
ಶೇಖರ್ ಮತ್ತು ಸಂಗೀತಾ ಎದುರು ಬದುರು ಮನೆಯವರು. ಸಂಗೀತಾಳ ತಂದೆ ತಾಯಿ ಬಡವರಾಗಿದ್ದರು . ತಂದೆ ತಾಯಿ , ಅಲ್ಲಿ ಇಲ್ಲಿ ಸಣ್ಣ ಪುಟ್ಟ, ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದರು.
ಸಂಗೀತಾ ಮತ್ತು ಶೇಖರ್ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಶೇಖರ್ ನ ತಂದೆ , business man ಆಗಿದ್ದರು. ಮಗನ ಜೀವನವನ್ನು ಹಣ ಶ್ರೀಮಂತಿಕೆಯಲ್ಲೆ , ಅಳೆದ ಅಪ್ಪ , ಹಣ ಪ್ರತಿಷ್ಠೆ ಗೆ, ಆಸೆಪಟ್ಟು,
ಬಡ ಕುಟುಂಬದ, ಮತ್ತು ಕುಟುಂಬ ಹಿನ್ನೆಲೆ ದೊಡ್ಡದಾಗಿ ಇಲ್ಲದ, ಸಂಗೀತಾಳ ಕುಟುಂಬವನ್ನ ಕಡೆಗಣಿಸಿ. ಶೇಖರ್ ಗೆ , ವರದಕ್ಷಿಣೆ ಕೊಡುವ ಶ್ರೀಮಂತ ಮನೆತನದ , ಹೆಣ್ಣನ್ನು ತಂದು ಮದುವೆ ಮಾಡಿದರು. ಶೇಖರ್ ಮತ್ತು ಸಂಗೀತಾಳ , ಪ್ರೀತಿಯನ್ನ , ದೂರ ಮಾಡಿದರು. ***************
ಸಂಗೀತಾ ಚನ್ನಾಗಿ ಓದುತ್ತಿದ್ದಳು. ಆದರಿಂದ ಶೇಖರ್ ಅವಳಿಗೆ, ತುಂಬಾ ಪ್ರೋತ್ಸಾಹ ನೀಡುತ್ತಿದ್ದನು. ಓದುವ ವಿಷಯದಲ್ಲಿ ಆವಳಿಗೆ ಸಲಹೆ ನೀಡುತ್ತಿದ್ದನು. ಸಂಗೀತಾಗೆ ಶೇಖರ್ care ಆಗಿ ನೋಡಿಕೊಳ್ಳುತ್ತಿದ್ದನು .
ಸಂಗೀತಾ ಕೂಡ, ಓದುವ ವಿಷಯದಲ್ಲಿ .ಏನೇ ಸಮಸ್ಯೆಗಳಿದ್ದರು ಮೊದಲು ಶೇಖರ್ ಗೆ. ಹೇಳಿ ಸಲಹೆಗಳನ್ನ ಪಡೆಯುತ್ತಿದ್ದಳು. ಸಂಗೀತಾ ಓದಿನಲ್ಲಿ, ಜಾಸ್ತಿ ಅಂಕಗಳನ್ನ ಪಡೆದಾಗ ಅವಳಿಗೆ ಶುಭ ಹಾರೈಸುವುದು ಮತ್ತು ಏನಾದರೂ ಗಿಫ್ಟ್ ಕೊಟ್ಟು. ಇನ್ನೂ ಅಧಿಕ ಪ್ರೋತ್ಸಾಹ ನೀಡುತ್ತಿದ್ದನು ಶೇಖರ್.
ಶೇಖರ್ ಸಂಗೀತಾಳ , ಮೇಲೆ ತೋರಿಸುತ್ತಿದ್ದ ಕಾಳಜಿ ಮತ್ತು ಅವಳು ಚನ್ನಾಗಿ ಓದಬೇಕೆಂದು ಕೊಡುತ್ತಿದ್ದ ಪ್ರೋತ್ಸಾಹ . ಎಲ್ಲಾವನ್ನು ನೋಡಿ ಸಂಗೀತಾಗೆ, ಶೇಖರ್ ಮೇಲೆ ಪ್ರೀತಿ, ಹುಟ್ಟುಕೊಂಡಿತು.
