Select Page

.

  1.     ರಾಗಿಣಿ , ಮತ್ತು  ಅವಳ ತಂಗಿಯರು ತಂದೆ ಇಲ್ಲದ ಮಕ್ಕಳು . ತಾಯಿ , ಕಷ್ಟ ಪಟ್ಟು,  ಕೆಲಸ, ಮಾಡಿ.ಮೂವರು ಮಕ್ಕಳನ್ನು ಸಾಕಿ ಬೆಳೆಸಿ, ಓದಿಸಿದರು.
ರಾಗಿಣೆ gratuition ಮುಗಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಮದುವೆ ವಯಸ್ಸು ಕೂಡ  ಬಂದಿತು. ರಾಗಿಣಿಗೆ , ಇಬ್ಬರೂ  ತಂಗಿಯರು, ಕೂಡ  ಇದ್ದರೂ. ಅವರಿಗೂ ಮದುವೆ  ಮಾಡುವ,  ವಯಸ್ಸು ಬಂದೆ  ಬಿಟ್ಟಿತು. ಆದರಿಂದ, ಅಮ್ಮ ರಾಗಿಣಿಗೆ ಮದುವೆ ಮಾಡುವ ಯೋಚನೆ ಮಾಡಿದ್ದರು.

 ಅವರ ಯೋಚನೆಯಂತಯೇ , broker ಮೂಲಕ ಅವರದೇ ಜಾತಿಯ,   ಒಂದು ಹುಡುಗನನ್ನು, ನೋಡಿ ಮದುವೆಗೆ,  ಗೊತ್ತು ಮಾಡಿದರು. ಹುಡುಗ ನೋಡಲು ಚನ್ನಾಗಿಯೇ ಇದ್ದಾನೆ,  ಒಳ್ಳೆ ಕೆಲಸ ಕೈ ತುಂಬಾ ಸಂಬಳ. ಮದುವೆ ಹುಡುಗನಿಗೂ ತಂದೆ ವಿಧಿವಶರಾಗಿದ್ದರು.

 

 

 

 

ರಾಗಿಣಿ ಕೂಡ ನೋಡಲು  ಅಪ್ಸರೆ . ಹುಡುಗ,  ಹುಡುಗಿ ನೋಡಲು made for each other,   ಹಾಗೆ ಇದ್ದಾರೆ.
  ರಾಗಿಣೆ ಮದುವೆ ,   ಎರಡು ಮನೆಯವರ ಒಪ್ಪಂದದ ಮೇರೆಗೆ ರಾಗಿಣಿಯ  ಮದುವೆಯು, ಆಯಿತು. ನೂರಾರು ಕನಸನ್ನ ಹೊತ್ತು ಬಂದ ರಾಗಿಣಿಗೆ ನಿರಾಸೆ ಮೂಡಿಸಿತು.

ಮದುವೆ ಆಗಿ. ಅತ್ತೆ ಮನೆಗೆ,  ಹೋದ ರಾಗಿಣಿಗೆ,  ಗಂಡ, ಪ್ರೀತಿ ಕಾಳಜಿ ಯಾವುದು,ಸಿಗಲಿಲ್ಲ.  ಅವನು, ಮಾತು ಕೂಡ ಆಡುತ್ತಿರಲಿಲ್ಲ. ರಾಗಿಣಿ ರೂಮಿನಲ್ಲಿ ಇದ್ದರೆ ಅವನು Hall ನಲ್ಲಿ ಇರುತ್ತಿದ್ದ.

 

 

 

 

 

ರೂಮಿಗೆ ಬಂದರೆ, ಹಾಲ್ ಗೆ, ಹೋಗುವುದು. Hall ಗೆ ಬಂದರೆ,  ರೂಮಿಗೆ ಹೋಗುತ್ತಾ ಇದ್ದ.    ಒಟ್ಟಾರೆ ,  ರಾಗಿಣಿಯ , ಮುಖ, ಕೂಡ ನೋಡುತ್ತಿರಲಿಲ್ಲ .   ರಾಗಿಣಿ ಮತ್ತು ಅವಳ ಗಂಡನ ನಡುವೆ,  ಯಾವ ಸಂಬಂಧವೂ ಪ್ರಾರಂಭ ವಾಗಲಿಲ್ಲ.

    ರಾಗಿಣಿ ಗಂಡನಿಗೆ ,  ಹೆಂಡತಿ ಮೇಲೆ ಯಾವ ಭಾವನೆಯು ಇಲ್ಲ. ಪ್ರೀತಿಯು ಇಲ್ಲ. ಆದರೆ ಮದುವೆ ಯಾವ ಪುರುಷಾರ್ಥಕ್ಕೆ , ಮಾಡಿಕೊಂಡ ಎಂದು,  ರಾಗಿಣಿ ಗಂಡ ಮತ್ತು ಅವಳ ಅಮ್ಮನಿಗೆ ಮಾತ್ರ ಗೊತ್ತು.

