Select Page

ಆತ್ಮೀಯ ಗೆಳತಿ

 

ಗೀತಾ ಮತ್ತು ಕಾವ್ಯ ಪ್ರಾಣ ಸ್ನೇಹಿತರು, ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಒಂದೇ ತರಗತಿಯಲ್ಲಿ, ಒಟ್ಟಿಗೆ , ಓದುತ್ತಿದ್ದರು.   ಇಬ್ಬರು Class mates ಕೂಡ.  ಇಬ್ಬರು ಓದಿನಲ್ಲಿ ಮುಂದಿದ್ದರು.

 ಇಬ್ಬರಿಗೂ 2 ಅಥವಾ , 3 ಅಂಕಗಳ , ಅಂತರ ಮಾತ್ರ ಇರುತ್ತಿತ್ತು. ಅವರ ಊರಿನ,  ಶಾಲೆಯಲ್ಲಿ ಓದುವ ವಿಷಯದಲ್ಲಿ , ಇವರದೇ ಮೇಲುಗೈ. ಇವರಿಬ್ಬರ ಸ್ನೇಹ ಹೇಗೆಂದರೆ,  ಇವರಿಬ್ಬರೂ ಯಾರಿಗಾಗಿಯು  ಯಾರ ಮುಂದೆಯೂ ಒಬ್ಬರೊನೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ.

 

 

 

 

 

 ಚೆನ್ನಾಗಿ  ಅರ್ಥ ಮಾಡಿಕೊಂಡಿದ್ದರು,  ಶಾಲೆಯಲ್ಲಿ ಕೂಡ ಇಬ್ಬರೂ class leaders ಆಗಿದ್ದರು. ಹೀಗೆ  ಅವರ ಸ್ನೇಹ ಮತ್ತು  ಓದು  ಮುಂದೆವರೆಯಿತು. ಅವರು.  ಇಬ್ಬರು   ಪರೀಕ್ಷೆ  ಬರೆದು , ಯಾವಾಗಲೂ,  1St rank , 2nd rank , ಬರುತ್ತಿದ್ದರೂ.

 

 

 

ನಂತರದ ದಿನಗಳಲ್ಲಿ   ಇಬ್ಬರೂ  ಮುಂದಿನ , ತರಗತಿಗೆ   ಪಕ್ಕದ  ಊರಿನ ಶಾಲೆಗೆ  ಸೇರಿದರು. ಪಕ್ಕದ ಊರಿನ ಶಾಲೆಗೆ  ನಡೆದುಕೊಂಡು ಹೋಗಬೇಕಾಗಿತ್ತು. ಗೀತಾ ಒಂದು ದಿನ  ಕೂಡ ಶಾಲೆಗೆ ಗೈರು ಹಾಜರಾಗುತ್ತಿಲಿಲ್ಲ.

ಮತ್ತು ಬೇಗ ಎದ್ದು ರೆಡಿಯಾಗುತ್ತಿದ್ದಳು. ಕಾವ್ಯ ಓದಿನಲ್ಲಿ,  ಮಾತಿನಲ್ಲಿ , ಚುರುಕು  . ಆದರೆ ಶಿಸ್ತು ಪಾಲನೆ , ಮಾಡುತ್ತಿರಲಿಲ್ಲ. ಶಾಲೆ ಹೋಗಲು,  Ready ಆಗಲೂ ತನ್ನ ತಾಯಿ ಮತ್ತು  ಅಕ್ಕನನ್ನ ಅವಲಂಬಿಸಿದ್ದಳು.

 

 

ಕಾವ್ಯಳಿಗೆ, ತನ್ನ bag,  Books,  ಜಡೆ ಹಾಕುವುದೂ,  ಇದನೆಲ್ಲಾ ಕಾವ್ಯ ಅಕ್ಕ  ಮತ್ತು ತಾಯಿ ಮಾಡಬೇಕಾಗಿತ್ತು. ಬೆಳಿಗ್ಗೆ ತಿಂಡಿ ಕೂಡ ಅಮ್ಮ ಅಥವಾ  ಅಕ್ಕ ತಿನ್ನಿಸಬೇಕಿತ್ತು.   ಕಾವ್ಯಳ  ಜೊತೆಗೆ ಶಾಲೆಗೆ ಹೋಗಲು ಗೀತಾ ಅರ್ಧ ಗಂಟೆ  ಮುಂಚೆಯೇ ಬಂದು ಕಾಯುತ್ತಿದ್ದಳು,