ಶೇಖರ್ ನ ತಂದೆಗೆ, ಇವರ ಪ್ರೀತಿ ವಿಷಯ ಗೊತ್ತಿತ್ತು. ಆದರೂ ಶೇಖರ್ ನ ತಂದೆಗೆ, ಮಗನಿಗೆ ಶ್ರೀಮಂತರ ಮನೆಯಿಂದ , ಹೆಣ್ಣು ತಂದು ಮದುವೆ ಮಾಡಬೇಕೆಂದು ಆಸೆ ಇತ್ತು.
ಸಂಗೀತಾಳಿಗೆ ಕೆಲಸ ಸಿಕ್ಕಿತು
ಅದೇ ಸಂದರ್ಭದಲ್ಲಿ . ಓದು ಮುಗಿಸಿ , ಕೆಲಸಕ್ಕಾಗಿ ಕಾಯುತ್ತಿದ್ದ ಸಂಗೀತಾಗೆ ಸರ್ಕಾರಿ , ಕೆಲಸ ಸಿಕ್ಕತು . ಕೆಲಸವನ್ನ ಅರಸಿ ಹೋದ , ಸಂಗೀತಾ ತನ್ನ ಕೆಲಸದಲ್ಲಿ ಆಶಕ್ತಿ ಯಿಂದ ಕೆಲಸ ಮಾಡ ತೊಡಗಿದಳು.
ಒಂದು ದಿನ ಶೇಖರ್ ನ , ಕರೆ ಬಂತು ಅವನ ಮದುವೆಗೆ ಆಹ್ವಾನಿಸಲು ಪೋನ್ ಮಾಡಿದ್ದ. ಆ ಬರುವೆ ಎಂದು ph ಇಟ್ಟ ಸಂಗೀತಾ . ನಿರಂತರವಾಗಿ ಕೆಲಸದಲ್ಲಿ ನಿಲತಳಾದಳು.
ಶೇಖರ್ ನ ತಂದೆ ನೋಡಿರದ, ದುಡ್ಡನ್ನು, ಶೇಖರ್ ಗೆ ವರದಕ್ಷಿಣೆ ಕೊಟ್ಟ ಹಣಕ್ಕಿಂತ, 10 ರಷ್ಟು ಹಣವನ್ನು ಸಂಪಾದಾನೆ ಮಾಡಿದಳು. ಸಂಗೀತಾಳ ವಿದ್ಯೆ ಬುಧ್ದಿ 2 ಅವಳನ್ನ ಯಶಸ್ಸಿನ ಕಡೆಗೆ ಕರೆದುಕೊಂಡು ಹೋದವು.
ಸಂಗೀತಾ ತನ್ನ ತಾಯಿಯ, ಮನೆಯನ್ನ ನಡೆಸುವ ಸಾರಥಿಯಾದಳು. ತನ್ನ ಕುಟುಂಬವನ್ನ ತನ್ನ ಶ್ರಮದಿಂದ ಅಭಿವೃದ್ಧಿಗೊಳಿಸಿ. ತನ್ನ ತಂದೆ ತಾಯಿಗೆ ಗೌರವ ಘನತೆ ತಂದು ಕೊಟ್ಟಳು.
ಯಾವ ಶೇಖರ್ ನ ತಂದೆ , ಸಂಗೀತಾಳನ್ನ ಸೊಸೆ ಮಾಡಿಕೊಳ್ಳಲು. ನಿರಕರಿಸಿದರೋ, ಯಾವ ಶೇಖರ್ ತನ್ನ ತಂದೆ ಮಾತಿಗೆ , ಸಂಗೀತಾಳನ್ನ ಬಿಟ್ಟು . ಬೇರೆ ಹುಡುಗಿ ಮದುವೆ ಮಾಡಿಕೊಂಡನೋ, ಇಬ್ಬರೂ ಸಂಗೀತಾಳನ್ನ , ನೋಡಿ . ಅಬ್ಬಾ ಇಂತಹ ಮಗಳು ಅಥವಾ , ಸೊಸೆ ಮನೆಯಲ್ಲಿ ಇರಬೇಕು ಅನಿಸುವಂತೆ ಮಾಡಿ, ತೋರಿಸಿದಳು.
