Select Page

ಪ್ರೀಯಳ ಅಪ್ಪ ಅಮ್ಮನಿಗೆ ಮದುವೆ ಆಗಿ  ಮೊದಲಿಗೆ ಗಂಡು ಮಗು ಹುಟ್ಟಿತು.  ಅವನೆಂದರೆ ತಾಯಿಗೆ ಪಂಚಪ್ರಾಣ.  ನಂತರ ಪ್ರೀಯ ಕೂಡ ಹುಟ್ಟಿದಳು. ಪ್ರೀಯ ತಂದೆ ಕುಡುಕನಾದರೂ ಹೆಂಡತಿ ಮಕ್ಕಳನ್ನು ಚೆನ್ನಾಗಿ ಸಾಕುತ್ತಿದ್ದ.

2 ಮಕ್ಕಳದ ನಂತರ ಗಂಡ ಹೆಂಡತಿ ಸಂಬಧ ಮುರಿದು ಬಿದ್ದಿತು.   ಪ್ರೀಯಳ ತಾಯಿಯ ಮನಸಲ್ಲಿ  ಮಕ್ಕಳಾದ ನಂತರ , ಅದೇಕೊ, ಕಾಣೆ,   ಗಂಡನಿಗೆ  ಪ್ರೀತಿ, ಕಾಳಜಿ ತೋರದೆ,  ಅರ್ಥ ಮಾಡಿಕೊಳ್ಳದೇ ದೂರ ಇಟ್ಟಳು.

ಗಂಡ   ದುಡಿದ ಹಣ ಮಾತ್ರ ಬೇಕು  ಸಂಸಾರ ಸಾಗಿಸಲು , ಗಂಡ ಬೇಡ,  ಅವನ ಯೋಗಕ್ಷೇಮ,  ಆರೋಗ್ಯ ಇದೆಲ್ಲಾ ಬೇಡದ ವಿಷಯ ಅವಳಿಗೆ.

ಮಕ್ಕಳ ಜೀವನಕ್ಕೆ ಮತ್ತು ಅವರ  ವಿದ್ಯಾಭ್ಯಾಸಕ್ಕೆ , ಸಂಸಾರ ಸಾಗಿಸೊಕೆ,  ಹಣ ಪಡೆಯುತ್ತಿದ್ದ ಹೆಂಡತಿ,  ಗಂಡನಿಗೆ , ಒಂದು ಹೊತ್ತಿನ , ಊಟ   ಹಾಕುತ್ತಿರಲಿಲ್ಲ.

 ಪ್ರೀಯಳ ತಂದೆ  , ಹೊರಗಡೆ ಊಟ ಮಾಡುವುದು,  ಸ್ನಾನ ಮಾಡುವುದು, ತನ್ನ ಬಟ್ಟೆ  ತಾನೇ ಒಗೆದುಕೊಳ್ಳುವುದು.  ಅವರ ಎಲ್ಲಾ ಕೆಲಸವನ್ನು   ಅವರೇ ಮಾಡಿಕೊಳ್ಳುತ್ತಿದ್ದರು.
      ಪ್ರೀಯ ಮತ್ತು ಅವಳ ಅಣ್ಣ ದೊಡ್ಡವರಾದಾಗ.     
  ಪ್ರೀಯ ಓದಿನಲ್ಲಿ ಆಶಕ್ತಿ ಇಲ್ಲದೆ 7ನೇ class ಗೆ ಶಾಲೆ ನಿಲ್ಲಿಸಿದಳು.  ಅವಳ ಅಣ್ಣ, ಬೆಳೆಯುತ್ತ  ಹೆಣ್ಣಿನ  ಹಾಗೆ,   ಹಾವ ಭಾವ ತೋರುತ್ತಿದ್ದ.  ಅವನು ಹುಟ್ಟು ,   ಗಂಡಸೇ ಆಗಿದ್ದರು. ಆದರೆ ಅವನ, ಅಂತರಾಳದಲ್ಲಿ ಅವನು ಹೆಣ್ಣಿನ ಮನೋಭಾವ ಹೊಂದಿದ್ದನು.
ಇದರ ಬಗ್ಗೆ ತಿಳಿಯದ ಅವನ ತಂದೆ ತಾಯಿ ಅವನನ್ನು,  ಬೈಯುತ್ತಾ ಹೀಗೆ ಮಾಡಬೇಡ ಹಾಗೆ  ಮಾಡಬೇಡ ಎಂದು ಹಿಂಸೆ ಮಾಡುತ್ತಿದ್ದರು.