 

 

 

 ಕಾರಣ best friend ಬಿಟ್ಟು ಹೋಗಲು ಆಗುತ್ತಿರಲಿಲ್ಲ. ಮತ್ತು ಶಾಲೆಗೆ  ನಡೆದು ಹೋಗ ಬೇಕ್ಕಿದ್ದ ಕಾರಣ.                                              ಹೆಣ್ಣು ಮಕ್ಕಳನ್ನ ಒಂಟಿಯಾಗಿ ಕಳುಹಿಸಲು ತಂದೆ ತಾಯಿಗಳು ಒಪ್ಪುತ್ತಿರಲಿಲ್ಲ. ಅದರಲ್ಲೂ ಗೀತಾಳ ತಾಯಿ  ಕಾವ್ಯ ಜೊತೆ ಬಿಟ್ಟರೆ ಬೇರೆ ಯಾರ ಜೊತೆಗೂ ಹೋಗಲು ಗೀತಾಳನ್ನ ಬಿಡುತ್ತಿರಲಿಲ್ಲ.

ವಿಧಿ ಇಲ್ಲದೆ ಗೀತಾ,   ಎಷ್ಟೇ  ತಡವಾದರೂ ಕಾವ್ಯಳ ಜೊತೆಯೇ ಹೋಗಬೇಕಾಗಿತ್ತು. ಹೀಗೆ  ನಡೆಯುತ್ತಾ ಇದ್ದ,  ಇವರು ಶಾಲೆಯ ದಿನಗಳನ್ನ ಮುಗಿಸಿ  ಮುಂದಿನ  ತರಗತಿಗೆ ಕಾಲಿಟ್ಟರು. ಆಗ ಗೀತಾಳ ಚಿಕ್ಕಮ್ಮನ , ಮಗಳು ಪುಷ್ಪ,  ಕೂಡ ಶಾಲೆಗೆ ಸೇರ್ಪಡೆಯಾದಳು.

           ಕಾವ್ಯ ಮತ್ತು  ಗೀತಾ,  ಒಟ್ಟಾಗಿ ಶಾಲೆಗೆ ಹೋಗುತ್ತಿದ್ದರು . ಅವರ ಜೊತೆ ಗೀತಾ ಚಿಕ್ಕಮ್ಮನ  ಮಗಳು  ಪುಷ್ಪ, ಕೂಡ ಸೇರಿಕೊಂಡಳು. 3ವರು   ಜೊತೆಯಲ್ಲಿಯೇ , ಶಾಲೆಗೆ ಹೋಗುತ್ತಿದ್ದರು. ಬರುತ್ತಿದ್ದರು.  ಯಥ ಪ್ರಕಾರ ಒಂದು ದಿನ ಕಾವ್ಯ ಶಾಲೆಗೆ ಸಿದ್ಧವಾಗಿರಲಿಲ್ಲ.

 

 

 

 

ಗೀತಾ ಬೇಗ ಬಂದು ಕಾವ್ಯಳಿಗಾಗಿ ಕಾಯುತ್ತಿದ್ದಳು. ಹಿಂದೆಯೆ,  ಪುಷ್ಪ  ಕೂಡ,  ಸಿದ್ಧವಾಗಿ ಬಂದಳು. ಸ್ವಲ್ಪ ಸಮಯ  ಕಾವ್ಯಳಿಗಾಗಿ ಕಾದರು, ಸಮಯ ಆದರೂ ಶಾಲೆಗೆ ಹೊರಡದ ಕಾವ್ಯಳ ಮೇಲೆ ತುಂಬಾ ಸಿಟ್ಟುಗೊಂಡ ಗೀತಾ,  ಕಾವ್ಯಗೆ ಹೀಗಂದು ಬಿಟ್ಟಳು.
 ಈ ಕಾವ್ಯ ಯಾವಾಗಲು ಶಾಲೆಗೆ ಬರಲು ತಡಮಾಡುತ್ತಾಳೆ,  ನಾವು ಬೇಗ ರೆಡಿಯಾಗಿ ಬಂದು ಎಷ್ಟು ಹೊತ್ತು.   ಕಾದರು,  ಕಾವ್ಯ ಅಂತು , ಬೇಗ ಬರುವುದಿಲ್ಲ. ಕಾವ್ಯಳದು ಯಾವಾಗಲೂ,  ಇದೇ ಹಣೆಬರಹ,  ದಿನ ಇವಳಿಗಾಗಿ ಕಾಯೋಕೆ,  ನಮಗೇನು ಹುಚ್ಚೆ.
 ನಾವು  ಇವಳನ್ನ ಬಿಟ್ಟು ಶಾಲೆಗೆ  ಹೋಗೊಣ ಬಾ. ಎಂದು ಪುಷ್ಪಳನ್ನು ಕರೆದುಕೊಂಡು , ಕಾವ್ಯಗೆ ತಿಳಿಸದೆ,   ಗೀತಾ ಶಾಲೆಗೆ,  ಹೊರಟುಬಿಟ್ಟಳು. ಇದನ್ನ ತನ್ನ ಕಿವಿಯಾರೆ ಕೇಳಿಸಿಕೊಂಡ ಕಾವ್ಯಗೆ  ಸಿಟ್ಟು ಬಂದಿತು.