 ರಾಗಿಣಿ ತನ್ನ , ಗಂಡನ ವಿಚಿತ್ರ,  ನಡವಳಿಕೆಯನ್ನ,  ನೋಡಿ ಏನು ,ಅರ್ಥವಾಗದೆ .ಮನಸಿನಲ್ಲೆ , ಚಿಂತಿಸುತ್ತಾ , ಯಾರಲ್ಲಿಯು ಹೇಳದೆ.  ಕಾಲ ದೂಡುತ್ತಿದ್ದಳು. ರಾಗಿಣಿ ಅಡಿಗೆ ಮಾಡಿ ಬಡಿಸಿದರು.

ಗಂಡ  ಊಟ ಮಾಡದೇ,  ತನ್ನ ತಾಯಿ ಕೈ ಯಿಂದ ಊಟ ಬಿಡಿಸಿಕೊಂಡು , ತಿನ್ನುತ್ತಿದ್ದ. ಬೇಸರಗೊಂಡ,  ರಾಗಿಣಿ .ಒಂದು ಸಲ,  ಅತ್ತೆಯನ್ನ ಕೇಳಿದಳು.  ಅತ್ತೆ ನಿಮ್ಮ ಮಗ , ಹೀಗೆಕೆ ನಡೆದುಕೊಳ್ಳುತ್ತಾರೆ.

 ನನ್ನ ಹತ್ತಿರ ಮಾತಾಡುವುದಿಲ್ಲ,  ನಾನು ಬಡಿಸಿದ ಊಟಮಾಡುವುದಿಲ್ಲ,  ಹೀಗೆ ಇದ್ದರೆ .ನಮ್ಮ ,  ಜೀವನ ಮುಂದೆ , ಹೇಗೆ ಎಂದು  ಕೇಳಿದಳು.

   ಅತ್ತೆ ಏನೋ,   ತಡಬಡಿಸುತ್ತಾ,  ಆಗೆಲ್ಲಾ ಏನು? ಇಲ್ಲಮ್ಮ . ನೀನು ಯೋಚನೆ , ಮಾಡಬೇಡಮ್ಮ.  ನನ್ನ ಮಗ,  ಸ್ವಲ್ಪ  ಸಂಕೋಚ , ಸ್ವಭಾವದವನು.   ಹೆಣ್ಣು ಮಕ್ಕಳ ಜೊತೆ ಅಷ್ಟೊಂದಾಗಿ ಬೆರೆಯುವುದಿಲ್ಲ .

ನನ್ನ ಮೇಲೆ,  ಜಾಸ್ತಿ  ಅವಲಂಬಿತನಾಗಿ , ಬೆಳೆದು ಬಿಟ್ಟ. ಆದರಿಂದ,  ನಿನ್ನ ಜೊತೆ,  ಹೊಂದಿಕೊಳ್ಳಲು. ಸ್ವಲ್ಪ ಸಮಯ, ಹಿಡಿಯುತ್ತದೆ. ದಿನ ಕಳೆದಂತೆ ಅವನು ಸರಿ,  ಹೋಗುತ್ತಾನೆ ಎಂದು. ಅತ್ತೆ ಆ ಸಮಯಕ್ಕೆ , ಏನೋ ಸಬೂಬು ಹೇಳಿ.  ಸಮಾಧಾನ ಮಾಡಿದರು.
   ರಾಗಿಣಿ ನೋಡಲು,  ತುಂಬಾ ಸುಂದರಿ.  ಅವಳನ್ನ  ಮದುವೆ ಆದ,  ಯಾವುದೇ ಗಂಡಸು , ಆದರೂ ಅವಳನ್ನ,  ಪ್ರೀತಿ ಮಾಡದೇ,  ಮುದ್ದು ಮಾಡದೇ,  ಹೆಂಡತಿಯಿಂದ , ದೂರ ಇರುತ್ತಿರಲಿಲ್ಲ.

 ಆದರೆ ರಾಗಿಣಿಯ ಗಂಡ ಅದಕ್ಕೆ ತದ್ವಿರುದ್ಧವಾಗಿ ಇದ್ದಾನೆ. ಇದನೆಲ್ಲ ರಾಗಿಣೆ , ತಾಯಿ ಬಳಿ,  ಹೇಳುತ್ತಿರಲಿಲ್ಲ.  ತಾಯಿ  ಮನಸಿಗೆ,  ನೋವಾಗಬಾರದೆಂದು , ಎಲ್ಲಾ  ನೋವನ್ನು , ತಾನೇ ನುಂಗಿ,  ಆಚೆ ಸಂತೋಷವಾಗಿ ಇರುವಂತೆ ನಟಿಸುತ್ತಿದ್ದಳು.