ಪಾಪ ಅವನು,  ಬೇಕಾಂತ ಏನು,  ಮಾಡುತ್ತಿರಲಿಲ್ಲ.  ಅವನು  ಹುಟ್ಟಿನಯಲ್ಲಿಯೇ  ಮಂಗಳಮುಖಿ, ಆಗಿದ್ದರಿಂದ , ತನಗೆ ಅರಿವಿಲ್ಲದೆ , ಅವನ ನಡವಳಿಕೆ ಬದಲಾಗುತ್ತಿತ್ತು.

ಕೊನೆಗೆ ಅವನ , ಸುತ್ತ ಮುತ್ತಲಿನ ಜನಗಳು,  ನೋಡುವ ನೋಟ,  ಚುಚ್ಚು ಮಾತುಗಳು ,  ತಾಯಿ ಕೂಡ ಅವನನ್ನ ಅರ್ಥಮಾಡಿಕೊಳ್ಳತ್ತಿರಲಿಲ್ಲ. . ,

ಮನೆಯಲ್ಲಿ,  ಎಲ್ಲರು , ಪ್ರೀಯಳ ಅಣ್ಣನಿಗೆ ,  ನಮ್ಮ ಜೊತೆ ಇರಬೇಕು , ಆಂದರೆ  ನೀನು,  ಹೆಣ್ಣಿಗನ ಹಾಗೆ ,  ಆಡುವುದನ್ನ  ನಿಲ್ಲಿಸಬೇಕು  ಇಲ್ಲ ಅಂದ್ರೆ  ಮನೆ ಬಿಟ್ಟು ಹೋಗು ಎಂದು ಹೇಳಿ  ಬಿಟ್ಟರು ,

ತಂದೆ  ತಾಯಿಯ ಆಡಿದ  ಮಾತಿನಿಂದ  ನೋವಾಗಿ . ಅವನು ಮನೆ ಬಿಟ್ಟು ಹೋರಟು  ಹೋದ .

 ಪ್ರೀಯ ಅಣ್ಣ ಮನೆ ಬಿಟ್ಟು ಹೋದಗಾ.‌‍

      ಪ್ರಿಯಾ ಅಣ್ಣ,  ಮನೆ ಬಿಟ್ಟು,  ಹೊರಗಡೆ ಬಂದಾಗ ,  ಅವನ ಸ್ನೇಹಿತರ ಬಳಿ ಬಂದ,  ಅವನ ಬಗ್ಗೆ ಗೊತ್ತಿದ್ದ  ಸ್ನೇಹಿತರು ಅವನ ಪರಿಸ್ಥಿತಿಗೆ ಸ್ಪಂದಿಸಲಿಲ್ಲ.
ಮತ್ತು ಬಂಧುಗಳ,  ಮನೆಗೆ ಬಂದ , ಅವರಿಗೂ  ಎಲ್ಲಾ,  ವಿಷಯ, ತಿಳಿದಿದ್ದು  ಕೂಡ,  ಅವನನ್ನ ಸಂತೈಸಲಿಲ್ಲ.  ಕೊನೆಗೆ ಬೀದಿಗೆ ಬಿದ್ದ , ಅವನಿಗೆ ಸಂತ್ವಾನ ಹೇಳಿ ಆಶ್ರಯ  ಕೊಟ್ಟಿದ್ದು ಅವನ ತರಹದ ಮಂಗಳಮುಖಿಯರು.

ಪ್ರೀಯಳ ತಂದೆ ತೀರಿಕೊಂಡಾಗ.

     ಮಂಗಳಮುಖಿಯಾರ ಆಶ್ರಯದಲ್ಲಿ ಇದ್ದ ಪ್ರೀಯ ಅಣ್ಣನಿಗೆ ,  ಅವರ ಜೊತೆಯೇ ಇರಲು ಇಷ್ಟವಾಯಿತು. ಮತ್ತು  ತಂದೆ  ತಾಯಿ ಹೋಗಿ  ಮನೆಗೆ  ಬರುವಂತೆ ಎಷ್ಟು ಕರೆದರು ಅವನು ಬರಲಿಲ್ಲ . ನಾನು  ಇಲ್ಲಿಯೇ ನೆಮ್ಮದಿಯಾಗಿ ಸಂತೋಷವಾಗಿ ಇದ್ದೇನೆ.
 ನಾನು ಎಲ್ಲಿಗೂ ಬರುವುದಿಲ್ಲ ಎಂದು ಕಡ್ಡಾಯವಾಗಿ  ಹೇಳಿಬಿಟ್ಟ. ಮಗನ ನಿರ್ಧಾರ,  ಮಗನು ಹೀಗಾಗಿದ್ದಕ್ಕೆ  ಜನಗಳು , ಸಂಬಂಧಿಕರುಗಳ ಚುಚ್ಚು ಮಾತು,  ಎಲ್ಲಾವನ್ನು , ಕೇಳಿದ  ಪ್ರೀಯ ತಂದೆ. ಮಗನು ಈ ರೀತಿ ಆಗಿದಕ್ಕೆ , ಕೊರಗಿ,  ಕೊರಗಿ  ,  ಕುಡಿತಕ್ಕೆ  ದಾಸನಾಗಿ.  ,
   ಮರಣ ಹೊಂದಿದರು.  ತಂದೆ ಸಾವಿಗೆ ಬಂದ, ಪ್ರೀಯಳ ಅಣ್ಣ,  ತನ್ನ ಕರ್ತವ್ಯವನ್ನು  ಮುಗಿಸಿ ತಾನು ಇದ್ದಲಿಗೆ ಹೊರಟು ಹೋದ. ಅಮ್ಮ ತಂಗಿ ಮನೆಗೆ ವಾಪಸ್ ಬರುವಂತೆ ಎಷ್ಟು , ಕೇಳಿಕೊಂಡರು .  ಅವನು ಬರಲಿಲ್ಲ,   ವಾಪಸ್ ಬರುವ , ಮನಸ್ಸು ,  ಕೂಡ ಮಾಡಲಿಲ್ಲ.