ಇತ್ತ ಹುಡುಕಿ ಹುಡುಕಿ , ತಂದ ಸೊಸೆ ಅತ್ತೆ ಮಾವನಿಗೆ ಸೇವೆಯನ್ನು ಮಾಡಲಿಲ್ಲ. ಮಾರ್ಯಾದೆ, ಗೌರವವನ್ನು ಕೊಡುತ್ತಿರಲಿಲ್ಲ. ತಾಳಿ ಕಟ್ಟಿದ ಗಂಡನೊಂದಿಗೆ, ನೆಮ್ಮದಿಯಿಂದ ಬಾಳಲಿಲ್ಲ, ಮತ್ತು ಪ್ರೀತಿಯನ್ನು ತೋರಿಸಲಿಲ್ಲ.
ಸಂಗೀತಾ ಇದೆಲ್ಲಾದರ ಬೆಳೆವಣಿಗೆ ನಂತರವೂ. ಶೇಖರ್ ನ ಮನೆಯವರ , ಜೊತೆ ಗೌರವದಿಂದ ನಡೆದುಕೊಳ್ಳುತ್ತಿದ್ದಳು. ಶೇಖರ್ ಮತ್ತು ಅವನ ತಂದೆಯನ್ನು ಹೊರತುಪಡಿಸಿ , ಉಳಿದ ಕುಟುಂಬದವರ ಜೊತೆ ಅಷ್ಟೇ ಸ್ನೇಹ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದಳು.
ಒಂದು ದಿನ ಶೇಖರ್ ನ ತಂದೆ , ಸಂಗೀತಾಳ ತಾಯಿಯ ಬಳಿ ಹೇಳುತ್ತಾರೆ, ನಾನು ನಿನ್ನ ಮಗಳನ್ನ, ಮತ್ತು ನಿಮ್ಮ ಕುಟುಂಬವನ್ನ ಕೀಳಾಗಿ ನೋಡಿ, ಕೇವಲವಾಗಿ ಲೆಕ್ಕ ಹಾಕಿ, ನಿನ್ನ ಮಗಳು ಮತ್ತು ನನ್ನ ಮಗ ಇಬ್ಬರ ಪ್ರೀತಿಯನ್ನ ದೂರ ಮಾಡಿಬಿಟ್ಟೆ ಎಂದು.
ನನ್ನ ಮಗನ ಆಯ್ಕೆ ಸರಿಯಾಗಿ ಇತ್ತು. ನನ್ನ ಆಯ್ಕೆ ತಪ್ಪಾಗಿ. ಹೋಯಿತು ಎಂದು .
ಶೇಖರ್ ನ ತಂದೆಯ ಮಾತು , ಕೇಳಿ ಏನು ಅರ್ಥವಾಗದೇ, ಗಾಬರಿಗೊಂಡ ಸಂಗೀತಾಳ ತಾಯಿ ಬಂದು ಸಂಗೀತಾಳನ್ನ ಕೇಳಿದರು. ಶೇಖರ್ ನ ತಂದೆ ಏನು ಹೇಳುತ್ತಿದ್ದಾರೆ ಅದು ನೀಜವೇ ಎಂದು.
ಅದಕ್ಕೆ ಸಂಗೀತಾ ಹೌದಮ್ಮ ಎಂದಳು. ಸಂಗೀತಾಳ ಅಮ್ಮ ಇಷ್ಟೆಲ್ಲಾ ನಡೆದರು ನೀನು ಯಾಕೆ ನನ್ನ ಹತ್ತಿರ ಒಂದು ಮಾತು ಹೇಳಲಿಲ್ಲ ಎಂದು ಕೇಳಿದರು.