ಇಷ್ಟು ದಿನ,  ನನ್ನ ಆತ್ಮೀಯ,  ಗೆಳೆತಿ ಆಗಿದ್ದ,  ಗೀತಾ ನನ್ನ ಬಗ್ಗೆ , ಬೇರೆಯವರ ಮುಂದೆ  , ಬಿಟ್ಟುಕೊಟ್ಟು ಮಾತಾಡಿದ್ದು ತಪ್ಪು .  ಮತ್ತು  ಹೊಸಬರು ಬಂದ ತಕ್ಷಣ ನನ್ನನ  ಮರೆತು ,ನನ್ನನು ಶಾಲೆಗೆ ಬಿಟ್ಟು ಹೋಗಿದ್ದು  ಸಹಿಸದ ಕಾವ್ಯ  .ಗೀತಾಳ ಜೊತೆ, ಇನ್ನು ಮುಂದೆ ಮಾತಾಡುವುದಿಲ್ಲ.

 

ಎಂದು ಮಾತಾಡುವುದನ್ನ ಬಿಟ್ಟಳು ಕಾವ್ಯ.

 

 

 

ಕಾವ್ಯ ಮತ್ತು ಗೀತಾ ಮೊದಲು, ಒಟ್ಟಿಗೆ   ಹೋಂವರ್ಕ್ ಬರೆಯುವುದು ,  ಒಟ್ಟಿಗೆ ಓದುವುದು,  ಒಟ್ಟಿಗೆ, ಆಟವಾಡುವುದು ಎಲ್ಲಾವನ್ನು ಒಟ್ಟಿಗೆಯೆ ಮಾಡುತ್ತಿದ್ದರು.  ಸಾಲದಕ್ಕೆ ಮನೆ ಕೂಡ ಅಕ್ಕ ಪಕ್ಕದಲ್ಲಿಯೇ ಇತ್ತು.

 ಹೀಗೆ ಜೊತೆ ಜೊತೆಗೆ  , ಆಟವಾಡುತ್ತಾ,  ಓದುತ್ತಾ,  ಇದ್ದ ಗೆಳತಿಯರು. ಮುನಿಸಿಕೊಂಡು ಮಾತಾಡುವುದನ್ನೆ ನಿಲ್ಲಿಸಿದರು. ಇವರ ಮಧ್ಯ ಗೆಳತಿಯರು ಬಂದು ಇಬ್ಬರನ್ನೂ ಒಟ್ಟುಗೊಡಿಸಲು. ಎಷ್ಟೇ, ಪ್ರಯತ್ನ   ಮಾಡಿದರು . ಪ್ರಯತ್ನಗಳೆಲ್ಲಾ ವಿಫಲವಾದವು.

 ಕಾವ್ಯಗೆ ಗೀತಾ ಆಡಿದ,  ಮಾತುಗಳಿಂದ ಮನಸ್ಸಿಗೆ ಬಹಳ ಬೇಜಾರಾಗಿತ್ತು. ಗೀತಾ ಇಷ್ಟು ದಿವಸ ನನ್ನ ಜೊತೆ ಇರುತ್ತಿದ್ದಳು. ನನ್ನ ಜೊತೆನೇ ಶಾಲೆಗೆ ಬರ್ತಾ ಇದ್ದಳು.