 ಗಂಡನ ಮನಸು , ಬದಲಾಯಿಸಲು , ಗಂಡನ ಪ್ರೀತಿ ಪ್ರೇಮವನ್ನ ಬಯಸಿ,  ಅವನು ಮತ್ತು,  ರಾಗಿಣಿ ಏಕಾಂತವಾಗಿ,  ಇರಲು ಬಯಸಿ,  ತಮ್ಮ ಮೊದಲ ರಾತ್ರಿಯನ್ನ ಆಚರಿಸಿಕೊಳ್ಳಲು  , ಪ್ರವಾಸಕ್ಕೆಂದು,  ತನ್ನ ಗಂಡನನ್ನು , ಬೇರೆ ಊರಿಗೆ,  ಕರೆದುಕೊಂಡು ಹೋಗುತ್ತಾಳೆ.

ಅಲ್ಲಿಗೆ,    ಹೋದ ನಂತರ. ಪ್ರಕೃತಿ ಸೌಂದರ್ಯವನ್ನ,  ಸವಿಯುತ್ತಾ.  ಗಂಡನೊಂದಿಗೆ ಏಕಾಂತದಲ್ಲಿ,  ವಿಹರಿಸಲು,  ಇಚ್ಛಿಸದ  ರಾಗಿಣಿಗೆ. ಬೇರೆಯದೇ ವಿಷಯದ ಸಂಗತಿ ಕಾದಿತ್ತು . ರಾಗಿಣಿ, ಗಂಡನ  ,  ಜೊತೆ,ಬೆರೆತು , ಕಷ್ಟ,ಸುಖ ಹಂಚಿಕೊಂಡು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಮುಂದಿನ ಜೀವನ ಸಂತೋಷವಾಗಿ ಕಳೆಯಲೆಂದು ಕನಸು ಕಾಣುತ್ತಿದ್ದ .
ರಾಗಿಣಿಯನ್ನ, ಅವಳು ಗಂಡ ಬೇಸರದಲ್ಲೆ ಇರಿಸಿದ.ರಾಗಿಣಿ, ಗಂಡನ ಜೊತೆ ಮುಕ್ತವಾಗಿ,ಮಾತನಾಡಲೂ, ಅವನ , ಕಷ್ಟ ಸುಖ ಹಂಚಿಕೊಳ್ಳಲು, ಅವನ ಸಮಸ್ಯೆ ಏನು ಎಂದು ಕೇಳಲು ,ಮುಂದಾದರೂ, ರಾಗಿಣಿ ಗಂಡ, ರಾಗಿಣಿ ಜೊತೆ, ಯಾವ ವಿಷಯಕ್ಕೂ, ಆಶಕ್ತಿ, ತೋರಿಸಲಿಲ್ಲ.ಅವನು, ಮಾತನಾಡಲೂ, ರಾಗಿಣಿಗೆ ಅವಕಾಶ ಕೊಡದೇ,ನನಗೆ  ತಲೆ ನೋವು. ಮೈಗೆ, ಹುಷಾರಿಲ್ಲ ನಾನು ,  ವಿಶ್ರಾಂತಿ ಪಡೆಯ ಬೇಕೆಂದು.
 ಹಾಗೆ, ಹೀಗೆ ಎಂದು ನೆಪ,ಹೇಳಿ  ರೂಮಿನತ್ತ ನಡೆದು ಬಿಡುತ್ತಾನೆ.  ರಾಗಿಣಿಗೆ, ಇವನ, ರೀತಿ ನೀತಿ, ಒಂದು ತಿಳಿಯದೇ, ಇವನ ವ್ಯಕ್ತಿತ್ವ ಅರ್ಥವಾಗದೇ ಗೊಂದಲಕ್ಕೆ ಹಿಡಾದಳು.ಇವರ, ಪ್ರವಾಸದ, ದಿನಗಳು ಮುಗಿದವು.
ರಾಗಿಣಿಯಿಂದ, ದೂರ ದೂರ ಹೋಗುತ್ತಾ, ಅವಳ ಜೊತೆ , ಮಾತು ಕಥೆ,ಏನು ಆಡದೇ, ಹಿಂಜರಿದ ಗಂಡನ, ಸಭ್ವಾವ ಕೊನೆಗೂ ಅರ್ಥವಾಗದೇ ರಾಗಿಣಿ, ಪ್ರವಾಸ ಮುಗಿಸಿ ಬೇಸರದಿಂದ ವಾಪಸ್ ಊರಿಗೆ ಬಂದಳು.ಮನೆಗೆ ಬಂದ ರಾಗಿಣಿಯನ್ನ ಅತ್ತೆ ಕೂಡ,ಏನು ವಿಚಾರಿಸದೇ ಸುಮ್ಮನಾದಳು.
