ಸೂಚನೆ: ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು ಕಥಾವಸ್ತು ಮತ್ತು ಸನ್ನಿವೇಶಗಳು ಕೇವಲ ಕಾಲ್ಪನಿಕವಾಗಿದ್ದು, ಯಾವುದೇ ವ್ಯಕ್ತಿ ಜೀವನಕ್ಕೆ ಮತ್ತು ಸಮುದಾಯಕ್ಕೆ ಸಂಬಂಧಿಸಿರುವುದಿಲ್ಲ . ಒಂದು ವೇಳೆ ಸಾಮ್ಯತೆ ಕಂಡು ಬಂದಲ್ಲಿ ಅದು ಕಾಕತಾಳಿಯವಷ್ಟೆ. ಇದಕ್ಕೆ ಲೇಖಕರು ಜವಾಬ್ದಾರರಲ್ಲ.
ಸುಮ 18 , ಆಶುಪಾಸು ವಯಸ್ಸಿನ, 90 ರ, ದಶಕದ ಹುಡುಗಿ, . ತುಂಬಾ ಮುಗ್ಧ ಮನಸ್ಸಿನವಳು. ಸುಳ್ಳು ಮತ್ತು ಕಪಟ, ಪದಗಳ ಅರಿವು ಕೂಡ ಇಲ್ಲದವಳು. ನೋಡಲು, ತುಂಬಾ ಸುಂದರಿ ಏನೂ ಅಲ್ಲ. ಸುಮರಾಗಿ ಇದ್ದಳು.
ಮನಸ್ಸು ಮಾತ್ರ ಬೆಣ್ಣೆ, ಗುಣದಲ್ಲಿ ಅಪರಂಜಿ, ಆದರೆ ಯಾರೆ ಏನೇ ಹೇಳಿದರು. ಎಲ್ಲವನ್ನೂ ,ಅಂದವಾಗಿ ನಂಬುತ್ತಿದ್ದಳು . ಎಲ್ಲವನ್ನೂ, ಎಲ್ಲಾರನ್ನು , ಅಂದವಾಗಿ ನಂಬುವುದು ಸುಮಳ ದೌರ್ಬಲ್ಯ ಕೂಡ ಆಗಿತ್ತು (weakness ). ಸತ್ಯ ಮತ್ತು ಅಸತ್ಯದ, ಬಗ್ಗೆ ಜ್ಞಾನ, ತಿಳುವಳಿಕೆ ಇರಲಿಲ್ಲ. ಸ್ನೇಹ, ಪ್ರೀತಿ, ಸಂಬಂಧ, ಬಾಂಧವ್ಯಕ್ಕೆ ತುಂಬಾ ಬೆಲೆ ತೆರುವ ಸದ್ಗುಣದವಳು.

ಮನೆಯಲ್ಲಿ , ಹೊಂದಾಣಿಕೆ ಇಲ್ಲದ. ಸುಮ ತಂದೆ ತಾಯಿ ಯಾವಾಗಲೂ, ಜಗಳವಾಡುತ್ತಿದ್ದರು. ಸುಮಳಿಗೆ ಸಿಗುತ್ತಿದ್ದ ಅಪ್ಪ ಅಮ್ಮನ ಪ್ರೀತಿ ಅಷ್ಟಕಷ್ಟೆ.
ಇದನೆಲ್ಲಾ ನೋಡುತ್ತಾ ಬೆಳೆದ ಸುಮಾ ಚಿಂತೆ ಎಂಬ ಸಂತೆಯಲ್ಲಿ ಕಳೆದುಹೋಗಿ ಕಂಗಲಾಗಿದ್ದಳು. ಅಪ್ಪ ಅಮ್ಮನ ಪ್ರೀತಿಯಲ್ಲಿ ವಂಚಿತಳಾಗಿದ್ದ ಸುಮಾಗೆ ಯಾರಾದರೂ ಪ್ರೀತಿ,ಕರುಣೆ, ಮಮತೆ,ತೋರಿಸಿದರೆ ಸಾಕು. ಖುಷಿಯಲ್ಲಿ ಮೈ ಮರೆಯುತ್ತಿದ್ದಳು.
ಸುಮಳಿಗೆ ಒಬ್ಬಳು
ಗೆಳತಿ ಇದ್ದಳು. ಅವಳ ಹೆಸರು ಶುಭ.ಅವಳೆಂದರೆ ಸುಮಳಿಗೆ ಉಸಿರು. ಶುಭಳನ್ನ, ತನ್ನ ಆತ್ಮೀಯ ಗೆಳತಿಯಾಗಿ, ಸ್ವೀಕರಿಸಿದ್ದಳು
ಶುಭಳ ನಡೆವಳಿಕೆ , ಹೇಗೆಂದರೆ? ತನ್ನ ಮೋಜಿಗಾಗಿ , ಮಸ್ತಿಗಾಗಿ . ಇತರ ಸ್ನೇಹಿತರನ್ನ, ಇಷ್ಟ ಬಂದಂತೆ, ಬಳಸಿಕೊಳ್ಳುತ್ತಿದ್ದಳು. ನಗೆಪಾಟಲು, ಮಾಡುವುದು. ಗೇಲಿ ಮಾಡುವುದು. ಇತರರ ಭಾವನೆಗಳ ಜೊತೆ ಆಟ ಆಡುವುದು ಶುಭಳ ಕೆಲಸವಾಗಿತ್ತು.
ಶುಭ , , ಸ್ನೇಹದ, ಹೆಸರಿನಲ್ಲಿ . ಅಥವಾ ತನ್ನ ಸುತ್ತ ಮುತ್ತಲಿನ,ಗೆಳಯ ಗೆಳತಿಯರನ್ನ, ಅಣುಕಿಸುವುದು, ಅವಮಾನಿಸುವುದು. ದೌರ್ಬಲ್ಯಗಳನ್ನ, ಅರಿತು ಮನ ಬಂದಂತೆ ವರ್ತಿಸುವುದು. ಶುಭಳ ಹುಟ್ಟು ಗುಣ.
ಮಿತಿ ಮೀರಿದ ವರ್ತನೆ ಶುಭಳದು. ಈ ರೀತಿ, ಕೆಟ್ಟ ಗುಣ ಹೊಂದಿರುವ, ಶುಭಳನ್ನ. ವಾಸ್ತವ ಗೊತ್ತಿರದ, ಸುಮಾ.ಶುಭಳನ್ನ , ಆಪ್ತ ಗೆಳತಿಯಾಗಿ ಸ್ವೀಕರಿಸಿದ್ದಳು. ಮತ್ತು ಕುರುಡಾಗಿ ನಂಬಿದ್ದಳು. ಸುಮ, ಶಾಲೆಗೆ, ಹೋಗುವ, ಆರಂಭದವಾದ , ದಿನಗಳಿಂದನೂ.ಶುಭಳ, ಜೊತೆಯಲ್ಲೆ, ಶಾಲೆಗೆ ಹೋಗುತ್ತಿದ್ದ ಳು. ತರಗತಿಯಲ್ಲು , ಜೊತೆಯಲ್ಲೆ ಕುರುತ್ತಿದ್ದಳು.
ಮನೆ ಕೂಡ ಎದುರು ಬದುರು ಇದ್ದುದ್ದರಿಂದ ಉಳಿದ ಸಮಯವೆಲ್ಲಾ ಶುಭಳ ಜೊತೆಯೇ ಕಾಲ ಕಳೆಯುವುದು . ಸುಮಳ, ದಿನನಿತ್ಯ ಜೀವನದ ರೂಢಿಯಾಗಿತ್ತು. ಬೇಕಾಂತನೇ , ಸುಮಳ ಮನಸ್ಸು, ನೋಯಿಸುವುದು ,ಬೇಜಾರು ಮಾಡುವುದು, ಸರ್ವೇಸಾಮಾನ್ಯವಾಗಿತ್ತು ಶುಭಗಳಿಗೆ. ಶುಭ, ಎಷ್ಟೇ, ನೋವು, ಅವಮಾನ, ಅಣುಕಿಸುವುದು, ಎಲ್ಲಾವನ್ನು, ತನ್ನ ಎದುರೆ ಮಾಡಿದರು. ಸುಮ , ಯಾಕೆ , ಏನು, ಹೇಗೆ ಎಂದು ಕೇಳುತ್ತಲೇ ಇರಲಿಲ್ಲ.
ಯಾಕೆಂದರೆ, ಅಷ್ಟೊಂದು, , ಅವಲಂಬಿತಲಾಗಿದ್ದಳು ಸುಮ, ಶುಭಳ ಮೇಲೆ. ಸುಮ , ಶುಭಳ ಸ್ನೇಹಕ್ಕಾಗಿ , ಶುಭಳ ,ಒಡನಾಟಕ್ಕಾಗಿ, ಮತ್ತು ಸ್ನೇಹಕ್ಕಾಗಿ . ಸುಮ ಏನೇ, ಅವಮಾನ ಮಾಡಿದರು. ಯಾವುದನ್ನು, ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ.ತನ್ನ, ಮೇಲೆ ಶುಭ ಮಾಡುವ, ಯಾವ ವಿಷಯಕ್ಕೂ, ಪ್ರತಿಕ್ರಿಯೆ ,ವೀರೋಧ, ಮಾಡುವ ವಿಷಯಗಳ, ಅರಿವು, ಇಲ್ಲದ , ಅರ್ಥವಾಗದ, ಸ್ಥಿತಿಯಲ್ಲಿ ಇದ್ದಳು ಸುಮ.