 

 

ಆದರೆ ಅವಳ ತಂಗಿ ಬಂದ ತಕ್ಷಣ,  ನನ್ನ ಬಿಟ್ಟು ಶಾಲೆಗೆ ಹೋದಳು. ನನ್ನನ್ನ ಮತ್ತು ನನ್ನ ಗೆಳೆತನವನ್ನ ಮರೆತಳು.ಅವಳನ್ನ,  ನಾನು ಎಂದಿಗೂ,  ಕ್ಷಮಿಸುವುದಿಲ್ಲ. ಎಂದು ಹಠ ಹಿಡಿದು ಕುಳಿತಳು.

 

 

 

ಗೆಳತಿಯರು, ನೀವಿಬ್ಬರೂ ಮುನಿಸು ಬಿಟ್ಟು ಮಾತಾನಾಡಿ,  ಎಂದು ಹೇಳಿದಾಗ ಕಾವ್ಯ.
ತಪ್ಪು ಗೀತಾ ಮಾಡಿರೋದು ನನ್ನಲ್ಲ,  ಗೀತಾನೆ , ಬಂದು .

 ನನ್ನ ಜೊತೆ , ಮಾತಾಡುದುರೆ,  ನಾನು ಮಾತಾಡ್ತೀನಿ  ಇಲ್ಲ ಅಂದ್ರೆ , ನಾನು ಮಾತಾಡಲ್ಲಾ . ಅಂತ ಕಾವ್ಯ , ಗೀತಾ, ನಾನು,  ಮಾತಾಡಲ್ಲ .   ಇಬ್ಬರ ಹಠದಿಂದ,  ಇವರ ಸ್ನೇಹ ಶಾಶ್ವತವಾಗಿ ಮುಗಿದು ಹೋಯಿತು.

  3 ತಿಂಗಳ ನಂತರ  ಗೀತಾ accident ಆಗಿ ತಲೆಯ ಹಿಂಭಾಗದಲ್ಲಿ  ಪೆಟ್ಟು ಬಿದ್ದದಿದರಿಂದ ಬದುಕುಳಿಯದೆ ಸತ್ತು ಹೋದಳು,

     ಗೀತಾಳ ಅಕಾಲಿಕ,  ಮರಣದ ಸುದ್ದಿಯನ್ನ , ಕೇಳಿದ ಕಾವ್ಯ,  ನೆಲಕ್ಕೆ , ಕುಸಿದು ಬಿದ್ದಳು.  ಗೀತಾಳ ಸಾವನ್ನ ಅರಗಿಸಿಕೊಳ್ಳಲಾಗದೆ , ಬಿಕ್ಕಿ ಬಿಕ್ಕಿ ಅಳುತ್ತ ಅಮ್ಮನ ಮಡಲನ್ನ ಅಪ್ಪಿದಳು,  ಗೀತಾಳ ಸಾವನ್ನ ಕಂಡ,  ಕಾವ್ಯಳ ಮನಸ್ಸಿಗೆ ಆಘಾತವಾಯಿತು.

 

 

 

 

 ಕಾವ್ಯ ಗೀತಾಳ ಮೇಲೆ,  ಸಿಟ್ಟು,  ಕೋಪ ಮಾಡಿಕೊಂಡ ನಾನು ಏನನ್ನ ಸಾಧನೆ ಮಾಡಿದೆ. ಕೊನೆಗೂ ಅವಳನ್ನ ಕ್ಷಮಿಸದೆ,  ಮಾತು ಆಡದೇ ಇದ್ದುಬಿಟ್ಟೆ.ಆದರೆ ಈ ಕೋಪ,  ಸಿಟ್ಟಿನಿಂದ ಏನು ಪ್ರಯೋಜನ,  ನನ್ನ ಗೆಳತಿಯನ್ನ ಕೊನೆ ಬಾರಿ,   ಮಾತಾಡಿಸಲು ಆಗಲಿಲ್ಲ. ನಾನು ಮಹಾ ಪಾಪಿ ಎಂದು ಹೇಳುತ್ತಾ, ಜೋರಾಗಿ, ತಲೆ, ಚಚ್ಚಿಕೊಂಡು, ಅಳುತ್ತಿದ್ದಳು.ಕಾವ್ಯಳ ಅಮ್ಮ ಸಮಾಧಾನ ಮಾಡಿದರು.