ಹೀಗೆ ಒಂದು ವರ್ಷ ಕಳೆಯಿತು.ಇವರ , ವಿವಾಹ ಜೀವನದಲ್ಲಿ ಯಾವ ಬದಲಾವಣೆಯೂ ಕಾಣಲಿಲ್ಲ.ರಾಗಿಣಿ ಗಂಡ, ರಾಗಿಣಿಯನ್ನ, ಹೆಂಡತಿ ಎಂಬ, ಭಾವನೆ ಹೊರತು ಪಡಿಸಿ. ಅವಳು ಒಬ್ಬ ಮನುಷ್ಯಳು ಎಂಬ,ಸಹಜ ಭಾವನೆಯಿಂದ ಕೂಡ ಅವನು  ನೋಡಲಿಲ್ಲ. ಅವಳು, ನನ್ನನ ,  ಮದುವೆಯಾಗಿ, ನಮ್ಮ ಮನೆಯಲ್ಲಿ, ನನ್ನ ಹೆಂಡತಿಯಾಗಿ, ಜೀವಿಸುತ್ತಿದ್ದಾಳೆ.
 ಅವಳು, ಊಟ ತಿಂಡಿ ಮಾಡತಾ ಇದಾಳಾ, ಅವಳ, ಆರೋಗ್ಯ ಹೇಗಿದೆ ಯಾವ, ವಿಚಾರದ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.ಅವನಾಯಿತು, ಅವನ ಕೆಲಸವಾಯಿತು ಹೀಗೆ ಇದ್ದುಬಿಟ್ಟ. ರಾಗಿಣಿ, 2 ವರ್ಷಗಳ ಕಾಲ, ಹೀಗೆ ಒಂಟಿಯಾಗಿ, ಗಂಡನ ಮನೆಯಲ್ಲಿ ಕಾಲ ದೂಡಿದಳು. ಅತ್ತೆ ಬಳಿ ಮತ್ತೆ, ಮತ್ತೆ ನಿಮ್ಮ ಮಗ ಯಾಕೆ, ಹೀಗೆ? ನಡೆದುಕೊಳ್ಳುತ್ತಾರೆ. ಮದುವೆ, ಸಂಸಾರ, ಹೆಂಡತಿ, ಇದರ ಬಗ್ಗೆ ಆಶಕ್ತಿ, ಇಲ್ಲ ಎಂದಾದರೆ ಈ ಮದುವೆ ಯಾಕೆ ಮಾಡಿಕೊಂಡರು.
 ಅವರಿಗೆ ಏನು ಸಮಸ್ಯೆ?ಹೇಳಿ ಎಂದು ಅತ್ತೆಯ ಬಳಿ ಕೇಳುತ್ತಾನೆ ಬರುತ್ತಿದ್ದಳು. ಅವನಿಗೆ ಏನು ಸಮಸ್ಯೆ ಇಲ್ಲ. ಅವನು, ಹೆಣ್ಣು ಮಕ್ಕಳ ಜೊತೆ ಹೊಂದಿಕೊಳ್ಳಲು,ಬೆರೆಯಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು, ಸಬುಬೂ ಹೇಳುತ್ತಿದ್ದಳು. ಎರಡು ವರ್ಷಗಳ ಕಾಲ,ಕಾದು ಸಾಕಾದ ರಾಗಿಣಿ ಒಂದು,ದಿನ. ಅವಳ ಅತ್ತೆ, ಬೇರೆ ಊರಿಗೆ ಹೋದ ಸಮಯದಲ್ಲಿ. ಗಂಡನ ಕೊಠಡಿಗೆ ಹೋದಳು.
 ಅವಳ ಎಲ್ಲಾ ಪ್ರಶ್ನೆಗಳ,ಸುರಿ ಮಳೆ ಸುರಿಸಿದಳು.  ಒಂದು, ಹೆಣ್ಣಿಗೆ .ತಾಳಿಕಟ್ಟಿ ಮದುವೆಯಾಗಿ,  ಅವಳ, ಗಂಡನಾಗಿ, ನಿನ್ನ ಹೆಂಡತಿ ಜೊತೆ, ಎರಡು ವರ್ಷಗಳೇ ಕಳೆದರೂ. ನನ್ನ ಜೊತೆ, ಒಂದು ಮಾತು ಆಡುವುದಿಲ್ಲ.ನಾನು ಮಾಡುವ ಅಡಿಗೆ, ಬಡಿಸುವ ಊಟ ಯಾವುದನ್ನು ತಿನ್ನುವುದಿಲ್ಲ. ಯಾಕೆ ಹೀಗೆ ಮಾಡ್ತೀರಾ. ನನ್ನನ, ನೋಡಿ. ಒಪ್ಪಿ,ತಾನೆ ಮದುವೆ ಮಾಡಿಕೊಂಡಿರಿ.