ಶುಭಳ, ಸ್ನೇಹ ಎಂಬ ಮೋಸದ ಬಲೆಯಲ್ಲಿ ಸಿಲುಕಿದ್ದಳು ಸುಮ. ಸುಮ. ಶುಭಳ ಸ್ನೇಹ, ಒಡನಾಟ, ಬಾಂಧ್ಯವ, ಬೇಕೆಂದು ಮನಸ್ಸಿಂದ ಬಯಸುತ್ತಿದ್ದ ಸುಮಾಗೆ.ಇದಕ್ಕೆಲ್ಲಾ ಪ್ರತಿಕ್ರೀಯೆ, ನೀಡುತ್ತಿರುವ ತರಹನೇ, ಸ್ಪಂದಿಸುತ್ತಿರುವ ಹಾಗೆಯೇ, ಮನಸಿನಿಂದ ನಾಟಕ ಮಾಡುತ್ತಾ, ನಂಬಿಸಿ, ಮೋಸದ ಆಟವಾಡುತ್ತಿದ್ದಳು ಶುಭ.ಸುಮಳ ನಿಜವಾದ, ಸ್ನೇಹ ಪ್ರೀತಿ , ವಿಶ್ವಾಸ ನಂಬಿಕೆ, ಬಾಂಧವ್ಯಕ್ಕೆ, ಮನಸಿಂದ ಯಾವುದೇ ಒಳ್ಳೆಯ ಭಾವನೆ ತೋರದ ಶುಭ. ಶುಭ, ಆಡುವ ಬಣ್ಣದ ಮಾತುಗಳು. ಸುಳ್ಳು ಕಪಟಗಳ ಅರಿವು ಇಲ್ಲದ ಸುಮ, ಶುಭಳನ್ನ ಕುರುಡಾಗಿ ನಂಬಿದ್ದಳು.
ಮನ ಬಂದಂತೆ, ತನ್ನನ್ನು, ನಡೆಸಿಕೊಳ್ಳುತ್ತಿದ್ದರು. ಯಾಕೆಂದು ಮರು ಪ್ರಶ್ನೆ ಕೇಳುತ್ತಿರಲಿಲ್ಲ ಸುಮ . ಎಲ್ಲಾವನ್ನು , ತಮಾಷೆಯಾಗಿ, ಸ್ನೇಹದ ಸಲುಗೆ ಎಂದು ನಂಬಿದ್ದಳು ಸುಮ. ಶುಭಳ, ವಿರುದ್ಧ ಮಾತನಾಡಿದರೆ? ಶುಭಳ , ಸ್ನೇಹ , ಒಡನಾಟ, ಪ್ರೀತಿ ತನ್ನಿಂದ ದೂರ ಆದರೆ. ಅಪ್ಪ ಅಮ್ಮನ , ಜಗಳ, ಕಿರಿಕಿರಿ ಯಾವಾಗಲೂ ನೋಡಿ ನೋಡಿ ಬೆಸತ್ತು ಹೋಗಿದ್ದ ಸುಮಾಳಿಗೆ. ನೆಮ್ಮದಿ , ಸಂತೋಷ ಇರುವ ಇನ್ನೊಂದು , ಪ್ರಪಂಚ ಅಂದರೆ ಅದು, ಶುಭಳ, ಸ್ನೇಹ ಮಾತ್ರ.ಶುಭಳನ್ನ ಕಂಡರೆ ,ಅಪಾರ, ಸ್ನೇಹ ,ಪ್ರೀತಿ , ಅಪಾರ ನಂಬಿಕೆ. ವಿಶ್ವಾಸ .
ಎಲ್ಲಾದಕ್ಕೂ ಮೀಗಿಲಾಗಿ, ಶುಭಳ , ಜೊತೆ ಕಾಲ ಕಳೆಯುವುದು, ಸುಮಾಳಿಗೆ, ನೆಮ್ಮದಿ ಮತ್ತು ಸಂತೋಷವನ್ನ ಕೊಡುತಿತ್ತು. ಹಾಗಾಗಿ, ಶುಭ, ಸುಮಾಳಿಗೆ , ಎಷ್ಟೇ, ಮನಸ್ಸು, ನೋಯಿಸಿದರು . ಟೀಕೆ ಟಿಪ್ಪಣಿ, ಅವಮಾನ ಮಾಡಿದರು. ಸುಮ ಎಲ್ಲಾವನ್ನು ತಮಾಷೆಯಾಗಿ , ನೋಡುತ್ತಾ, ಪ್ರತಿಯೊಂದನ್ನೂ , ಬೇಜಾರಿಲ್ಲದೇ, ಸ್ವೀಕರಿಸುತ್ತಾ, ಬರುತ್ತಿದ್ದಳು . ಸುಮಳ ದೌರ್ಬಲ್ಯದ , ಬಗ್ಗೆ ಚೆನ್ನಾಗಿ ತಿಳಿದಿದ್ದ ಶುಭ, ಬೇಕಾಂತಾನೆ ಸುಮಳನ್ನ ಗೋಳುಯುತ್ತಿದ್ದಳು.
ಸುಮ , ಶುಭಳ ಗೆಳತನವನ್ನ, ಅಂಧವಾಗಿ ನಂಬಿದ್ದಳು . ಶುಭ ಬೇಕೆಂದು, ಹೀಯಾಳಿಸುವುದು, ಅವಮಾನ,ಮಾಡುವುದು. ಶುಭಳಿಗೆ ಅರ್ಥವೇ ಆಗುತ್ತಿರಲಿಲ್ಲ. ಎಲ್ಲಾವನ್ನು , ತಮಾಷೆಯಾಗಿ ನೋಡುತ್ತಾ. ನಗು ನಗುತ್ತಾ ಕಾಲ ಕಳೆಯುತ್ತಿದ್ದಳು ಸುಮ. ಶುಭ , ಹೇಳುವುದನೆಲ್ಲ ಸ್ವಲ್ಪ ಕೂಡ ಸಂಶಯ ಪಡೆದೇ ಕಣ್ಣು ಮುಚ್ಚಿ ನಂಬುತ್ತಿದ್ದಳು.
ಹೀಗಿರುವಾಗ , ಸುಮ ಮತ್ತು ಶುಭ ಇದ್ದ ಊರಲ್ಲಿ ವಿಜಯ್ ಎಂಬಾತನಿದ್ದ. ವಿಜಯ್ ಕೂಡ, ಆಗತಾನೇ ಪದವಿ, ಮುಗಿಸಿ . ನಗರದಲ್ಲಿ ಯಾವುದೋ ಒಂದು ಖಾಸಗಿ ಕಛೇರಿಯಲ್ಲಿ, ಕೆಲಸ ಮಾಡುತ್ತಿದ್ದ. ನೋಡಲು ಸುಂದರನಾಗಿದ್ದ, ಮತ್ತು ಎತ್ತರ ಕೂಡ ಇದ್ದ.
ವಿಜಯ್ ನನ್ನು, ನೋಡಿದರೆ ಎಂತಾ ಹುಡುಗಿಯಾದರು ಅವನ ಪ್ರೀತಿಯ ಬಲೆಯಲ್ಲಿ ಬಿಳುವಂತೆ, ಇತ್ತು ಅವನ ಚೆಲುವು. ಇದಿಷ್ಟು ಸುಮಾಗೆ ವಿಜಯ್ ಬಗ್ಗೆ ಕೇಳಿ, ನೋಡಿ, ತಿಳಿದುಕೊಂಡಿರುವ ವಿಷಯ. ಶುಭ ಮತ್ತು ಶುಭಳ ಅಣ್ಣ ರಾಜ್ ಗೆ, ವಿಜಯ್ ಸಾಮಾನ್ಯ ಸ್ನೇಹಿತನಾಗಿದ್ದನು.
ಒಂದು ದಿವಸ ಶುಭ, ಸುಮಾಳನ್ನ ಕರೆದು ಹೀಗೆ ಹೇಳಿದಳು. ಸುಮ, ನಿನಗೆ ವಿಜಯ್, ಗೊತ್ತಲ್ಲವೇ ಅಂದಳು. ಸುಮ, ಹಾಂ ಶುಭ. ವಿಜಯ್ , ಅದೇ ಓದು ಮುಗಿಸಿ ನಗರದಲ್ಲಿ ಕೆಲಸ ಮಾಡುತ್ತಾ ಇದ್ದಾನೇ ಅಲ್ಲವೇ . ಅವನ ಬಗ್ಗೆ ಕೇಳತಾ ಇದ್ದೀಯ ಶುಭ ಎಂದಳು ಸುಮ. ಶುಭ , ಆಹಾ ಅವನೇ , ಆ ವಿಜಯ್ ನೇ ಎಂದಳು ಶುಭ. ಸರಿ ಅವನ ಬಗ್ಗೆ, ನನ್ನ, ಬಳಿ ಏನು ಕೇಳತಾ ಇದ್ದೀಯ ಎಂದಳು ಸುಮ.
