನ್ನ, ಬಟ್ಟೆಗಳನ್ನು ತೆಗೆದುಕೊಂಡು. ಹೋಗಲು, ತಂದೆಯ ಮನೆಗೆ, ಬಂದಾಗ. ಅಣ್ಣ, ಶೈಲಜಾಗೆ, ನನ್ನ ಮಾತು ಕೇಳದೆ, ಆ ಆಯೋಗ್ಯ ಸ್ವಾಮಿಯ ,ಜೊತೆ ಬಾಳಲು ಹೋಗುತ್ತಿದ್ದಿಯಾ.

ಇನ್ನು ಮುಂದೆ, ನಿನಗೆ ಏನೇ ತೊಂದರೆ .ಆದರೆ ಈ ಅಣ್ಣನ , ಹತ್ತಿರ ಬರಬೇಡ. ಇನ್ನು ,ಮುಂದೆ ನಾನು ಯಾರೋ .ನೀನು ಯಾರೋ .ನಿನ್ನ ಮುಖನಾ ನನಗೆ ತೋರಿಸಬೇಡ. ಎಂದು ಹೇಳಿದ.
ಸ್ವಾಮಿಯ ,ಮನೆಗೆ ಹೋದ ಶೈಲಜಾಳಿಗೆ .ಅಲ್ಲಿ ಸ್ವಾಮಿಯ, ಮೊದಲನೇ ಹೆಂಡತಿ. ಇದ್ದಳು. ಅವಳು , ಗಂಡ ಮಾಡಿದ ತಪ್ಪನ್ನು ಕ್ಷಮಿಸಿ. ಶೈಲಜಾಳನ್ನ , ದಿನ ಬೈಯುತ್ತಿದ್ದಳು. ಇವಳು, ನನ್ನ ಜೀವನ ಹಾಳು ಮಾಡಿದಳು. ನನ್ನ ಗಂಡನನ್ನ , ನನ್ನಿಂದ, ದೂರ ಮಾಡಿದಳು.
ಹಾಗೆ ಹೀಗೆ, ಎಂದು ದಿನವೂ ಒಂದೊಂದು . ತರಹ ರೀತಿಯಲ್ಲಿ, ಶೈಲಜಾಳ ಜೊತೆ , ಜಗಳ ಮಾಡುತ್ತಿದ್ದಳು. ಸ್ವಲ್ಪ ದಿನವು ಶೈಲಜಾ ನೆಮ್ಮದಿಯಿಂದ ಇರಲಿಲ್ಲ.
ಈ ಹಿಂಸೆಯನ್ನ ,ಸಹಿಸಿಕೊಳ್ಳಲು ಆಗದೇ, ಹಿಂತಿರುಗಿ , ತಂದೆಯ ಮನೆಗೆ, ಹೋಗೊಣ ಎಂದುಕೊಂಡರೇ, ಅಣ್ಣ ಹೇಳಿದ ಮಾತು ನೆನಪಿಗೆ ಬಂದು. ಎಷ್ಟೇ ಕಷ್ಟ ಬಂದರೂ, ತಂದೆಯ ಮನೆಗೆ, ಅಣ್ಣನ ಬಳಿಗೆ ಹೋಗದಂತೆ ತಡೆಯುತ್ತಿತ್ತು.
ಹೀಗೆ ನೋವನ್ನ ,ನುಂಗುತ್ತ ಬದುಕುತ್ತಿದ್ದ ಶೈಲಜಾಳಿಗೆ . ಒಂದು ದಿನ, ತಾನು ಗರ್ಭಿಣಿಯಾಗಿರುವುದು ತಿಳಿದು ಬಂತು. ಈ ಸಂತೋಷವನ್ನು ಹೇಳಿಕೊಳ್ಳಲು ತನ್ನ ತಂದೆ, ಅಣ್ಣ ಯಾರು ,ನನ್ನ ಬಳಿ ಮಾತಾಡುತ್ತಿಲ್ಲ .ಎಂದು ಕೊರಗುತ್ತಿದ್ದಳು.
ಇದು, ಸ್ವಾಮಿಗೆ ತಿಳಿದು ತುಂಬಾ ಸಂತೋಷಗೊಂಡು , ಶೈಲಜಾಳನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ. ಈ ವಿಷಯವನ್ನ ತಿಳಿದ ಸ್ವಾಮಿಯ ಮೊದಲ ಹೆಂಡತಿ, ಶೈಲಜಾ, ಗರ್ಭಿಣಿ ಆಗಿದ್ದು, ಅವಳಿಗೆ ಹಿಡಿಸಲಿಲ್ಲ. ಕಾರಣ.ಸ್ವಾಮಿಯ,ಮೊದಲನೇ ಹೆಂಡತಿಗೆ ಮಗು ಇರಲಿಲ್ಲ. ಹೊಟ್ಟೆ ಕಿಚ್ಚಿನಿಂದ .