 ಆದರೆ ನನ್ನಿಂದ ಯಾಕೆ ದೂರ ಇದೀರಿ.ನನ್ನಿಂದ ಏನಾದರೂ ತಪ್ಪಾಯಿತೆ ಎಂದು ಕೇಳಿದಳು. ಹಾಗೆನು ಇಲ್ಲ ಎಂದು ಅವನು ಹೇಳಿದನು. ರಾಗಿಣಿ,ಸರಿ ಇಷ್ಟು ದಿನಕ್ಕೆ ಇವತ್ತಾದರೂ ಮಾತು ಆಡಿದನಲ್ಲಾ ಎಂದು, ಹೆಚ್ಚೆನು ಪ್ರಶ್ನೆ ಕೇಳಿದೆ . ಊಟಕ್ಕೆ ರೆಡಿ ಮಾಡಿ, ಊಟ ಬಡಿಸಿ,ಇಬ್ಬರೂ ಊಟ ಮಾಡಿ. ಮಲಗಲು ಕೋಣಿಗೆ ಹೋದರು.ರಾಗಿಣಿ ಆಸೆಯಿಂದ, ಪ್ರೀತಿಯಿಂದ ಗಂಡನ ಬಳಿ ಮಲಗಿದಳು. ಅವಳು ಗಂಡನಿಗೆ ಹೇಳಿದಳು.
ರೀ ನಮ್ಮ ಮದುವೆಯಾಗಿ ಎರಡು ವರ್ಷ ಆಯಿತು. ನಮ್ಮ ತಾಯಿ, ನಮ್ಮ , ಸ್ನೇಹಿತರು.ಎಲ್ಲರೂ ,ವಿಶೇಷ ಏನು ಇಲ್ಲವೇ ಮದುವೆಯಾಗಿ ಎರಡು ವರ್ಷ ಆಯಿತು ಎಂದು ಕೇಳುತ್ತಿದ್ದಾರೆ. ನೀವು ಬೇರೆ ನನ್ನ, ಜೊತೆ ಈ ಎರಡು ವರ್ಷ ದೂರನೇ ಇದ್ದಿರೀ. ಇನ್ನು ಮುಂದೆ ನಾವು ಸುಖವಾಗಿ ಸಂಸಾರ ಮಾಡೋಣ. ನಮಗೆ ಅಂತ ಒಂದು ಮಗು ಮಾಡಿಕೊಳ್ಳೊಣ ಎಂದಳು. ಗಾಬರಿಗೊಂಡ, ರಾಗಿಣಿ ಗಂಡ ಸರಿ ಎಂದು ಹೇಳಿದನು.
 ಮತ್ತೆ ನಾಳೆ, ಹೆಂಡತಿ, ರಾಗಿಣಿ ಪ್ರೀತಿಯಿಂದ,ಗಂಡನ ಬಳಿ ಬಂದಳು.ಹತ್ತಿರ ಬಂದ ರಾಗಿಣಿಯನ್ನ ಗಂಡ ಮುಟ್ಟದೇ ದೂರನೇ ಹೋಗುತ್ತಿದ್ದ. ರಾಗಿಣಿಗೆ ಅರ್ಥವಾಗದೆ, ಕೇಳಿದಳು. ರೀ ನಾನು, ನಿಮ್ಮ ಹೆಂಡತಿ, ನಿಮ್ಮ ಬಳಿ ಬಂದರೆ. ನನ್ನ ಮಟ್ಟದೇ, ಕೂಡ ದೂರ ಹೋಗುತ್ತಿರಿ ಯಾಕೆ ಏನಾಯಿತು. ಮಗು ಮಾಡಿಕೊಳ್ಳಲು ನಿಮಗೇ ಇಷ್ಟ ಇಲ್ಲವೇ. ಹಾಗೆ ಹೀಗೆ ಎಂದು ಮತ್ತೆ ಪ್ರಶ್ನೆ ಕೇಳಿದಳು.