ಶುಭ ಮುಂದುವರೆದು, ನಾನು ಅವನ ಬಗ್ಗೆ, ನಿನ್ನ ಬಳಿ ಏನು ಕೇಳಲ್ಲ . ಅವನು , ಏನೋ ಹೇಳಿದ್ದಾನೆ , ನಿನಗೆ ನನ್ನ ಬಳಿ. ಅದನ್ನ ನಿನ್ನ ಬಳಿ ಹೇಳಬೇಕು ಎಂದಳು ಶುಭ. ಸುಮ, ಏನು, ವಿಜಯ್, ನನಗೆ ಏನೋ ಹೇಳಿದನಾ, ನಿನ್ನ ಬಳಿ. ಏನು ಹೇಳಿದಾನೆ. ನನಗೂ, ಅವನಿಗೂ ಪರಿಚಯವಿಲ್ಲ. ಸಾಲದಕ್ಕೆ ನಾನು , ಯಾರು, ಏನು, ಯತ್ತ ಯಾವುದು ಅವನಿಗೆ ತಿಳಿದೀಯೆ ಇಲ್ಲ. ಹೀಗಿರುವಾಗ. ಏನು ಹೇಳ, ಬಯಸುತ್ತಾನೇ ನನ್ನ ಬಗ್ಗೆ, ನಿನ್ನ ಬಳಿ ಶುಭ ,ಎಂದಳು ಸುಮ.
ಶುಭ ಮುಂದುವರೆದು, ವಿಷಯ ಇದೆ ಸುಮ. ಒಳ್ಳೆಯ ಸಂಗತಿ. ಏನು ಗೊತ್ತಾ? ಆ ವಿಷಯ ಹೇಳಿದರೆ ತುಂಬಾ ಖುಷಿ ಪಡ್ತೀಯ ನೀನು ಎಂದಳು ಶುಭ, ಸುಮಳಿಗೆ. ಸುಮ, ಸರಿ ಏನು ಹೇಳು ಶುಭ. ಶುಭ ಮುಂದುವರೆದು, ವಿಜಯ್, ನಿನ್ನನ್ನ , ಪ್ರೀತಿ ಮಾಡ್ತಾ ಇದಾನೆ, ಸುಮ. ಈ ವಿಷಯವನ್ನ ನನ್ನ ಬಳಿ ಹೇಳಿದ..ಮತ್ತು ಅವನ ಪ್ರೀತಿ ವಿಚಾರವನ್ನ, ನಿನಗೆ ತಿಳಿಸು, ಎಂದು ಹೇಳಿದ. ಎಂದು ಶುಭ , ಸುಮಳ ಬಳಿ, ಹೇಳಿದಳು. . ಆಶ್ಚರ್ಯ ಮತ್ತು ಅನುಮಾನಗೊಂಡ ಸುಮ, ಶುಭಳನ್ನು ಕೇಳಿದಳು.
,
ಏನೂ ಹೇಳುತ್ತಿರುವೇ ಶುಭ ನೀನು, ತಮಾಷೆ ಮಾಡಬೇಡ, ವಿಜಯ್ ಗೆ ನಾನು ಯಾರು, ಅಂತ ಸರಿಯಾಗಿ ಗೊತ್ತಿಲ್ಲ. ನನಗೆ ವಿಜಯ್ ಯಾರು ಅಂತ ಗೊತ್ತಿಲ್ಲ.
ಒಬ್ಬರ ಬಗ್ಗೆ , ಒಬ್ಬರಿಗೆ, ಯಾರೂ ,ಏನು , ಎತ್ತಾ ,ಯಾವುದೂ ತಿಳಿದಿಲ್ಲ . ಮತ್ತು ಅವನು ನೋಡಲು ಸುಂದರವಾಗಿದ್ದಾನೆ . ಪದವಿ ಮುಗಿಸಿ, ನಗರದಲ್ಲಿ ಕೆಲಸ ಮಾಡುತ್ತಾ ಇದ್ದಾನೆ. ಹೀಗಿರುವಾಗ.ನೋಡಲು ಸುಮಾರಾಗಿ , ಇರುವ ನನ್ನನ್ನ, ವಿಜಯ್ ಹೇಗೆ ಪ್ರೀತಿ , ಮಾಡುತ್ತಾನೆ ? ಅವನ ಅಭಿರುಚಿ, ಹೇಗಿದಿಯೊ, ಏನೀದೆಯೊ, ನನಗೆ ತಿಳಿದಿಲ್ಲ. ಹೀಗಿರುವಾಗ ವಿಜಯ್, ನನ್ನನ್ನು ಪ್ರೀತಿ
ಮಾಡಲು ಹೇಗೆ ಸಾಧ್ಯ.
ಸುಮ್ಮನೆ ಕಥೆ ಹೇಳಬೇಡ ಶುಭ. ನನಗೆ, ತುಂಬಾ ಕೆಲಸ ಇದೆ. ನಾನು ಮನೆಗೆ ಹೋಗುತ್ತೇನೆ. bye ಎಂದು ಹೇಳಿ ಸುಮ ಹೊರಟುಬಿಟ್ಟಳು. ಮೊದಲ ಬಾರಿ, ಶುಭಳ , ಮಾತನ್ನು , ನಂಬದ .ತಾನು ಹೇಳಿದ, ವಿಷಯಕ್ಕೆ ಲಕ್ಷ್ಯ,ಕೊಡದ.ಶುಭಳ ಮಾತುಗಳನ್ನ, ತಿರಸ್ಕರಿಸಿದ . ಸುಮಳ ಮೇಲೆ. ಶುಭಳಿಗೆ , ಭಯಂಕರ ಕೋಪ ಬಂದಿತು. ಇಷ್ಟು ದಿನ ತಾನು ಹೇಳಿದ, ಎಲ್ಲಾ ವಿಷಯವನ್ನು, ಕುರುಡಾಗಿ , ನಂಬುವ. ಮತ್ತು ಮರು ಮಾತು ಆಡದೇ. ಮರು, ಪ್ರಶ್ನೆ , ಮಾಡದೇ. ಶುಭ ಹೇಳಿದ, ಸುಳ್ಳು ಅನ್ನು, ಒಪ್ಪುವ ನಂಬುವ ಸುಮ.
ಶುಭ ಹೇಳಿದ ವಿಜಯ್ ವಿಚಾರ ವನ್ನ, ನಂಬದೆ. ಆ ವಿಷಯಕ್ಕೆ ಪ್ರತಿಕ್ರಿಯೆ , ನೀಡದೆ, ಸುಮ, ಹಾಗೇ, ಸುಮ್ಮನೆ ಹೋದದ್ದು. ಶುಭಳಿಗೆ ಇಷ್ಟವಾಗಲಿಲ್ಲ . ಮತ್ತು ಶುಭಳಿಗೆ, ಸಹಿಸುಕೊಳ್ಳಲು, ಸಾಧ್ಯವಾಗಲಿಲ್ಲ .ತಾನು , ಹೇಳಿದ, ವಿಷಯ ಮತ್ತು, ನನ್ನ ನಂಬಿಕೆ , ಸಾಬೀತು ಮಾಡಬೇಕೆಂದು.ಹಠಕ್ಕೆ, ಬಿದ್ದ ಶುಭ . ಮತ್ತೇ , ಸುಮಳನ್ನ ಕರೆದು ಹೀಗೆ ಹೇಳಿದಳು.
ಬಾ ಇಲ್ಲಿ ಸುಮ, ವಿಜಯ್ ನೀನ್ನನು ಪ್ರೀತಿ ಮಾಡುತ್ತಿರುವ, ವಿಷಯ ನಾನು ಹೇಳಿದರೆ , ನೀನು ನಂಬುತ್ತಾ ಇಲ್ಲವಲ್ಲಾ.
ನನ್ನ ಮಾತಿನ ಮೇಲೆ ನಂಬಿಕೆ ಇಲ್ಲ ನಿನಗೆ ಅಲ್ಲವೇ.ನಾನು ಸುಳ್ಳು ಹೇಳಿತಿನಿ ಅಂತ ಭಾವಿಸಿ , ನಾನು ಹೇಳಿದೆ, ಮಾತನ್ನ ತಿರಸ್ಕರಿಸಿದೇ ಅಲ್ಲ. ಆಯಿತು ಪರವಾಗಿಲ್ಲ. ನನ್ನ ಅಣ್ಣ ರಾಜ್ ನನ್ನು ಕೇಳು. ನಿನಗೆ ಸತ್ಯ ಏನೆಂದು ತಿಳಿಯುತ್ತದೆ. ಎಂದು ಹೇಳಿದಳು, ಶುಭ . ಸುಮಳ ಮುಂದೆ.ರಾಜ್ ನನ್ನು. ಕರೆತಂದು ನಿಲ್ಲಿಸಿ. ಶುಭ , ಹೇಳು ರಾಜ್ , ವಿಜಯ್ ಸುಮಳನ್ನ , ಪ್ರೀತಿ ಮಾಡ್ತಾ, ಇದೀನಿ ಅಂತ . ನಿನ್ನ ಮತ್ತು ನನ್ನ ಬಳಿ ಹೇಳಿದ ತಾನೆ.ಎಂದು ರಾಜ್ ನನ್ನು ಕೇಳಿದಳು . ರಾಜ್ ಮುಂದುವರೆದು ಹೌದು, ಶುಭ. ನಿನ್ನ ಮತ್ತು ನನ್ನ ಮುಂದೆ ವಿಜಯ್, ಸುಮಳನ್ನ, ಪ್ರೀತಿಸುವುದಾಗಿ ಹೇಳಿದೆನಲ್ಲಾ.