 

                                          

      ಗಂಡ ನಿಧನವಾದ ನಂತರ,  ಮಗನು  ಇನ್ನು,  ಮನೆಗೆ  ವಾಪಸ್ ಬರುವುದಿಲ್ಲ.  ಎಂದು ತಿಳಿದ  ಪ್ರೀಯಳ  ಅಮ್ಮ,  ಹೆತ್ತ ಮಗಳು ಪ್ರೀಯಳನ್ನ ಒಬ್ಬೊಂಟಿಯಾಗಿ ಬಿಟ್ಟು,  ಯಾರೋ ಹುಡುಗನ,  ಜೊತೆ ಹೋಗಿ,  ಅಲ್ಲಿ  ಅವನು ಜೊತೆ ಜೀವನ  ನಡೆಸುತ್ತಿದ್ದಳು. ಆ ಹುಡುಗನಿಗೆ ಅಡುಗೆ ಮಾಡಿ ಬಡಿಸುವುದು,

ಅವನ,  ಎಲ್ಲಾ ಕೆಲಸಗಳನ್ನು  , ಇವರೆ ಮಾಡಿಕೊಡುತ್ತಿದ್ದರು. ಪ್ರೀಯಾ,  ನನ್ನನ್ನು  ಬಿಟ್ಟು ಹೋಗಬೇಡ ಅಮ್ಮ , ನನ್ನ ಜೊತೆಯಲ್ಲಿಯೇ ಇರು,  ನಾನು  ಕೆಲಸಕ್ಕೆ , ಹೋಗಿ ದುಡಿದು,   ನಿನ್ನನ ಸಾಕುತ್ತೇನೆ,  ನನ್ನನ ನಂಬು ನನ್ನನ್ನು ದೂರ ಮಾಡಬೇಡ, ಮತ್ತು ನನ್ನನ ,ಬಿಟ್ಟು ಹೋಗಬೇಡ,  ಎಂದು  ಅಂಗಲಾಚುತ್ತಾಳೆ.

ಪ್ರೀಯ ಅಮ್ಮ ನಾನು ನಿನ್ನ ಜೊತೆ ಇರಲು ಸಾಧ್ಯವಿಲ್ಲ.  ನೀನಂದರೆ ನನಗೆ ಇಷ್ಟವಿಲ್ಲ.  ನಿನ್ನ ಅಣ್ಣ ಅಂದರೆ ,   ನನಗೆ  ಪಂಚಪ್ರಾಣ  , ಅವನೇ  ಇಲ್ಲದ , ಮನೆಗೆ ಬಂದು ನಾನು ಇರಲು ಸಾಧ್ಯವಿಲ್ಲ .   ಆದರಿಂದ,    ನೀನು ನಿನ್ನ ,  ಜೀವನ ನೋಡಿಕೊ,  ನನ್ನನ ಬಿಟ್ಟುಬೀಡು ಎಂದು ಹೇಳಿದಳು ಪ್ರೀಯ ಅಮ್ಮ.

ನನ್ನನ ಮರೆತು ಬೀಡು,  ನನ್ನ ಹಿಂದೆ ಬರಬೇಡ  , ನಿನ್ನ ಅಮ್ಮ,  ಇನ್ನಾದರೂ,  ಚನ್ನಾಗಿರಬೇಕೆಂದು,  ನೀನು ಅಂದುಕೊಂಡರೆ,   ನಿನ್ನ ಅಮ್ಮನನ್ನು   , ಅವಳ, ಪಾಡಿಗೆ, ಬಿಟ್ಟು ದೂರ ಹೋಗು ಎಂದು ಹೇಳಿ ಹೊರಟು,  ಬಿಡುತ್ತಾಳೆ.