ಗಂಡನಿಗೆ ಉತ್ತರ,ಹೇಳಲು ಆಗದೇ. ಇಲ್ಲ, ನನಗೆ ಈ ವಿಷಯದಲ್ಲಿ ಆಸಕ್ತಿ ಇಲ್ಲ ಎಂದನು. ರಾಗಿಣಿ, ಅದೇ ಯಾಕೆ, ಕಾರಣ ತಿಳಿಸಿ. ಆಶಕ್ತಿ ಇಲ್ಲವಾದಲ್ಲಿ, ನನ್ನನ ಏಕೆ ಮದುವೆ ಮಾಡಿಕೊಂಡಿರಿ ಎಂದು, ಅಳುತ್ತಾ, ಚೀರುತ್ತಾ ಕೇಳಿದಳು.ಆ ಕ್ಷಣಕ್ಕೆ ಏನು ಹೇಳದೆ ಗಂಡ ಸುಮ್ಮನಾದನು. ರಾಗಿಣಿ ಬೆಳ್ಳಿಗ್ಗೆ ಎದ್ದು, ಗಂಡನಿಗೆ ಏನು ಸಮಸ್ಯೆ ಎಂದು ತಿಳಿಯಲು.ವೈದರ ಬಳಿ ಗಂಡನನ್ನ ಕರೆದೊಯ್ಯುಲು ನಿರ್ಧರಿಸಿದಳು.ಗಂಡನ ಬಳಿ ಬಂದು, ವೈದರ ಬಳಿ ಹೋಗಲು ಕರೆದಳು. ಗಂಡ ಬರುವುದಿಲ್ಲ. ಎಂದನು.
ಬರದೇ ಹೋದಲ್ಲಿ ನಾನು ಬಿಡುವುದಿಲ್ಲ ಎಂದಳು.ನಮ್ಮಿಬ್ಬರ ಸಮಸ್ಯೆಗೆ, ನಿಮ್ಮ ಅಮ್ಮ, ಏನು ಪರಿಹಾರ ಹುಡುಕುವುದಿಲ್ಲ. ನಿಮ್ಮ ಸಮಸ್ಯೆ ಏನೆಂದು ನೀವು ಹೇಳುವುದಿಲ್ಲ. ಮದುವೆಯಾಗಿ, ನಿಮ್ಮ ಮನೆ ಕೆಲಸದವಳ ರೀತಿ ಇರಲು ನಾನು ಇಷ್ಟ ಪಡುವುದಿಲ್ಲ. ನಿಮ್ಮ ಜೊತೆ, ಸುಖವಾಗಿ, ನೆಮ್ಮದಿಯಾಗಿ ಜೀವನ ನಡೆಸಬೇಕು.ಆದರಿಂದ ನಿಮಗೆ, ಅಥವಾ ನನಗೆ ಯಾವುದೇ, ಸಮಸ್ಯೆ ಇದ್ದರೂ ಬಗೆಹರಿಸಿಕೊಳ್ಳೊಣ .
ಆದರಿಂದ. ನಾವು ಒಳ್ಳೆಯ, ವೈದರ ಬಳಿ ಹೋಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಬನ್ನಿ ಹೋಗೋಣ. ಇಲ್ಲ ಅಂದ್ರೆ ನಮ್ಮ ತಾಯಿ, ಮನೆಯವರಿಗೆ ತಿಳಿಸಿ ಪರಿಹಾರ ಕಂಡುಕೊಳ್ಳೊಣ ಎಂದಳು. ಗಂಡ, ಸಂಜೆ ಬರ್ತಿನಿ ಎಂದು ಆಫೀಸ್ ಗೆ ಹೊರಟು ಹೋದ. ಗಂಡನ ಕೋಣೆಯಲ್ಲಿ, ಇದ್ದ ರಾಗಿಣಿಯ ಕಣ್ಣಿಗೆ ಒಂದು.ವೈದರ ಪ್ರಮಾಣ ಪತ್ರ ಸಿಕ್ಕಿತು. ಅದರಲ್ಲಿ ಇದ್ದ ವಿಷಯ ನೋಡಿ, ರಾಗಿಣಿ  ದಿಗ್ಬ್ರಮೆಗೊಂಡಳು.
ಆ ಪತ್ರದಲ್ಲಿ, ರಾಗಿಣಿ ಗಂಡ,  ಪುರುಷತ್ವ ಇಲ್ಲದವನಾಗಿದ್ದ. ವಿವಾಹ, ಜೀವನದ ಯಾವ ವಿಷಯಕ್ಕೂ, ಸ್ಪಂದಿಸಲು, ಅನುಭವಿಸಲು ಆಗದ ಕಾಯಿಲೆ ಹೊಂದಿದ್ದ. ಇದು ಅವನ ಮದುವೆಗೆ ಮೊದಲೇ ವೈದರು ನೀಡಿದ್ದ ಪ್ರಮಾಣ ಪತ್ರವಾಗಿತ್ತು.ವೈದರ ಪ್ರಮಾಣ ಪತ್ರ ಓದಿದ ರಾಗಿಣಿ ಸಿಡಿಲು ಬಡಿದಂತಾಗಿ  ದಿಕ್ಕೆ ತೋಚದೆ, ಗಂಡ ಬರುವವರೆಗೂ ದೀಪ ಕೂಡ ಹಚ್ಚದೇ ಕತ್ತಲೆಯ ಮನೆಯೊಳಗೆ ನಿರಾಸೆಯಿಂದ ಕುಳಿತಿದ್ದಳು.