ಅದು ಸತ್ಯ ತಾನೇ. ಮತ್ತೆ ಯಾಕೆ ಕೇಳತಾ ಇದೀಯ ಶುಭ ಎಂದು , ಶುಭಳಿಗೆ, ರಾಜ್ ಕೇಳಿದ. ಆಗ ಶುಭ , ಏನಿಲ್ಲ ರಾಜ್ , ವಿಜಯ್ ನಮ್ಮಿಬ್ಬರ ಮುಂದೆ ಅವನ ಪ್ರೀತಿ ವಿಷಯನ ಹೇಳಿದೆನಲ್ಲಾ , ಅದನ್ನ ಸುಮಾಗೆ ತಿಳಿಸಿದೆ. ಸುಮ , ನನ್ನ ಮಾತನ್ನ ನಂಬಲಿಲ್ಲ . ಅದಿಕ್ಕೆ ಸತ್ಯ ಏನು ಅಂತ , ಸುಮಳಿಗೆ ತೀಳಿಸೊಕೆ. ನಿನ್ನನ್ನ ಕರೆದೆ ಎಂದಳು. ರಾಜ್ , ಏನು ? ವಿಜಯ್ ಸುಮಳನ್ನ ನಿಜವಾಗಿಯೂ ಪ್ರೀತಿ ಮಾಡ್ತಾ ಇದಾನೆ . ಅದನ್ನ ಸುಮಳಿಗೆ , ತಿಳಿಸೋಕೆ, ನಾಚಿಕೆ , ಭಯದಿಂದ . ನಮ್ಮಿಬ್ಬರ ಬಳಿ ಹೇಳಿದಾನೆ .
ಶುಭ ನೀನು ಆ, ವಿಷಯವನ್ನ , ಇದ್ದಂಗೆ ಸುಮಳಿಗೆ ಹೇಳಿದರೆ .ನಂಬತಾ ಇಲ್ಲವಾ ಸುಮ . , ವಿಜಯ್ ಸುಮಳನ್ನ, ಪ್ರೀತಿ ಮಾಡ್ತಾ, ಇರೋ,ಈ ವಿಷಯದಲ್ಲಿ, ಸುಳ್ಳು ಹೇಳಿದರೆ. ಶುಭ ಮತ್ತು ನನಗೆ (ರಾಜ್ ಗೆ) ಏನು ಪ್ರಯೋಜನ ?.ಹೇಳು ಸುಮ ಎಂದು ರಾಜ್ ಕೇಳಿದನು. ರಾಜ್, ಸರಿ, ಸುಮ. ಈಗಲು, ನಿನಗೆ, ನನ್ನ ಮತ್ತು ಶುಭಳ ಮಾತಿನ ಮೇಲೆ ನಂಬಿಕೆ ಇಲ್ಲ ಅಂದರೆ ಬಾ. ವಿಜಯ್ ಬಳಿ ಹೋಗೊಣ. ವಿಜಯ್ , ನಿನ್ನನ್ನ ( ಅಂದರೆ ಸುಮಳನ್ನ) ಪ್ರೀತಿ ಮಾಡ್ತಾ ಇರೋ ವಿಷಯ . ಸತ್ಯನಾ ಅಥವಾ, ಸುಳ್ಳ, ಅಂತ ವಿಜಯ್, ಬಳಿಯೇ, ಕೇಳಿ ತಿಳಿದುಕೊಳ್ಳೋಣ. ಬಾ ಎಂದು ರಾಜ್ ಸುಮಾಳಿಗೆ ಕರೆದನು.
ಭಯ ಮತ್ತು ಸಂಕೋಚ, ಗೊಂದಲಗೊಂಡ ಸುಮ, ಬೇಡ ರಾಜ್. ವಿಜಯ್ ಬಳಿ ಹೋಗುವುದು ಬೇಡ. ನನಗೆ, ಶುಭಳ, ಮಾತಿನ ಮೇಲೆ ಯಾವಾಗಲೂ ನಂಬಿಕೆ ಇದೆ. ಸುಮಾಳಿಗೆ , ರಾಜ್ ಮಾತು ಮುಂದುವರಿಸಿ . ಏನಿದು ಸುಮ? . ಶುಭ ನಿನ್ನ , ಪ್ರೀತಿಯ , ಆತ್ಮೀಯ ಗೆಳತಿ ಅಂತೀಯಾ. ಆದರೆ ಶುಭ , ಹೇಳಿದ ವಿಷಯ ನಂಬದೇ . ನನ್ನ ಹತ್ತಿರ , ವಿಷಯ ತಿಳಿದುಕೊಳ್ಳಲು. ನನ್ನವರೆಗೂ ಬರಲೇಬೇಕಾಯಿತಾ? ಎಂದು ಸುಮಳಿಗೆ ಕೇಳಿದನು. ರಾಜ್ ಮಾತು ಮುಂದುವರಿಸಿ, ಸುಮ, ನೀನು, ಶುಭಗಳಿಗೆ , ಅವಳ ಸ್ನೇಹಕ್ಕೆ ಅವಮಾನ ಮಾಡುತ್ತಾ ಇದೀಯ ಎಂದನು ರಾಜ್.
ಅವರಿಬ್ಬರ ಮಾತನ್ನು ಕೇಳಿದ ಸುಮ. ತಬ್ಬಿಬ್ಬಾಗಿ ಹಾಗೇನು ಇಲ್ಲ ರಾಜ್. ನಾನು, ಯಾವತ್ತೂ ಶುಭಳಿಗೆ, ಅವಳ ಸ್ನೇಹಕ್ಕೆ ಅವಮಾನ, ಮಾಡಿಲ್ಲ. ಮುಂದೆನು ಮಾಡಲ್ಲ . ಅವಳನ್ನ ಮತ್ತು ಅವಳು ಹೇಳಿದ, ಯಾವುದೇ, ವಿಚಾರವಾದರೂ, ನಾನು ನಂಬದೇ ಹೋದ ಉದಾಹರಣೆಗಳೆ ಇಲ್ಲ. ನಾನು ಶುಭಳನ್ನ , ಸಂಪೂರ್ಣವಾಗಿ ನಂಬಿದ್ದೆನೆ.ಮುಂದೆಯು ಆ ನಂಬಿಕೆ ಕಾಪಾಡಿಕೊಳ್ಳುತ್ತೆನೆ ಎಂದಳು. ಪ್ರೀತಿ, ವಿಷಯವಾಗಿ ಸುಳ್ಳು ಹೇಳುವುದರಿಂದ ಅವರಿಗೆನೂ ಲಾಭ ಎಂದು ಯೋಚಿಸಿ ಸುಮ, ವಿಜಯ್ ಬಗ್ಗೆ ಮನಸಿನಲ್ಲಿ ಯೋಚಿಸಲು ಆರಂಭಿಸಿದಳು. ವಿಜಯ್ ನನ್ನ ಎದುರಿಗೆ ಸಿಕ್ಕಾಗ ನೋಡುತ್ತಾ.
ಅವನ ರೂಪವನ್ನ ಕಣ್ಣು ತುಂಬಿಕೊಳ್ಳುತ್ತಾ , ಅವನ ಬಗ್ಗೆ ಕನಸು ಕಾಣುತ್ತ, ಅವನನ್ನು ಬೆಟ್ಟದಷ್ಟು ಪ್ರೀತಿಸಿದಳು. ಸುಮಾಳನ್ನ ಗಮನಿಸುತ್ತಿದ್ದ ವಿಜಯ್, ಸುಮ ಎದುರಿಗೆ ಬಂದಾಗ, ಅವನು ಕೂಡ ಅವಳನ್ನ ನೋಡುವುದು, ಅವಳ ಬಗ್ಗೆ, ಅವಳು, ಕೇಳಿಸಿಕೊಳ್ಳುವ ಹಾಗೇಯೆ, ಬೇರೆಯವರ ಮುಂದೆ ಅವಳ ಬಗ್ಗೆ ಮಾತಾನಾಡುವುದು. ಮತ್ತು ವಿಜಯ್ ತಾನು, ಸುಮಳನ್ನ ಪ್ರೀತಿ ಮಾಡುತ್ತಿರುವಾಗ, ಹಾಗೆ, ಹಾವ ಭಾವ ತೋರುತ್ತಿದ್ದನು.ಇದನೆಲ್ಲಾ ನೋಡಿದ ಸುಮಗೆ, ವಿಜಯ್ ನನ್ನನ್ನ ನಿಜವಾಗಿಯೂ, ಪ್ರೀತಿ ಮಾಡ್ತಾ ಇದಾನೆ ಎಂಬ, ನಂಬಿಕೆ ಭರವಸೆ, ಗಾಢವಾಗಿ ಹುಟ್ಟಿಕೊಂಡಿತು.