 

 

 ನಾನು ಪಾಪಿ,   ಹೀಗೆ ಮನಸಿನಲ್ಲೆ,  ತನ್ನನ ತಾನೆ,  ಬೈಯುದುಕೊಳ್ಳುತ್ತಾ, ಕಾವ್ಯ.  ಗೀತಾಳ ನೆನಪಲ್ಲಿಯೆ, ಸದಾ ಇರುತ್ತಿದ್ದಳು.
ಚನ್ನಾಗಿ ಓದುತ್ತಿದ್ದ ಕಾವ್ಯ,  ಗೀತಾ,  ಕಾಲವಾದ,  ನಂತರದ ದಿನಗಳಲ್ಲಿ,  ಕಾವ್ಯ ಓದುವುದರಲ್ಲಿ ಹಿಂದುಳಿದಳು.  ಯಾವಾಗಲೂ ಆಟದಲ್ಲಿ,  ಪಾಠದಲ್ಲಿ,  ಜೊತೆಗೆ ಪೋಟಿಯಲ್ಲಿದ್ದ , ಗೀತಾಳನ್ನ , ಕಳೆದುಕೊಂಡು ನೋವುಲಿದ್ದ, ಕಾವ್ಯಗೆ.
 ಆಟ ಪಾಠಗಳ ಮೇಲೆ ಆಸಕ್ತಿ ಕಡಿಮೆಯಾಗ ತೊಡಗಿತು. ಅದು ಯಾವ ಮಟ್ಟಕ್ಕೆಂದರೆ  rank student ಆಗಿದ್ದ ಕಾವ್ಯ Just pass ಗೆ  ಬಂದು ನಿಂತಿದ್ದಳು.

                ಕಾವ್ಯ ಓದು  ಮುಗಿಸುವ ಹೊತ್ತಿಗೆ, interest   ಇಲ್ಲದೇ,  just Class student ,  ಆದಳು.   ಗೀತಾಳ ಸಾವಿನ ನೋವಿನಿಂದ ಆಚೆ ಬರುವುದಕ್ಕೆ . ಕಾವ್ಯಗಳಿಗೆ  ವರ್ಷ ಗಳೇ ಕಳೆದವು.   ಕಾವ್ಯಳ ಮನಸ್ಸಿನಲ್ಲಿ  ,  ಎಂದಿಗೂ ಗೀತಾ, ಆತ್ಮೀಯ ಗೆಳೆತಿಯಾಗಿಯೇ ಉಳಿದಳು.  ಪ್ರತಿ ಕ್ಷಣ,  ಪ್ರತಿ ದಿನ, ಕಾವ್ಯಳ, ಮನಸಲ್ಲಿ, ❤️ ಹೃದಯ 💓 ದಲ್ಲಿ, ನೆನಪಲ್ಲಿ ಸದಾ, ಉಳಿದಳು ಗೀತಾ.

 

 

 

 

 

  ಗೀತಾ , ಕಾವ್ಯಳ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ಕಾವ್ಯಳ  ಉಸಿರು ಇರುವರೆಗೂ ಅಜಾರಮರವಾಗಿರುತ್ತಾಳೆ.

       ಈ ಕಥೆಯ  ನೀತಿ ಕಥೆ ಏನಂದರೆ,  ನಿಮ್ಮ ಸ್ನೇಹಿತರು ಅಥವಾ ನಿಮ್ಮ  ಮನೆಯ ಸದಸ್ಯರು  ಯಾರೇ ಇರಲಿ,  ಏನೇ ತಪ್ಪು ಮಾಡಿದರು,  ನೋವು ಮಾಡಿದರು ಸರಿ.ಅವರ ಮೇಲಿನ ಕೋಪದಿಂದ ಸಿಟ್ಟಿನಿಂದ  ಅವರನ್ನ ದೂರ  ಮಾಡಬೇಡಿ ,   ಎಲ್ಲಾವನ್ನು ಮರೆತು ಅವರನ್ನ ಕ್ಷಮಿಸಿ ಬಿಡಿ. ಅವರೊಂದಿಗೆ ಮೊದಲಿನಂತೆ  ಮಾತಾನಾಡಿ . ಈ ಸಮಯ ಮತ್ತೆ ಸಿಗದು .
Click Here