ತಡರಾತ್ರಿಯಲ್ಲಿ, ರಾಗಿಣಿಯ, ಗಂಡ ಮತ್ತು ಅವನ ಊರಿಗೆ ಹೋಗಿದ್ದ ಅವನ ಅಮ್ಮ ಇಬ್ಬರೂ ಜೊತೆಯಲ್ಲಿ ಮನೆಗೆ ಬಂದರು. ಅತ್ತೆ, ಮನೆ 🏡 🏠 ಒಳಗೇ ಬರುತ್ತಿದ್ದ ಹಾಗೆ, ಏನಿದು ಕತ್ತಲೆಯಾಗಿದೆ, ಇನ್ನೂ ದೀಪ ಹೆಚ್ಚಿಲ್ಲ, ಈ ರಾಗಿಣಿ ಎಲ್ಲಿ ಹೋದಳು ಎನ್ನುತ್ತಾ ದೀಪ ಹಚ್ಚಿದಳು. ದೀಪ ಬೆಳಗುತ್ತಿದಂತೆ, ಹತಾಶೆ ಭಾವನೆಯಲ್ಲಿ, ಒಂಟಿಯಾಗಿ ಕುಳಿತಿದ್ದ ರಾಗಿಣಿ, ಗಂಡ ಮತ್ತು ಅತ್ತೆಯನ್ನ ದಿಟ್ಟಿಸಿ ನೋಡಿದಳು.
 ಗಂಡ ಮತ್ತು ಅತ್ತೆ ಕೂಡ ರಾಗಿಣಿಯನ್ನ ನೋಡಿದರು. ಹಾಗೆ ಅವಳ ಬಳಿ ಬಿದ್ದಿದ್ದ , ವೈದರ ಪ್ರಮಾಣ ಪತ್ರವನ್ನು ನೋಡಿದರು. ರಾಗಿಣಿ, ಅತ್ತೆ ಮತ್ತು ಗಂಡನ ಬಳಿ ಬಂದು ಏನಿದು ಎಂದು ಕೇಳಿದಳು. ಇಬ್ಬರು, ಉತ್ತರ ನೀಡಲಾಗದೆ ತಂಡ ಬಡಿಸಿದರು.ರಾಗಿಣಿಗೆ ಸಿಕ್ಕಬಟ್ಟೆ ಕೋಪ.ಸಿಟ್ಟು. ಆದರೂ ಅಸಹಾಯಕತೆಯಿಂದ, ಅವರನ್ನ ಕೇಳಿದಳು. ಯಾಕೆ, ಈ ರೀತಿ ನನ್ನ, ಜೀವನ ಹಾಳು ಮಾಡಿದಿರಿ ?. ಇವರಿಗೆ ಈ ಸಮ‌ಸ್ಯೆ ಇರುವುದು ಮದುವೆಗೆ ಮುಂಚೆ ಗೊತ್ತಾಗಿದೆ. ವೈದರು ಖಚಿತಪಡಿಸಿ, ಪ್ರಮಾಣ ಪತ್ರವನ್ನು, ಕೊಟ್ಟಿದ್ದರೂ.  ಎಲ್ಲಾವನ್ನು , ಮುಚ್ಚಿಟ್ಟು ಇವರಿಗೆ, ನನ್ನನ್ನು ಯಾಕೆ ಮದುವೆ ಮಾಡದೀರಿ.
ನನ್ನ ಜೀವನ, ಹಾಳು ಮಾಡುವ ಕೆಲಸ ಯಾಕೆ ಮಾಡದೀರಿ. ನಾನು ಈಗ ಏನು ಮಾಡಲಿ ಅಂತ ಅಳುತ್ತಾ ಕುಳಿತಳು. ರಾಗಿಣಿ, ಓದಿದ ಹುಡುಗಿ. ಈ ಜೀವನ ಮುಂದುವರಿಸುವುದು ವ್ಯರ್ಥ. ಇವರು ಯಾವ, ಸ್ವಾರ್ಥಕ್ಕಾಗಿ ನನ್ನ ಜೀವನ ಹಾಳು ಮಾಡಿದರೂ ಗೊತ್ತಾಗಲಿಲ್ಲ.