ಎದುರಿಗೆ ಸಿಕ್ಕಾಗಾಗಲೆಲ್ಲಾ, ವಿಜಯ್ ಸುಮಳನ್ನ, ದಿಟ್ಟಿಸಿ,ನೋಡುವುದು.ಅವನ, ಮನಸಲ್ಲಿ , ಸುಮಳ ಬಗ್ಗೆ ಪ್ರೀತಿ ಇರುವ, ಹಾಗೆ,ಹಾವ ಭಾವ ತೋರುತ್ತಿದ್ದ. ಆದರೂ ಇಬ್ಬರು ಎಲ್ಲಿಯೂ openup ಆಗಿ, ಪ್ರೀತಿಹೇಳಿಕೊಂಡಿಲ್ಲಾ ,ಯಾರೊಬ್ಬರು ಪ್ರೀತಿಯನ್ನ ಬಹಿರಂಗ ಪಡಿಸಲಿಲ್ಲ .
ಸುಮ ನೂರಾರು ಕನಸು ಕಾಣುತ್ತ, ವಿಜಯ್ ನ ಕಲ್ಪನೆಯ ಪ್ರೇಮಲೋಕದಲ್ಲಿ ಮುಳುಗಿ ಹೋಗಿದ್ದಳು.
ಸುಮ ವಿಜಯ್ ನನ್ನ ಎಷ್ಟು ಪ್ರೀತಿ ಮಾಡಲು ಶುರು ಮಾಡಿದಳೆಂದರೆ, ವಿಜಯ್ ನೆನಪು, ವಿಜಯ್ ಮೇಲಿನ ಪ್ರೀತಿ 2ಡು ಇಲ್ಲ ಅಂದ್ರೆ, ಸುಮಳ ಬದುಕು ಶೂನ್ಯ, ವಿಜಯ್ ಇಲ್ಲದ ಜೀವನ ನಶ್ವರ ಎಂಬಂತೆ. ವಿಜಯ್ ನನ್ನ ಪ್ರೇಮಿಸುತ್ತಿದ್ದಳು. ಒಂದು ವರ್ಷ ಪ್ರೀತಿಯಲ್ಲಿ ಕಳೆದ ಸುಮಾ. ಒಂದು, ದಿನ ಕೂಡ, ವಿಜಯ್ ಎದುರು ನಿಂತು ತನ್ನ ಮನಸಿನ, ಭಾವನೆಗಳನ್ನ, ಪ್ರೀತಿಯನ್ನ ವ್ಯಕ್ತಪಡಿಸಲಿಲ್ಲ.ಮೊದಲೇ, ಸಂಕೋಚ ಸ್ವಭಾವದವಳು. ಮೊದಲು,ವಿಜಯ್ ತಾನೇ, ನನ್ನ ಪ್ರೀತಿ, ಮಾಡತೀರೊ,ವಿಷಯನ, ಶುಭ ಮತ್ತು ರಾಜ್ ಬಳಿ ಹೇಳಿದ್ದು.
ಅದು, ಭಯ, ನಾಚಿಕೆ, ಸಂಕೋಚ ಅಂತ. ಇದೆಲ್ಲಾ, ಒಬ್ಬ ಹುಡುಗ ಆಗಿ ವಿಜಯ್ ಗೆ ಇರುವಾಗ. ಇನ್ನು ನಾನು ಹೆಣ್ಣು ಮಗಳು. ಇದೆಲ್ಲಾ, ನನಗೆ ಇನ್ನೂ ಜಾಸ್ತಿನೇ ಇರುತ್ತೆ. ಇಬ್ಬರು, ಒಬ್ಬರೊನ್ನೊಬ್ಬರನ್ನ, ಎದುರು ಬದುರು, ಕಣ್ಣಲೇ ನೋಡತಾ ಪ್ರೀತಿ ಮಾಡ್ತಾ ಇದಿವಲ್ಲಾ. ಮುಂದೆ ಹೋಗಿ, propose ಮಾಡೋದೆಲ್ಲಾ ಯಾಕೆ? ಆಮೇಲೆ, ಮನೇಲಿ 🏠 ಗೊತ್ತಾಗೋದು. ಬೇರೆಯವರ ಮುಂದೆ ತೋರಿಸಿಕೊಂಡರೆ, ಅಪಾಯ ಅಂತ ಗುಟ್ಟಾಗೆ ಸುಮ ಪ್ರೀತಿ ಮಾಡುತ್ತಿದ್ದಳು. ಹೀಗೆ ಸುಮಳ ಪ್ರೀತಿ ಗಾಢವಾಗಿ ಸಾಗುತ್ತಿತ್ತು.
.
ಆದರೆ ವಿಜಯ್ ಗೆ ಸುಮ ತನ್ನನ ಅಷ್ಟು ಪ್ರೀತಿ ಮಾಡುತ್ತಿರುವ ವಿಷಯ ತಿಳಿದಿದ್ದರು. ತಾನು ಕೂಡ ಅವಳನ್ನ, ಅವಳದೇ, ರೀತಿಯ ಪ್ರೀತಿ ಮಾಡುತ್ತಿರುವಾಗ ಹಾಗೆ ನಡೆದುಕೊಳ್ಳುತ್ತಿದ್ದನು . ಇಬ್ಬರು ಒಂದು ದಿನ, ಮುಕ್ತವಾಗಿ, ಬಾಯಿ ತೆರೆದು. ಅವರವರ ಪ್ರೇಮ ನಿವೇದನೆ ಮಾಡಿಕೊಳ್ಳಲೇ ಇಲ್ಲ. ಹೀಗೆ ಸಾಗುತ್ತಿತ್ತು . ಅವರ ಪ್ರೀತಿ ಪ್ರೇಮ ಪಯಣ.
ಸುಮಳಿಗೆ, ಮತ್ತೊಬ್ಬ ಗೆಳತಿ ಇದ್ದಳು. ಅವಳ ಹೆಸರು ಪ್ರೇಮ . ಪ್ರೇಮ ಸೌಂದರ್ಯವತಿ, ಮತ್ತು ಬಣ್ಣ ಕೂಡ, ಕೆಂಪು , ನೋಡಲು ಚೆನ್ನಾಗಿ ಇದ್ದಳು, ಅವಳ ಸೌಂದರ್ಯಕ್ಕೆ ಮಾರುಹೋಗದವರು ಇಲ್ಲ.
ಒಂದು ದಿನ ಸುಮ ಮತ್ತು ಪ್ರೇಮ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು.
ಇವರನ್ನ ಹಿಂಬಾಲಿಸುತ್ತಾ ವಿಜಯ್, ಬರುತ್ತಿದ್ದನು. ವಿಜಯ್ ನನ್ನ ನೋಡಿ, ಸುಮ ಮತ್ತು ಪ್ರೇಮ, ಹೀಗಂದೂಕೊಂಡರು,?
ಸುಮ… ನಾನು ಮತ್ತು ವಿಜಯ್, ಪ್ರೀತಿ ಮಾಡ್ತಾ ಇದೀವಲ್ಲಾ. ಆ ವಿಷಯನ ಮುಕ್ತವಾಗಿ , ಹಂಚಿಕೊಳ್ಳಲು , ಅದರ ಬಗ್ಗೆ ಮಾತನಾಡಲು . ವಿಜಯ್ ನನ್ನ ಹತ್ತಿರ ಬರುತ್ತಿದ್ದಾನೆ ಎಂದು ತಿಳಿದುಕೊಂಡಳು ಸುಮ.
ಪ್ರೇಮ ಕೂಡ ಹಾಗೇ ಅಂದುಕೊಂಡಳು. (ಆದರೆ ಅಲ್ಲಿ ನಡೆದದ್ದೆ ಬೇರೆ, ಅದೇನಪ್ಪ ಅಂದರೆ ವಿಜಯ್ ಬಂದು ತಾನು ಪ್ರೇಮಳನ್ನ ಪ್ರೀತಿ ಸುವುದಾಗಿ ತಿಳಿಸುತ್ತಾನೆ . )
ಸುಮ ಮತ್ತು ಪ್ರೇಮಳ ಮುಂದೆ ಬಂದು ನಿಂತ ವಿಜಯ್, ಪ್ರೇಮಳಿಗೆ ನಿಲ್ಲಲು ಹೇಳುತ್ತಾನೆ. ಪ್ರೇಮ, ಗಾಬರಿಯಿಂದ ಸುಮಳ್ಳನ್ನು ನೋಡಿದಳು . ಸುಮ ಕೂಡ, ಗೊಂದಲದಿಂದ ಪ್ರೇಮಳನ್ನ ನೋಡಿದಳು. ಹಾಗೆ , ಇಬ್ಬರು , ಮುಖ, ನೋಡಿಕೊಳ್ಳುತ್ತಾ, ಸುಮ ಮತ್ತು ಪ್ರೇಮ ಇಬ್ಬರು ನಿಲ್ಲುತ್ತಾರೆ. ವಿಜಯ್ ಒಂದು ಗ್ರೀಟಿಂಗ್ ಕಾರ್ಡ್ ಹಿಡಿದು , ಪ್ರೇಮಳಿಗೆ ತೆಗೆದುಕೊಳ್ಳಲು ಹೇಳುತ್ತಾನೆ.