ಸ್ವಾಮಿಯ,ಮೊದಲನೇ ಹೆಂಡತಿ, ಹೀಗೆ ಯೋಚನೆ ಮಾಡಿದಳು, ಮದುವೆ ಆಗಿ ಇಷ್ಟು ದಿನ ಆಯ್ತು. ನನಗೆ ಇನ್ನೂ ಮಗು ಆಗಲಿಲ್ಲ. ಆದರೆ ಈ ,ನನ್ನ ಸವತಿ. ಶೈಲಜಾಳಿಗೆ ಇಷ್ಟು ಬೇಗ ಮಗು ಆಗುತ್ತಿದೆ.
ಶೈಲಜಾಳ , ಮಗು ಹೊಟ್ಟೆಯಿಂದ ಆಚೆ ಬಂದು ಬಿಟ್ಟರೆ. ನನ್ನ ಮುಂದಿನ , ಜೀವನ. ಮತ್ತು ನನ್ನ ಮೊದಲನೇ ಹೆಂಡತಿ. ಎಂಬ ಪದವಿ ಹೋಗುತ್ತದೆ . ವಂಶದ ಕುಡಿಯನ್ನ , ಎತ್ತುಕೊಟ್ಟ ಶೈಲಜಾಗೆ, ಈ ಮನೆಯಲ್ಲಿ . ಎಲ್ಲಾ ಅಧಿಕಾರ , ಹಕ್ಕು,
ಘನತೆ ,ಗೌರವ ಎಲ್ಲಾವು ಶೈಲಜಾಳ ಪಾಲಾಗುತ್ತದೆ . ಮತ್ತು ನನ್ನನ್ನ ಊರಿನ ಜನ , ಮತ್ತು ನನ್ನ ಗಂಡ ನನ್ನನ್ನು ಕೀಳಾಗಿ ಕಾಣುತ್ತಾರೆ.
ಆದರಿಂದ ಇದು ನಡೆಯಬಾರದು. ಶೈಲಜಾಗೆ ಮಗು ಹುಟ್ಟಬಾರದು . ಶೈಲಜಾ ಮತ್ತು ಅವಳ ಮಗುವನ್ನು , ಹೊಟ್ಟೆಯಲ್ಲಿಯೇ, ಸಾಯಿಸಿಬಿಡಬೇಕೆಂದು ಅಂದುಕೊಂಡಳು .
ಸ್ವಾಮಿಯ, ಮೊದಲನೇ ಹೆಂಡತಿ , ಪೂರ್ವ ಯೋಜನೆಯನ್ನ, ರೂಪಿಸಿ. ಶೈಲಜಾಳ ತಿನ್ನುವ ಊಟದಲ್ಲಿ , ಗರ್ಭಪಾತವಾಗುವ, ಗಿಡ ಮೂಲಿಕೆಯನ್ನ ಬೆರೆಸಿ ಇಟ್ಟಿದ್ದಳು.
ಆ ವಿಷ, ಬೆರೆಸಿದ ಅನ್ನವನ್ನ ತಿಂದ ಶೈಲಜಾ, ಅಸ್ಥವ್ಯಸ್ಥಗೊಂಡು, ಆಸ್ಪತ್ರೆಗೆ ಸೇರಿಸಿದರು. ಮಗು ಗರ್ಭಪಾತವಾಯಿತು. ಶೈಲಜಾ ಸ್ಥಿತಿ ಗಂಭೀರವಾಯಿತು .
ಅದು ಪೋಲಿಸ್ ಕಂಪ್ಲೇಂಟ್ ಕೂಡ ಆಯಿತು. ವಿಷಯ ತಿಳಿದ ಶೈಲಜಾಳ ತಂದೆ ನೋಡಲೂ ಮುಂದದಾಗ, ಅವಳ ಅಣ್ಣ ತಂದೆಯನ್ನ ತಡೆದುಬಿಟ್ಟ.
ನಾನು ಅವತ್ತೆ. ಹೇಳದೆ ,ಆ ಆಯೋಗ್ಯನ, ಸಹವಾಸ ಬೇಡ ಅಂತ. ನೀನು ನಿನ್ನ, ಮಗಳು ಇಬ್ಬರೂ ಕೇಳಲಿಲ್ಲ. ಈಗ ಅನುಭವಿಸಿ.
ಅವಳನ್ನ ನೋಡೊಕೆ , ಹೋದರೆ ಮತ್ತೆ. ಈ ಮನೆಗೆ , ಹಿಂತಿರುಗಿ ,ಬರಬೇಡ. ಎಂದು ತಂದೆಗೆ ಷರತ್ತು ಹಾಕಿದ, ಶೈಲಜಾಳ ಅಣ್ಣ . . ಶೈಲಜಾಳ ತಂದೆ ಮಗನಿಗೆ ಹೆದರಿ ಮಗಳನ್ನು ನೋಡಲು ಹೋಗಲಿಲ್ಲ.