 ಆದರೆ ಇನ್ನೂ ಮುಂದೆ ಈ ಜೀವನ ನನಗೆ ಬೇಡ ಎಂದು ನಿರ್ಧರಿಸಿ.ತನ್ನ , ತಾಯಿಗೆ, ನಡೆದ ಎಲ್ಲಾ ವಿಷಯವನ್ನು , ತಿಳಿಸಿ.  ಅವಳ ಗಂಡನ ಬಳಿ ವಿಚ್ಛೇದನ, ಪಡೆದುಕ್ಕೊಳುತ್ತೆನೆ ಎಂದು, ತನ್ನ. ತಾಯಿಗೆ  ತಿಳಿಸಿದಳು. ರಾಗಿಣಿ ತಾಯಿ, ಕೂಡ. ಸರಿಯಾಗಿ ವಿಚಾರಿಸದೇ ಆತುರದ, ನಿರ್ಧಾರಲ್ಲಿ, ಮದುವೆ, ಮಾಡಿ. ನನ್ನ ಮಗಳ ಜೀವನ ಹಾಳು ಮಾಡಿರುವೆ ಎಂದು ತಿಳಿದು ಅವಳ ಇಚ್ಛೆಯಂತೆ ಮಾಡಲು ತಿಳಿಸಿದರು.
ರಾಗಿಣಿ, ಅವಳ ಗಂಡನ ಬಳಿ ಬಂದು ಕೇಳಿದಳು. ಇನ್ನು ಮುಂದೆ, ಈ ರೀತಿ ಜೀವನ ನಡೆಸಲು ಸಾಧ್ಯವಿಲ್ಲ. ಆದರಿಂದ, ಈ ಅರ್ಥವಿಲ್ಲದ ಮದುವೆಯಿಂದ, ಮುಕ್ತಿ ಪಡೆದುಕೊಳ್ಳೋಣ . ಆದರಿಂದ ಇಬ್ಬರೂ ಒಪ್ಪಿಗೆಯಿಂದ ವಿಚ್ಛೇದನ ಪಡೆದುಕೊಳ್ಳೋಣವೇ ಎಂದು ಕೇಳಿದಳು. ಅವನು ಕೂಡ ವಿಚ್ಛೇದನಕ್ಕೆ ಒಪ್ಪಿಕೊಂಡನು.
ತನ್ನ, ತಾಯಿ, ನನಗೆ ಇರುವ ಸಮಸ್ಯೆಯನ್ನ, ಪ್ರಪಂಚದದಿಂದ, ಈ  ಸಮಾಜದಿಂದ, ಮುಚ್ಚಿಡಲು. ಮತ್ತು ಒಬ್ಬನೇ, ಮಗನಿಗೆ, ಮದುವೆ ಮಾಡದೇ,ಹೋದರೆ? ಜನರು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ. ತಲೆ ತಿನ್ನುತ್ತಾರೆ. ತಂದೆ, ಇಲ್ಲದ ಮಗ. ಒಡ ಹುಟ್ಟಿದವರು ಕೂಡ ಅವನಿಗೆ ಇಲ್ಲ. ಮುಂದೆ, ಅವನ ಜೀವನದ ಆಸರೆಗಾಗಿ. ಅವನಿಗಿದ್ದ, ಕಾಯಿಲೆಯನ್ನು ಮುಚ್ಚಿಟ್ಟು. ಮಗನಿಗೆ ಮದುವೆ ಒಂದು ಮಾಡಿ ಬಿಟ್ಟರೆ ನನ್ನ ಕರ್ತವ್ಯ ಮುಗಿಯುತ್ತೆ .
 ಸಮಾಜದ ಎದುರು, ಈ ರೀತಿ, ಕಾಯಿಲೆ ಇರುವ, ನನ್ನ ಮಗನನ್ನ, ಜನ ನೋಡುವ ರೀತಿಯೇ ಬೇರೆ ಎಂದು. ಭಯದಿಂದ, ಯಾರ ಬಳಿಯೂ ಹೇಳಿಕೊಳ್ಳಲು ಆಗದ ಸಮಸ್ಯೆ ಎಂದು ಪರಿಗಣಿಸಿ.ಎಲ್ಲಾವನ್ನು  ಮುಚ್ಚಿಟ್ಟು, ನಿನಗೆ ನನ್ನ ಜೊತೆ ಮದುವೆ ಮಾಡಿ ತಪ್ಪು ಮಾಡಿಬಿಟ್ಟರು. ನಿಜ,ಹೇಳಲು ಬೀಡದೆ ನನ್ನನ್ನು ತಡೆದರು. ನಮ್ಮನ್ನು ಕ್ಷಮಿಸಿ ಎಂದು ಕ್ಷಮೆ ಕೇಳಿದನು.ರಾಗಿಣಿ ಗಂಡ. ಮತ್ತು, ರಾಗಿಣಿಯ ಇಚ್ಛೆಯಂತೆ ಅವಳಿಗೆ.  ಇಬ್ಬರು ಸಮ್ಮತದಿಂದ ವಿಚ್ಛೇದನ ಪಡೆದುಕೊಂಡು. ಅವರವರ ಮುಂದಿನ ಪ್ರಾರಂಭಿಸಿದರು.