ಪ್ರೇಮ, ವಿಜಯ್ ಗೆ , ಏನಿದು? ಯಾಕೆ ಎಂದು ಕೇಳಿದಳು?, ವಿಜಯ್ ಆಗ. ನಾನು ನಿನ್ನನ್ನು ತುಂಬಾ ಪ್ರೀತಿ ಮಾಡ್ತಾ ಇದೀನಿ ಪ್ರೇಮ. ಈ ಗ್ರೀಟಿಂಗ್ ಕಾರ್ಡ್ ನಲ್ಲಿ ನನ್ನ ಪ್ರೀತಿಯ ವಿಷಯವನೆಲ್ಲಾ ಬರೆದಿದ್ದೆನೆ, ಆದರಿಂದ ಇದನ್ನ, ಸ್ವೀಕರಿಸು . ಹಾಗೆ ನಿನ್ನ ಉತ್ತರ ತಿಳಿಸು ಎಂದನು . ವಿಜಯ್ ನ ಮಾತು ಕೇಳಿದ ಸುಮಳ ಎದೆ ಹೊಡೆದಂತಾಯಿತು.ತಲೆ ತಿರುಗಿ, ಕುಸಿದು ಬೀಳುವಂತಾಗಿ ಸುಮ್ಮನೆ, ಮೌನವಾಗಿ ನಿಂತಳು ಸುಮ.
ಪ್ರೇಮ, ಕೂಡ ತಬ್ಬಿಬ್ಬಾಗಿ , ನಾನು ಈ. ಗ್ರೀಟಿಂಗ್ ಕಾರ್ಡ್ ಅನ್ನು ತೆಗೆದುಕೊಳ್ಳುವುದಿಲ್ಲ . ನಿನ್ನ ಪ್ರೀತಿಯನ್ನು ನಾನು ಒಪ್ಪುವುದಿಲ್ಲ. ನಾನು ನಿನ್ನನ್ನು, ಯಾವತ್ತು ಪ್ರೀತಿ ಮಾಡಲು ಆಗುವುದಿಲ್ಲ. ನನಗೆ, ಈ ಪ್ರೀತಿ ಪ್ರೇಮ, ಎಲ್ಲಾ ಇಷ್ಟ ಇಲ್ಲ. ಎಂದಳು ಪ್ರೇಮ ವಿಜಯ್ ಗೆ. ಕಾರಣ ಸುಮ, ವಿಜಯ್ ನನ್ನು, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ವಿಷಯ ಪ್ರೇಮಳಿಗೂ, ತಿಳಿದಿತ್ತು.
ಪ್ರೇಮ , ಮುಂದುವರೆದು , ಇನ್ನು ಮುಂದೆ ಈ ಪ್ರೀತಿ ಪ್ರೇಮ ಅಂತ, ಕಥೆ ಹೇಳಿಕೊಂಡು, ನನ್ನ ಮುಂದೆ ಬರಬೇಡ. ನನ್ನ ಮುಂದೆ, ಬಂದು ನಿಂತು. ಪ್ರೀತಿ ಪ್ರೇಮ ಅಂತ ನನ್ನ ತಲೆ ತಿಂದರೆ ನೇರ, ನನ್ನ ತಂದೆ ಬಳಿ ಹೋಗಿ, ವಿಷಯ ಹೇಳುತ್ತೇನೆ. ಆನಂತರ ಅವರು, ನಿನ್ನ ಬಳಿ ಮಾತಾನಾಡುತ್ತಾರೆ ಎಂದಳು. ಪ್ರೇಮ ನಾನು ಓದಿ, ಏನನ್ನಾದರೂ, ಆ ಸಾಧಿಸಬೇಕೆಂದು ಇದ್ದೇನೆ.
ಆದರಿಂದ ನನಗೆ, ಈ ಪ್ರೀತಿ ಪ್ರೇಮ ಅಂತ, ತೊಂದರೆ, ಕೊಡಬೇಡ. ಎಂದು ಖಡಾಖಂಡಿತವಾಗಿ ಪ್ರೇಮ ಹೇಳಿಬಿಟ್ಟಳು. ಅಲ್ಲಿಂದ ಸುಮ ಮತ್ತು ಪ್ರೇಮ ಮನೆ ಕಡೆಗೆ, ಸಾಗಿದರು. ಇದನೆಲ್ಲಾ ಗಮನಿಸಿದ ಸುಮ ಮತ್ತು ಪ್ರೇಮ ಯೋಚಿಸ ತೊಡಗಿದರು.
ಶುಭ ಮತ್ತು ರಾಜ್, ವಿಜಯ್ ಸುಮಳನ್ನು , ಪ್ರೀತಿ ಮಾಡುತ್ತಿರುವುದಾಗಿ , ಹೇಳಿದರು. ಆದರೆ ವಿಜಯ್, ಬಂದು ಪ್ರೇಮಳನ್ನ, ಪ್ರೀತಿಸುವುದಾಗಿ, ಹೇಳುತ್ತಿದ್ದಾನೆ.
ಇದರಲ್ಲಿ , ಯಾರದೂ ನಿಜ, ಯಾರದು ಸುಳ್ಳು, ಎಂದು ಚಿಂತಿಸ ತೊಡಗಿದರು. ಪ್ರೇಮ, ಸುಮಳಿಗೆ sorry ಕಣೀ, ವಿಜಯ್ ನಿನಗೆ propose ಮಾಡೋಕೆ ಬಂದ ಅಂದುಕೊಂಡೆ.
ಆದರೆ ಅವನು ನನಗೆ propose ಮಾಡಿಬಿಟ್ಟ.ನಿನ್ನ ಮನಸಿಗೆ ನೋವಾಯಿತಾ ಸುಮ ಎಂದು ಪ್ರೇಮ ಕೇಳಿದಳು. ಸುಮ, ಮುಂದುವರೆದು ಯಾಕೆ, ನೋವು, ಬೇಜರು, ಏನು, ಇಲ್ಲ ಕಣೇ.ಎಂದಳು ಸುಮ.
ಪ್ರೇಮ , ಇದ್ಯಾವುದು ನನಗೆ ಗೊತ್ತಿಲ್ಲ ಸುಮ. ನೀನು ಶುಭ ಹತ್ತಿರ ಕೇಳಿ ತಿಳಿದುಕೊ ಸುಮ ಎಂದಳು. ನನ್ನಿಂದ ಏನಾದರೂ ಬೇಜಾರು ಆಗಿದ್ದರೆ ನನ್ನನ್ನು ಕ್ಷಮಿಸು ಎಂದಳು. ಪ್ರೇಮ. .
ಸುಮ , ಅದೆಲ್ಲಾ ಏನೂ, ಬೇಜಾರು ಇಲ್ಲ, ಬೀಡೆ ಪ್ರೇಮ, ಬಾ ಮನೆಗೆ ಹೋಗೊಣ ಎಂದಳು ಸುಮ. ಇಬ್ಬರೂ ಮನೆ ಕಡೆಗೆ ನಡೆದರು.
ಸುಮ ಮನೆಗೆ ಬಂದು, ಅಲ್ಲಿ ನಡೆದನೆಲ್ಲಾ ರಿವೈಂಡ್ ಮಾಡಿ,ಯೋಚಿಸ ತೊಡಗಿದಳು. ಏನಿದು ವಿಚಿತ್ರ, ವಿಜಯ್ ನನ್ನನ್ನು ಪ್ರೀತಿ ಮಾಡ್ತಾ ಇದಾನೆ ಅಂತ ಶುಭ ಹೇಳಿದ್ದಳು . ಸಾಲದಕ್ಕೆ ರಾಜ್ ಕೂಡ ಹೇಳಿದ. ವಿಜಯ್ ನಡವಳಿಕೆ ಕೂಡ ಹಾಗೆಯೇ ಇತ್ತು.
ಆದರೀಗ ವಿಜಯ್ ಪ್ರೇಮಳನ್ನು ಪ್ರೀತಿಸುವುದಾಗಿ ಹೇಳುತ್ತಿದ್ದಾನೆ. ಅಂದರೆ ವಿಜಯ್ ಪ್ರೀತಿ ಮಾಡಿದ್ದು ನನ್ನಲ್ಲ , ಪ್ರೇಮನಾ. ಪ್ರೇಮನಾ, ಪ್ರೀತಿ ಮಾಡುತ್ತಿರುವ ವಿಜಯ್,
ನನ್ನನ್ನ ಯಾಕೆ ಪ್ರೀತಿಯ, ನೋಟದಿಂದ ನೋಡುತ್ತಿದ್ದ. ಎದುರು ಬಂದಾಗಲೆಲ್ಲಾ ನನ್ನನೆ ಪ್ರೀತಿಸುವ, ಹಾಗೆ ನಡೆದುಕೊಳ್ಳುತ್ತಿದ್ದ.