ಇತ್ತ ಶೈಲಜಾಳ, ಪರಿಸ್ಥಿತಿ ಗಂಭೀರವಾಗಿದೆ. ಎಂದು ಡಾಕ್ಟರ್ ತಿಳಿಸಿದರು. ಈ ವಿಷಯ ಪೋಲಿಸ್ ಕಂಪ್ಲೇಂಟ್ ಆಗಿದ್ದರಿಂದ. ಇದನ್ನ ಸ್ವಾಮಿಯ , ಮೊದಲನೇ, ಹೆಂಡತಿ ಮಾಡಿದ್ದು. ಎಂದು ತನಿಖೆಯಲ್ಲಿ ತಿಳಿದು ಬಂದರೆ.
ಜೈಲಿಗೆ ಹೋಗುವ ಪ್ರಮೇಯ ಬರುತ್ತದೆ ಎಂದು ಅರಿತ.
ಸ್ವಾಮಿ , ಮತ್ತು ಅವನ ತಂದೆ. ಶೈಲಜಾಳಿಗೆ ಹೀಗೆ ಹೇಳಿದರು. ನೀನು ಭಯ ಪಡಬೇಡ, ಎಷ್ಟೇ ದುಡ್ಡು, ಖರ್ಚು ಆದರೂ, ಪರವಾಗಿಲ್ಲ ನಾವು ನಿನ್ನನ್ನ ಜೀವಂತವಾಗಿ ಉಳಿಸಿಕೊಳ್ಳುತ್ತೇವೆ. ಆದರಿಂದ ನೀನು ನಿಶ್ಚಂತೆಯಿಂದ ಇರು.
ತನ್ನವರೆಂದು ಅಂದುಕೊಂಡ ಅಪ್ಪ, ಅಣ್ಣ ಯಾರು ಇಂತಹ ಪರಿಸ್ಥಿತಿಯಲ್ಲಿ ಬರದೇ ಇದ್ದುದನ್ನ ಕಂಡು , ಕಂಗಾಲಾದ, ಶೈಲಜಾ, ಸ್ವಾಮಿ ಮತ್ತು ಅವನ ತಂದೆಯ ,ಮಾತನ್ನು ನಂಬಿದಳು.
ಸ್ವಾಮಿ, ಮತ್ತು ಆತನ, ತಂದೆಯ ಮಾತಿನಂತೆಯೆ. ಪೋಲಿಸರ ವಿಚಾರಣೆಯ ವೇಳೆ , ಇದು ನಾನೇ , ನನ್ನ ಕೈಯಾರೆ. ವಿಷದ ಗಿಡ ಮೂಲಿಕೆಯನ್ನ ಸೇವಿಸಿ .ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು .
ಇದು, ನನ್ನ ಸ್ವ ಇಚ್ಛೆಯ ಅಫರಾದ, ಎಂದು ಪೋಲಿಸರ, ಬಳಿ ಹೇಳಿಕೆ ನೀಡಿದಳು. ಇದಕ್ಕೆ ನನ್ನ, ಗಂಡನಿಗೆ , ಮತ್ತು ಅವನ ಕುಟುಂಬದವರಿಗೆ. ಯಾವುದೇ, ಸಂಬಂಧವಿಲ್ಲ .ಎಂದು ಹೇಳಿಕೆ ಕೊಟ್ಟು ಬಿಟ್ಟಳು.
ಅಲ್ಲಿಗೆ ಕೇಸ್ ಕ್ಲೋಸ್ ಆಯಿತು. ಸ್ವಲ್ಪ ಸಮಯದ ನಂತರ ಶೈಲಜಾಗೆ ಇಂಜೆಕ್ಷನ್ ಕೊಡಿಸಿ, ಸಾಯಿಸಿಬಿಟ್ಟರು. ಹೀಗೆ ಮುಗ್ಧ ಹೆಣ್ಣು ಮಗಳು ಶೈಲಜಾ, ಬೇರೆಯವರ, ಚಾಡಿ ಮಾತು ಕೇಳಿ.
ಬೇರೆಯವರ, ಚಾಡಿ, ಮಾತನ್ನು, ಕೇಳಿ. ತನ್ನ ಜೀವನವನ್ನ, ಅಂತ್ಯ ಮಾಡಿಕೊಂಡಳು. ಆದರೆ ಸ್ವಾಮಿ ,ಮತ್ತು ಅವನ ಹೆಂಡತಿ . ಅವರ ಕುಟುಂಬದವರು ಆರಾಮಾಗಿ ಜೀವನ ನಡೆಸಿದರು.