ಪ್ರೀಯ ಅಮ್ಮನಿಂದ ದೂರ ಆಗಿ ಅಜ್ಜಿಯ ಮನೆಗೆ ಬರುತ್ತಾಳೆ……….                                       

ಅಮ್ಮ ನ ಮಾತು, ಕೇಳಿ, ಪ್ರೀಯಗಳಿಗೆ, ಮನಸು ಹೊಡೆದು ಹೋಯಿತು. ಅಮ್ಮ ಮಗಳನ್ನೆ ಬೇಡ ಅಂತ್ತಿದ್ದಾಳೆ. ಅಮ್ಮ ಬೇಕು ಎಂದು ಹಿಂದೆ ಹೋದರೆ. ಅವಳ ಸುಖ ಸಂತೋಷಕ್ಕೆ , ನಾನು ಅಡ್ಡಿಯಾಗುತ್ತೆನೆ.

 
 
 
 
ಆದರಿಂದ, ಅಮ್ಮ ಎಲ್ಲೆ ಇದ್ದರೂ ಚೆನ್ನಾಗಿ ಇರಲಿ ಎಂದು. ದೂರ ಇರುವುದೇ ಉತ್ತಮ ಎಂದು. ಪ್ರೀಯ ಅಮ್ಮ ನಿಂದ ದೂರ ಆಗಿ.ತನ್ನ ಅಜ್ಜಿಯ ಮನೆಗೆ ನಡೆದಳು. ಎಲ್ಲಾ ವಿಷಯ ತಿಳಿದಿದ್ದ,  ಅಜ್ಜಿ, ಪ್ರೀಯಾಗೆ ಆಸರೆಯಾಗಿದ್ದರು.
   

ಪ್ರೀಯ ಅಜ್ಜಿ  ಮನೆಯಲ್ಲಿ ಅವಳ ಸೋದರ ಮಾವ,  ಅವರ ಹೆಂಡತಿ ಮತ್ತು ಇಬ್ಬರು,  ಮಕ್ಕಳು ಇದ್ದರು. ಪ್ರೀಯಳ ಅಜ್ಜಿಗೆ,  ಪ್ರೀಯ ಮನೆಯ,  ಪರಿಸ್ಥಿತಿ ಬಗ್ಗೆ,  ಗೊತ್ತಿದ್ದ ಕಾರಣ,  ಪ್ರೀಯಳನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಒಂದು ವರ್ಷದ ನಂತರ  ಅಜ್ಜಿ ಕೂಡ ಮರಣ ಹೊಂದಿದರು.

ಅಜ್ಜಿ ಸತ್ತ ನಂತರ ಪ್ರೀಯಳ  ಸೋದರ ಮಾವನ  ಹೆಂಡತಿ ಅತ್ತೆ , ಮತ್ತು ಮಾವನ ಮಕ್ಕಳು,  ಪ್ರೀಯಗೆ ಚಿತ್ರಹಿಂಸೆ ಕೊಡುತ್ತಿದ್ದರು.   ಪ್ರೀಯ,   ಅವರ ಮನೆಯಲ್ಲಿ ,

ಆಶ್ರಯ ಪಡೆದಿದ್ದು,  ಅವರಿಗೆ ಮೊದಲಿನಿಂದಲೂ ಇಷ್ಟ ಇರಲಿಲ್ಲ.  ಅಜ್ಜಿಯನ್ನ  oppose  ಮಾಡಲು ಆಗದೇ ಇಷ್ಟು ದಿನ  ಬಾಯಿ ಮುಚ್ಚಿ ಸುಮ್ಮನಿದ್ದರು.
 ಅಜ್ಜಿ ಸತ್ತ ನಂತರ ಅವರ ನಿಜವಾದ ರೂಪ ಬಯಲಾಯಿತು. ಪ್ರೀಯಳನ್ನ , ಹೀನಾಯವಾಗಿ , ಮನೆ ಕೆಲಸದವಳಿಗಿಂತ,  ಕಡೆಯಾಗಿ ನೋಡುತ್ತಿದ್ದರು. ಪ್ರೀಯ ತಾಯಿ ತಂದೆ , ಅಣ್ಣ , ಎಲ್ಲಾರ ಬಗ್ಗೆ , ಟೀಕೆ ಮಾಡುತ್ತಿದ್ದರು. ಇದನೆಲ್ಲಾ  ತುಂಬಾ ದಿನ ಸಹಿಸಲಾಗದೆ ಪ್ರೀಯ ಮಾವನ  ಮನೆ ಇಂದ ಆಚೆ ಬಂದಳು.
                                                                    ಮುಂದುವರೆಯುವುದು