ಈಗ ಏನಾಯಿತು, ವಿಜಯ್ ಯಾಕೆ? ಹೀಗೆ ಮಾಡ್ತಾ ಇದಾನೆ? ಎಂದು ತಿಳಿಯದೆ?.
ಸುಮ, ಶುಭ ಮತ್ತು ರಾಜ್ ನನ್ನು ಮಾತನಾಡಲು ಕರೆದಳು.
ಅಲ್ಲಿಗೆ ಬಂದ ರಾಜ್ ಮತ್ತು ಶುಭಗೆ , ಸುಮ ನಡೆದ ಸಂಧರ್ಭವನ್ನ ವಿವರಿಸಿದಳು. ಇದನ್ನು ಕೇಳಿಸಿಕೊಂಡ ಶುಭ, ಹೌದು ಪ್ರೇಮಾಗೆ ವಿಜಯ್ propose ಮಾಡಿದ್ದು ಸರಿತಾನೆ?. ,ಅಂದಳು.
ಇದರಲ್ಲಿ ತಪ್ಪೇನಿದೆ ಎಂದಳು . ಗಾಬರಿಯಾದ ಸುಮ, ಶುಭ ನೀನು ಏನ್ ಹೇಳಾತ ಇದೀಯ ಅಂತ ಗೊತ್ತಾ ನಿನಗೆ. ಶುಭ ಗೊತ್ತು,
ವಿಜಯ್ ಪ್ರೇಮಳನ್ನ ಪ್ರೀತಿ ಮಾಡ್ತಾ ಇದ್ದಿದ್ದು , ಅವಳಿಗೆ propose ಮಾಡಿದ್ದು ಎಲ್ಲಾ ನನಗೆ ಗೊತ್ತು ಎಂದಳು. ಸುಮ… ಏನು ವಿಜಯ್ ಪ್ರೇಮಳನ್ನ ಪ್ರೀತಿ ಮಾಡ್ತಾ ಇರೋದು, ಮತ್ತೆ propose ಮಾಡಿದ್ದು. ಎಲ್ಲಾ ನಿನಗೆ ಗೊತ್ತಾ.
ಹಾಗಾದರೆ ವಿಜಯ್ ನನ್ನ ಪ್ರೀತಿ ಮಾಡ್ತಾ ಇದಾನೆ. ನನ್ನನ್ನ ಪ್ರೀತಿ ಮಾಡೋ ವಿಷಯನ, ನನ್ನ ಬಳಿ ತಿಳಿಸೋಕೆ ಭಯ ಆಗಿ. ಆ ವಿಷಯವನ್ನ , ನಿನ್ನ ಮತ್ತೆ ರಾಜ್ ಜೊತೆ ವಿಜಯ್ ಹೇಳದ ಅಂತ ನಿವಿಬ್ಬರೂ ನನ್ನ ಬಳಿ ಹೇಳಿದ್ದು ಸುಳ್ಳ, ಎಂದು ಕೇಳಿದಳು ಸುಮ.
ಶುಭ ಮತ್ತು ರಾಜ್ ಮಾತು ಮುಂದುವರಿಸಿ. ನಾವಿಬ್ಬರೂ ಹೇಳಿದ್ದು ಸುಳ್ಳು . ವಿಜಯ್ ಯಾವತ್ತು ನಿನ್ನನ ಪ್ರೀತಿಸಲೇ ಇಲ್ಲ, ಅವನು ಪ್ರೀತಿಸಿದ್ದು, ಪ್ರೇಮಳನ್ನ, ನಿನ್ನ ಬಗ್ಗೆ ವಿಜಯ್ ಗೆ ಯಾವುದೇ ಭಾವನೆಗಳಿಲ್ಲಾ.
ಶುಭ, ನಾನು ಮತ್ತು , ರಾಜ್, ವಿಜಯ್. ಮೂವರು ಸೇರಿ, ವಿಜಯ್ , ನಿನ್ನನ್ನ ಪ್ರೀತಿ ಮಾಡತಾ , ಇದಾನೆ ಅಂತ. ಸುಳ್ಳು ಹೇಳಿದಿವಿ. ಈ ಸುಳ್ಳು ವಿಷಯನ, ಮೂರು ಜನ, ನಿನ್ನನ್ನ ತಮಾಷೆ ಮಾಡೋಣ ಅಂತ. ಯೋಜನೆ ಮಾಡಿ. ನಿನಗೆ ಸುಮ್ಮನೆ ಹೇಳಿದಿವಿ. ಮಜ ತಗೋಳಣ ಅಂತ. ನೀನು, ಇಷ್ಟು foolish ಆಗಿ ನಂಬತೀಯ. ಈ ವಿಷಯ ಖಚಿತಪಡಿಸಿಕೊಳ್ಳದೆ. ನಿಜವಾದ ಪ್ರೀತಿ ಬಲೆಗೆ ಬೀಳತಿಯ, ಅಂತ ಯಾರಿಗೆ ಗೊತ್ತಿತ್ತು.ಹೋಗಲಿ ಬಿಡು ಇದೆಲ್ಲಾ ತಮಾಷೆಗಾಗಿ ಮಾಡಿದ್ದು ಅಂತ ಶುಭ, ನಾಜೂಕಾಗಿ ಹೇಳಿಬಿಟ್ಟಳು.
ಸುಮ, ಮುಂದುವರೆದು, ಆದರೆ ನಾನು, serious ಆಗಿ ಪ್ರೀತಿ ಮಾಡೋ ವಿಷಯ, ವಿಜಯ್ ಗೆ ಗೊತ್ತಿದ್ದರು. ಅವನು ನನ್ನ ಪ್ರೀತಿಸಲಿಲ್ಲ ಅಂದರೆ. ನನ್ನ , ನೋಡೊತಾ ತರ , ನನ್ನ ಬಗ್ಗೆ ಬೇರೆಯವರ ಮುಂದೆ, ಪ್ರೀತಿ ಇರೋ ತರ ಯಾಕೆ ವರ್ತಿಸಿದ. ಇದನ್ನೆಲ್ಲಾ ಅವನ, ಮನಸಿಂದ ಮಾಡಲಿಲ್ಲವಾ? ಪ್ರೀತಿಯಿಂದ , ನಡೆದುಕೊಳ್ಳಲಿಲ್ಲವಾ.ಇದೆಲ್ಲಾ ನನ್ನ ನಂಬಿಸಲು ಮಾಡಿದ ನಾಟಕನಾ? ಎಂದು ಕೇಳಿದಳು ಸುಮ. ಅದಕ್ಕೆ, ಪ್ರತಿ ಉತ್ತರವಾಗಿ , ಶುಭ ಹೇಳಿದಳು .
ಈ, ಸುಳ್ಳಿನ ಪ್ರೀತಿ ವಿಷಯ, ನಿನ್ನ ಬಳಿ ತಿಳಿಸಿದಾಗ. ರಾಜ್ ಮತ್ತು ನಾನು ಅಂದರೆ, ಶುಭ. ವಿಜಯ್ ಗೆ, ನಿನ್ನ ಬಳಿ, ಈ ಸುಳ್ಳಿನ, ಪ್ರೀತಿಯ ಕಥೆ ಹೇಳಿದಿವಿ. ಆದರಿಂದ, ನೀನು, ಸ್ವಲ್ಪ ಪ್ರೀತಿ , ಮಾಡುವ ಹಾಗೆ ತೋರಿಸಿಕೋ. ಆಗ ಸುಮ ನಂಬುತ್ತಾಳೆ . ಆನಂತರ, ನಿಜ ಹೇಳಿ. ತಮಾಷೆಗಾಗಿ ಈ ರೀತಿ ಮಾಡೀದಿವಿ ಅಂತ ಹೇಳೊಣ. ಎಂದು ವಿಜಯ್ ಗೆ ತಿಳಿಸಿದ್ದೀವಿ. ಆದರಿಂದ ವಿಜಯ್ ಕೂಡ, ಈ ರೀತಿ ಪ್ರೀತಿ , ಮಾಡುವ, ಹಾಗೆ, ನಿನ್ನ ಮೇಲೆ, ಪ್ರೀತಿ , ಇರುವ ಹಾಗೆ ನಿನ್ನ ಮುಂದೆ ನಾಟಕವಾಡಿದ. .
ತಮಾಷೆ ಮಾಡುವುದಕ್ಕಾಗಿ ನಾವು ಈ ಸುಳ್ಳನ್ನ ಹೇಳಿದವಿ ಅಷ್ಟೇ ನೀನು ಇಷ್ಟು ಸುಲಭವಾಗಿ ನಂಬತೀಯ ಅಂತ ಗೊತ್ತಾಗಲಿಲ್ಲ. ಈ ವಿಷಯ ಇಲ್ಲಿಗೆ ಬಿಟ್ಟುಬಿಡು . ಮುಂದುವರೆಸಬೇಡ. ವಿಜಯ್, ನಿನ್ನ ಯಾವತ್ತೂ ಪ್ರೀತಿ ಮಾಡಿಲ್ಲ.ಮುಂದೆ ಮಾಡೋದು ಇಲ್ಲ. ಅವನ, ಕನಸಲ್ಲಿ, ಮನಸಲ್ಲಿ ಇರೋದು, ಪ್ರೇಮ.ಅವಳನ್ನೆ ವಿಜಯ್ ಪ್ರೀತಿ ಮಾಡ್ತಾ ಇರೋದು.ಎಂದು ಹೇಳಿ, ಒಂದು ಕ್ಷಮೆ ಕೂಡ ಕೇಳದೆ. ಸಮಾಧಾನದ, ಒಂದು ಮಾತು ಕೂಡ ಆಡದೇ ಅಲ್ಲಿಂದ ಹೊರಟು ಹೋದಳು ಶುಭ.
ಮತ್ತೆ, ರಾಜ್ ಮತ್ತು ಶುಭ ಇಬ್ಬರು ಬಂದು. ಹೀಗಂದರು. ಸುಮ ನಾವು ಹೇಳಿದ ಈ ಸುಳ್ಳು ಪ್ರೀತಿಯ, ಕಥೆಯನ್ನ, ಕೇಳಿ. ನಂಬದೇ ಸುಮ್ಮನಾಗಿ , ಬಿಡಿತೀಯ ಅಂತ ನಾವು ಅಂದುಕೊಂಡೀವಿ.ಆದರೆ ಈ ಸುಳ್ಳನ್ನ ನಿಜ ಅಂತ ನಂಬಿ ಅವನನ್ನ ಇಷ್ಟು ಪ್ರೀತಿ ಮಾಡ್ತೀಯ ಅಂತ ನಮಗೆ ಗೊತ್ತಿರಲಿಲ್ಲ, ಎಂದು ಶುಭ ಮತ್ತು ರಾಜ್ ವಿವರಿಸಿ. ಅಲ್ಲಿಂದ ಹೊರಟು ಹೋದರು.
ಸುಮಗೆ ತಂದೆ ತಾಯಿ ಪ್ರೀತಿ ಕೊರತೆ , ಮೊದಲೇ ಇತ್ತು.ಮತ್ತೊಬ್ಬರ, ಆಗಮನದ ರೂಪದಲ್ಲಿ ಪ್ರೀತಿಯನ್ನ ಬಯಸಿದ ಸುಮಗೆ ನಿರಾಸೆಯಾಯಿತು. ತನ್ನ ಗೆಳತಿ ಮಾತನ್ನ ಕೇಳಿ, ಮೂರ್ಖತನದಿಂದ ನಂಬಿ ಮೋಸ ಹೋದಳು.
ಇದರಿಂದ ಯಾರನ್ನೂ ಅತಿಯಾಗಿ ನಂಬಬಾರದು ಎಂದು ಪಾಠ ಕಲಿತಳು.
ಪ್ರೀತಿ ಮನಸಿಗೆ ಸಂಭದಿಸಿದ್ದು, ಪ್ರೀತಿಗೆ ಬದಲು ಪ್ರೀತಿ ಸಿಗಲೇಬೇಕು ಅಂತ ಏನ್ ಇಲ್ಲ. ವಿಜಯ್, ಸುಮಳನ್ನ ಪ್ರೀತಿಸದೆ ಇದ್ದರು , ಸುಮಗೆ ವಿಜಯ್ ಮೇಲಿನ ಪ್ರೀತಿ ಎಂದಿಗೂ ಕಡಿಮೆ ಆಗಲಿಲ್ಲ.
ಕಾರಣ ಸುಮಳ ಪ್ರೀತಿ, ಯಾವ ನೀರಿಕ್ಷೆ, ಇಲ್ಲದ. ನಿಜವಾದ ನಿಷ್ಕಲ್ಮಶವಾದ ಪ್ರೀತಿಯಾಗಿತ್ತು.
ಆದರೆ ಶುಭ ಮತ್ತು ರಾಜ್ ಹೇಳಿದ ಹುಡುಗಾಟದ ಸುಳ್ಳು. ಪ್ರೀತಿಯ ವಿಷಯದಲ್ಲಿ , ಅವರು ಮಾಡಿದ ನಾಟಕ . ಅದಕ್ಕೆ ಪೂರಕವಾಗಿದ್ದ ವಿಜಯ್ ನ, ನಡವಳಿಕೆ ಮಾತ್ರ ಸುಮಳ ಮನಸಿನಲ್ಲಿ ಮತ್ತು ಸುಮಳ ಜೀವನದಲ್ಲಿ, ಮಾಸದ ಗಾಯವಾಗಿತ್ತು. ಮೂವರು ಸೇರಿ , ಸುಮಳ , ಭಾವನೆಗಳ ಜೊತೆ, ಜೀವನದ ನಿರ್ಧಾರಗಳ ಜೊತೆ ಆಟವಾಡಿದ್ದು. ಎಂದೆಂದಿಗೂ ಮರೆಯಲಾಗದ ನೋವಿನ ನೆನಪಾಗಿ ಉಳಿಯಿತು.ಸುಮಗೆ. ವಿಜಯ್, ಸೌಂದರ್ಯ ನೋಡಿ, ಪ್ರೀತಿಸಿದ ಪ್ರೇಮ ಯಾವತ್ತೂ, ಇವನ ಪ್ರೀತಿಯನ್ನ ಸ್ವೀಕರಿಸಲಿಲ್ಲ. ವಿಜಯ್ ನ ಪ್ರೀತಿ ಫಲಿಸಲಿಲ್ಲ.
ವಿಜಯ್,ಬಯಸಿದ ,ಯ ಪ್ರೇಮಳ, ಪ್ರೀತಿ ಅವನಿಗೂ ದಕ್ಕಲಿಲ್ಲ .ಮುಖದ ಸೌಂದರ್ಯಕ್ಕಿಂತ, ಮನಸಿನ ಸೌಂದರ್ಯ ಮತ್ತು, ಸದ್ದುಗುಣಗಳ, ನಡೆವಳಿಕೆಯ ಸುಮಳ, ನಿಷ್ಕಲ್ಮಶವಾದ, ಯಾವುದೇ ನೀರಿಕ್ಷೆಯಿಲ್ಲದ, ಸುಮಳ ಸ್ನೇಹ, ಪ್ರೀತಿ . ನಂಬಿಕೆ ವಿಶ್ವಾಸ, ವಿಜಯ್, ಮತ್ತು ಶುಭ ,ರಾಜ್ ಗೆ. ಕೊನೆಗೂ ಅರ್ಥವಾಗಲಿಲ್ಲ.
ಸುಮ, ಕಾಲಕಳೆದಂತೆ. ಶುಭಳ ಸ್ನೇಹದಿಂದ, ಕೊಂಚ ದೂರ ಉಳಿಯುತ್ತಾ ಬಂದಳು. ವಿಜಯ್ ನನ್ನು, ಶಾಶ್ವತವಾಗಿ ಮರೆಯಲಾಗಲಿಲ್ಲ. ವಿಜಯ್ ಇದ್ದ ಊರಿನಿಂದ, ಬೇರೆ ಊರಿಗೆ ನೆಮ್ಮದಿಗಾಗಿ ಪಾಲಾಯನ ಮಾಡಿದಳು. ಪ್ರೀತಿ, ಸಫಲವಾಗದೇ ಹೋದಾಗ, ಮುಂದೆ ವಿಧ್ಯಾಭ್ಯಾಸ ಮುಂದುವರೆಸಿ. ವಿಧ್ಯಾಭ್ಯಾಸ ಮುಗಿಸಿ. ಉದ್ಯೋಗಕ್ಕೆ, ಸೇರಿ ತನ್ನ ತಂದೆ ತಾಯಿಗೆ, ನೆರವಾಗಿ . ಸಂತೋಷದಿಂದ ತಂದೆ ತಾಯಿ ಜೊತೆಯಲ್ಲಿ ನೆಮ್ಮದಿಯಾ ಜೀವನ ನಡೆಸಿದಳು.
ಸ್ನೇಹಿತರ, ಸುಳ್ಳಿನಿಂದ, ಹುಟ್ಟಿದ ಸುಮಳ ಪ್ರೀತಿ. ಮೊದಲನೇಯ, ಮತ್ತು ಕೊನೆಯ ಉಸಿರು ಇರುವವರೆಗೂ ಶಾಶ್ವತದ ಎಂದೆಂದೂ ಮರೆಯಲಾಗದ, ಒಂದು ಏಕಮುಖ, ಯಾವ ನೀರಿಕ್ಷೆ ಇಲ್ಲದ ನಿಷ್ಕಲ್ಮಶ ಪ್ರೀತಿ,ಪ್ರೇಮವಾಗಿತ್ತು.
